ಭಯೋತ್ಪಾದಕರ ವಿರುದ್ಧ ಎಲ್ಲ ದೇಶಗಳೂ ಒಟ್ಟಾಗಿ ಹೋರಾಡಬೇಕಿದೆ- ಕೇಂದ್ರ

ಭಯೋತ್ಪಾದಕರ ವಿರುದ್ಧ ಎಲ್ಲ ದೇಶಗಳೂ ಒಟ್ಟಾಗಿ ಹೋರಾಡಬೇಕಿದೆ- ಕೇಂದ್ರ

ಕಾಬೂಲ್​ನಲ್ಲಿ ನಡೆದ ಸರಣಿ ಬಾಂಬ್ ಸ್ಫೋಟದಲ್ಲಿ ಅಮೆರಿಕ ಸೈನಿಕರು ಸೇರಿದಂತೆ ಒಟ್ಟು 73 ಮಂದಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಈ ಸರಣಿ ಬಾಂಬ್ ಸ್ಫೋಟದ ದುಷ್ಕೃತ್ಯದ ಬಗ್ಗೆ ಕೇಂದ್ರ ಸರ್ಕಾರದ ವಿದೇಶಾಂಗ ಇಲಾಖೆ ಪ್ರತಿಕ್ರಿಯೆ ನೀಡಿ.. ಜಗತ್ತು ಒಗ್ಗಟ್ಟಾಗಿ ಭಯೋತ್ಪಾದಕತೆಯನ್ನು ನಿಗ್ರಹಿಸಬೇಕಿದೆ ಎಂದು ಹೇಳಿದೆ.

ಇದನ್ನೂ ಓದಿ: ಅಫ್ಘಾನ್ ಸರಣಿ ಬಾಂಬ್ ಸ್ಫೋಟ; 13 ಯುಎಸ್​ ಸೈನಿಕರು ಸೇರಿ ಒಟ್ಟು 73 ಕ್ಕೇರಿದ ಸಾವಿನ ಸಂಖ್ಯೆ

ಭಾರತ ಸರ್ಕಾರ ಕಾಬೂಲ್​ನಲ್ಲಿ ನಡೆದ ಬಾಂಬ್ ಬ್ಲಾಸ್ಟ್ ಘಟನೆಯನ್ನು ಬಲವಾಗಿ ಖಂಡಿಸುತ್ತದೆ. ಈ ಘಟನೆಯಲ್ಲಿ ಸಾವನ್ನಪ್ಪಿದವರ ಕುಟುಂಬಗಳಿಗೆ ಭಾರತ ಸರ್ಕಾರ ಸಂತಾಪಗಳನ್ನು ಸೂಚಿಸುತ್ತದೆ. ಇಂದಿನ ದಾಳಿ ಎಲ್ಲ ದೇಶಗಳು ಒಟ್ಟಾಗಿ ಭಯೋತ್ಪಾದಕತೆಯನ್ನು ಮಟ್ಟಹಾಕಬೇಕಾದ ಅನಿವಾರ್ಯತೆಯನ್ನು ಬಲಪಡಿಸಿದೆ. ಅಲ್ಲದೇ ಭಯೋತ್ಪಾದಕರಿಗೆ ಬೆಂಬಲ, ಸೌಲಭ್ಯ ನೀಡುವವರನ್ನೂ ಮಟ್ಟ ಹಾಕಬೇಕಿದೆ ಎಂದು ಹೇಳಿದೆ.

ಇದನ್ನೂ ಓದಿ: ‘ನೀವು ಎಲ್ಲಿದ್ದರೂ ಹುಡುಕಿ ಹೊಡೆಯುತ್ತೇವೆ.. ಬೆಲೆ ತೆತ್ತುವಂತೆ ಮಾಡ್ತೇವೆ’- ಉಗ್ರರಿಗೆ ಅಮೆರಿಕ ವಾರ್ನಿಂಗ್

ಇನ್ನು ಅಮೆರಿಕ ಕೂಡ ಬಾಂಬ್ ಬ್ಲಾಸ್ಟ್ ಬಗ್ಗೆ ಪ್ರತಿಕ್ರಿಯೆ ನೀಡಿದ್ದು.. ನಮ್ಮ ಸೈನಿಕರ ಸಾವಿಗೆ ಕಾರಣವಾದ ಈ ಕೃತ್ಯದ ಹಿಂದಿನ ಉಗ್ರರ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳುತ್ತೇವೆ ಎಂದು ಹೇಳಿದೆ.

Source: newsfirstlive.com Source link