ನೆಟ್ ಪ್ರಾಕ್ಟೀಸ್ ಮಾಡೋದು ಬಿಟ್ಟು ವಾಲಿಬಾಲ್ ಆಡಿದ ಧೋನಿ.!

ನೆಟ್ ಪ್ರಾಕ್ಟೀಸ್ ಮಾಡೋದು ಬಿಟ್ಟು ವಾಲಿಬಾಲ್ ಆಡಿದ ಧೋನಿ.!

ಎರಡನೇ ಹಂತದ ಐಪಿಎಲ್ ಚರಣ ಆರಂಭಕ್ಕೆ ಕೆಲವು ದಿನಗಳಷ್ಟೇ ಬಾಕಿ ಉಳಿದಿದೆ. ಕೊರೊನಾ ಕಾರಣದಿಂದ ರದ್ದಾದ ಕಲರ್ಫುಲ್ ಲೀಗ್ ಅನ್ನು, ಇದೀಗ ಯುಎಇನಲ್ಲಿ ಮರು ಆಯೋಜನೆ ಮಾಡಲಾಗ್ತಿದ್ದು, ಎಲ್ಲಾ ತಂಡಗಳು ಅಂತಿಮ ಹಂತದ ಸಿದ್ಧತೆ ನಡೆಸ್ತಿವೆ. ಈಗಾಗಲೇ ಅರಬ್ಬರ ನಾಡಿನಲ್ಲಿ ಬೀಡುಬಿಟ್ಟಿರುವ ಹಲವು ತಂಡಗಳ ಫೈಕಿ, ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಟಗಾರರು ಭರ್ಜರಿ ಸಮರಾಭ್ಯಾಸ ಆರಂಭಿಸಿದ್ದಾರೆ.

ನೆಟ್ಸ್ ನಲ್ಲಿ ಬೆವರಿಳಿಸುತ್ತಿರುವ ಧೋನಿ ನೇತೃತ್ವದ ತಂಡ, ಚಾಂಪಿಯನ್ ಪಟ್ಟಕ್ಕೇರುವ ಹುಮ್ಮಸ್ಸಿನಲ್ಲಿದೆ. ಅಭ್ಯಾಸದ ಜೊತೆಗೆ ರಿಲ್ಯಾಕ್ಸ್ ಮೂಡ್ನಲ್ಲಿ ಧೋನಿ ಆ್ಯಂಡ್ ಟೀಮ್, ವಾಲಿಬಾಲ್ ಆಡಿ ಗಮನ ಸೆಳೆದಿದ್ದಾರೆ. ಬೀಚ್ ಪಕ್ಕದಲ್ಲಿನ ಮರಳಿನಲ್ಲಿ ವಾಲಿಬಾಲ್ ಆಡಿರುವ ಧೋನಿ ಆ್ಯಂಡ್ ಟೀಮ್, ಸಖತ್ ಎಂಜಾಯ್ ಮಾಡಿದ್ದಾರೆ. ಋತುರಾಜ್ ಗಾಯಕ್ವಾಡ್ ಸೇರಿದಂತೆ ಫ್ರಾಂಚೈಸಿ ಸಿಬ್ಬಂದಿ ಕೂಡ ವಾಲಿಬಾಲ್ ಆಡಿದ್ರು. ಇದನ್ನು ಸಿಎಸ್ಕೆ ಇನ್ಸ್ಟಾಗ್ರಾಮ್ನಲ್ಲಿ ಫೋಸ್ಟ್ ಮಾಡಿದೆ.

 

View this post on Instagram

 

A post shared by Chennai Super Kings (@chennaiipl)

Source: newsfirstlive.com Source link