ಕಾಬೂಲ್‍ನಲ್ಲಿ 7 ಸರಣಿ ಬಾಂಬ್ ಸ್ಫೋಟ – 90ಕ್ಕೂ ಹೆಚ್ಚು ಬಲಿ, 150ಕ್ಕೂ ಹೆಚ್ಚು ಮಂದಿಗೆ ಗಾಯ

ಕಾಬೂಲ್: ತಾಲಿಬಾನ್ ತೆಕ್ಕೆಗೆ ಹೋಗಿರುವ ಆಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ಆತ್ಮಾಹುತಿ ದಾಳಿಗಳಿಂದ ತತ್ತರಿಸಿದೆ. ಭಯೋತ್ಪಾದಕರ ನಗರದಲ್ಲಿನ ಹಮೀದ್ ಕರ್ಜೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗುರುವಾರ ಸಂಜೆಯಿಂದ ಮಧ್ಯರಾತ್ರಿವರೆಗೆ ಸರಣಿ ಬಾಂಬ್ ಸ್ಫೋಟಗಳು ಸಂಭವಿಸಿವೆ.

ಕಾಬೂಲ್ ನಗರದಲ್ಲಿ ಮೂರು ಕಡೆ ಸೇರಿ ಒಟ್ಟು ಏಳು ಕಡೆ ಬಾಂಬ್ ಸ್ಫೋಟ ಸಂಭವಿಸಿದ್ದು, ಈವರೆಗೂ ಮಹಿಳೆಯರು, ಮಕ್ಕಳು ಸೇರಿ 90ಕ್ಕೂ ಹೆಚ್ಚು ಮಂದಿ ಬಲಿ ಆಗಿದ್ದಾರೆ. ಇದರಲ್ಲಿ 13 ಅಮೆರಿಕನ್ ಯೋಧರು ಸೇರಿದ್ದಾರೆ. 150ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚುವ ಸಂಭವ ಇದೆ. ಬಾಂಬ್ ಸ್ಫೋಟ ನಡೆದ ಸ್ಥಳದಲ್ಲಿನ ದೃಶ್ಯಗಳು ಬಲು ಭೀಕರವಾಗಿವೆ. ರಕ್ತದ ಕೋಡಿ ಹರಿದಿದೆ. ಇದನ್ನೂ ಓದಿ: ಕಾಬೂಲ್ ವಿಮಾನ ನಿಲ್ದಾಣದಲ್ಲಿ ಬಾಂಬ್ ಸ್ಫೋಟ – 11 ಮಂದಿ ಸಾವು

ಮೃತರ ದೇಹಗಳು ಛಿದ್ರ-ಛಿದ್ರವಾಗಿವೆ. ಎಲ್ಲೆಲ್ಲೂ ಆಕ್ರಂದನ ಮುಗಿಲುಮುಟ್ಟಿದೆ. ಇದು ತಮ್ಮ ಕೃತ್ಯ ಎಂದು ಐಎಸ್‍ಕೆಪಿ(ISKP) ಹೇಳಿಕೊಂಡಿದೆ. ಇದು ತಾಲಿಬಾನ್ ಮತ್ತು ಅಮೆರಿಕ ಸೇನೆಯನ್ನು ಟಾರ್ಗೆಟ್ ಮಾಡಿಕೊಂಡು ಐಎಸ್‍ಕೆಪಿ ಈ ದಾಳಿ ನಡೆಸಿರೋದು ಸ್ಪಷ್ಟವಾಗಿದೆ. ಸರಣಿ ಸ್ಫೋಟಗಳು ನಡೆಯುವ ಕೆಲವೇ ಗಂಟೆ ಮೊದಲು ಸಂಭಾವ್ಯ ಆತ್ಮಾಹುತಿ ದಾಳಿ ಕುರಿತಂತೆ ಬ್ರಿಟನ್, ಅಮೆರಿಕ, ಆಸ್ಟ್ರೇಲಿಯಾ ಎಚ್ಚರಿಕೆ ನೀಡಿತ್ತು. ಇದನ್ನೂ ಓದಿ: ಕಾಬೂಲ್‍ನಲ್ಲಿ 3 ಸಾವಿರ ರೂ.ಗೆ ಒಂದು ಬಾಟೆಲ್ ನೀರು, ಪ್ಲೇಟ್ ರೈಸ್‍ಗೆ 7,500 ರೂ.

blank

ಅಫ್ಘನ್ ತೊರೆಯಲು ಮುಂದಾದವರ ಮೇಲೆ ಭಯೋತ್ಪಾದಕ ದಾಳಿಗಳು ನಡೆಯುವ ಸಂಭವ ಇದೆ. ಕೂಡಲೇ ಸುರಕ್ಷಿತ ಪ್ರಾಂತ್ಯಗಳಿಗೆ ಜನತೆ ತೆರಳಬೇಕೆಂದು ಎಚ್ಚರಿಕೆ ನೀಡಿತ್ತು. ಆದರೆ ಅಷ್ಟರಲ್ಲೇ ಐಎಸ್‍ಕೆಪಿ ಉಗ್ರರು ಈ ಭಯಾನಕ ದಾಳಿ ನಡೆಸಿದ್ದಾರೆ. ಈ ದಾಳಿಯನ್ನು ತಾಲಿಬಾನ್ ಖಂಡಿಸಿರೋದು ವಿಶೇಷ.  ಇದನ್ನೂ ಓದಿ :ಜರ್ಮನಿಯಲ್ಲಿ ಪಿಜ್ಜಾ ಡೆಲಿವರಿ ಬಾಯ್ ಆದ ಅಫ್ಘಾನ್ ಮಾಜಿ ಸಚಿವ! 

Source: publictv.in Source link