ಶಿವಮೊಗ್ಗ ಜಿಲ್ಲಾ ಪ್ರವಾಸ ಕೈಗೊಂಡ ಬಿಎಸ್​ವೈ.. ಈ ಹೊತ್ತಿನ ಟಾಪ್ 10 ಸುದ್ದಿಗಳ ಕ್ವಿಕ್ ರೌಂಡ್​ಅಪ್

ಶಿವಮೊಗ್ಗ ಜಿಲ್ಲಾ ಪ್ರವಾಸ ಕೈಗೊಂಡ ಬಿಎಸ್​ವೈ.. ಈ ಹೊತ್ತಿನ ಟಾಪ್ 10 ಸುದ್ದಿಗಳ ಕ್ವಿಕ್ ರೌಂಡ್​ಅಪ್

01. ಆ ಟವಲ್ ಮಹತ್ವದ ಸುಳಿವಾಗುತ್ತಾ?

blankಮೈಸೂರು ವಿದ್ಯಾರ್ಥಿನಿ ಮೇಲೆ ಗ್ಯಾಂಗ್ ರೇಪ್ ಪ್ರಕರಣ ಸಂಬಂಧ ಘಟನಾ ಸ್ಥಳದಲ್ಲಿ ಪೊಲೀಸರಿಗೆ ಮಹತ್ವದ ಸುಳಿವು ಸಿಕ್ಕಿದೆ. ಅತ್ಯಾಚಾರ ನಡೆದ ಸ್ಥಳದಲ್ಲಿ ಆರೋಪಿಗಳ ಟವೆಲ್​ ಪತ್ತೆಯಾಗಿದೆ. ಹೀಗಾಗಿ ವಿದ್ಯಾರ್ಥಿನಿಯ ಮೇಲೆ ಹೇಯ ಕೃತ್ಯವೆಸಗಿದ ಆರೋಪಿಗಳನ್ನ ಪತ್ತೆ ಹಚ್ಚಲು ಟವೆಲ್‌ ಪ್ರಮುಖ ಪಾತ್ರ ವಹಿಸಲಿದ್ಯಾ ಎಂಬ ಕೌತುಕ ಶುರುವಾಗಿದೆ. ಇನ್ನು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಂತ್ರಸ್ತೆ, ಚೇತರಿಕೆಯಾದ್ರೆ ಟವಲ್ ಜಾಡು ಹಿಡಿದು ತನಿಖೆ ಶುರು ಮಾಡುವ ಸಾಧ್ಯತೆಯಿದೆ.

02. ‘ಖಾತೆ ಭರ್ತಿ, ಖಾತೆ ಕ್ಯಾತೆ ಬಗ್ಗೆ ಚರ್ಚೆಯಾಗಿಲ್ಲ’

blankದೆಹಲಿಯಿಂದ ನಿನ್ನೆ ರಾತ್ರಿ ಸಿಎಂ ಬಸವರಾಜ್‌ ಬೊಮ್ಮಾಯಿ ವಾಪಸ್ ಆಗಿದ್ದಾರೆ. ಇನ್ನು, ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್‌ಸಿಂಗ್‌ರನ್ನು ಭೇಟಿ ಮಾಡಿ ರಾಜ್ಯದಲ್ಲಾಗುತ್ತಿರುವ ಪ್ರಸಕ್ತ ರಾಜಕೀಯ ಬೆಳವಣಿಗೆ ಬಗ್ಗೆ ಚರ್ಚೆ ಮಾಡಿದ್ದೇನೆ ಅಂತ ಸಿಎಂ ಮಾಹಿತಿ ನೀಡಿದ್ದಾರೆ. ಜೊತೆಗೆ ಯಾವುದೇ ಖಾತೆ ಭರ್ತಿ ವಿಚಾರವಾಗಲಿ, ಖಾತೆ ಕ್ಯಾತೆಯ ವಿಚಾರದ ಬಗ್ಗೆಯೂ ಚರ್ಚೆಯಾಗಿಲ್ಲ ಅಂತ ಸಿಎಂ ಬೊಮ್ಮಾಯಿ ಸ್ಪಷ್ಟನೆ ನೀಡಿದ್ದಾರೆ.

03. ಇಂದು ಚಿಕ್ಕಬಳ್ಳಾಪುರಕ್ಕೆ ಸಿಎಂ ಭೇಟಿ

blankದೆಹಲಿಯಿಂದ ನಿನ್ನೆ ರಾತ್ರಿ ವಾಪಸ್ ಆಗಿರೋ ಸಿಎಂ ಬಸವರಾಜ್‌ ಬೊಮ್ಮಾಯಿ ಇವತ್ತು ಚಿಕ್ಕಬಳ್ಳಾಪುರ ಜಿಲ್ಲೆಗೆ ಭೇಟಿ ನೀಡಲಿದ್ದಾರೆ. ಸಿಎಂ ಆದ ನಂತರ ಮೊದಲ ಬಾರಿಗೆ ಜಿಲ್ಲೆಗೆ ಬೊಮ್ಮಾಯಿ ಭೇಟಿ ನೀಡಲಿದ್ದಾರೆ. ಜಿಲ್ಲೆಯ ಮುದ್ದೇನಹಳ್ಳಿಯಲ್ಲಿ ನಿರ್ಮಾಣವಾಗಿರುವ ಸತ್ಯಸಾಯಿ ಸರಳ ಸ್ಮಾರಕ ಆಸ್ಪತ್ರೆ ಉದ್ಘಾಟಿಸಲಿದ್ದಾರೆ. ಇದಕ್ಕೂ ಮುನ್ನಾ ಸರ್‌ ಎಂ.ವಿಶ್ವೇಶ್ವರ ಸಮಾಧಿಗೆ ಭೇಟಿ ನೀಡಲಿದ್ದಾರೆ. ಆ ಬಳಿಕ ಪ್ರಶಾಂತಿ ಬಾಲಮಂದಿರ ಟ್ರಸ್ಟ್‌ನಿಂದ ನಿರ್ಮಿಸಿರುವ ಖಾಸಗಿ ಆಸ್ಪತ್ರೆಯನ್ನ ಉದ್ಘಾಟಿಸಲಿದ್ದಾರೆ. ಇನ್ನು ಈ ಕಾರ್ಯಕ್ರಮಕ್ಕೆ ಆರೋಗ್ಯ ಸಚಿವರು ಕೂಡ ಆಗಮಿಸಲಿದ್ದಾರೆ.

04. ಶಿವಮೊಗ್ಗ ಜಿಲ್ಲಾ ಪ್ರವಾಸ ಕೈಗೊಂಡ ಬಿಎಸ್​ವೈ

blankಇಂದಿನಿಂದ ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಶಿವಮೊಗ್ಗ ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ. ಇಂದಿನಿಂದ ನಾಲ್ಕು ದಿನಗಳ ಕಾಲ ಜಿಲ್ಲಾ ಪ್ರವಾಸ ಕೈಗೊಂಡಿರುವ ಬಿಎಸ್‌ ಯಡಿಯೂರಪ್ಪ, ರಸ್ತೆ ಮಾರ್ಗವಾಗಿ ಶಿವಮೊಗ್ಗ ಜಿಲ್ಲೆಗೆ ಪ್ರಯಾಣ ಬೆಳೆಸಲಿದ್ದಾರೆ. ಸಂಜೆ ರಸ್ತೆ ಮಾರ್ಗವಾಗಿ ತವರು ಜಿಲ್ಲೆ ಶಿವಮೊಗ್ಗ ಜಿಲ್ಲೆಗೆ ಹೊರಡಲಿದ್ದು, ರಾತ್ರಿ ತಮ್ಮ ನಿವಾಸದಲ್ಲಿಯೇ ವಾಸ್ತವ್ಯ ಹೂಡಲಿದ್ದಾರೆ, ನಾಳೆ ಸ್ಥಳೀಯ ಕಾರ್ಯಕ್ರಮಗಳಲ್ಲಿ ಬಿಎಸ್‌ವೈ ಭಾಗಿಯಾಗಲಿದ್ದಾರೆ,, ಮತ್ತೆ ತಮ್ಮ ನಿವಾಸದಲ್ಲಿಯೇ ವಾಸ್ತವ್ಯ ಹೂಡಲಿದ್ದು, ಆ ನಂತರದ ಎರಡು ದಿನಗಳು ಶಿಕಾರಿಪುರದಲ್ಲಿ ನಡೆಯಲಿರುವ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ..

05. ಸರಣಿ ಸ್ಫೋಟಕ್ಕೆ 73 ಮಂದಿ ಬಲಿ

blank
ಸರಣಿ ಸ್ಫೋಟಕ್ಕೆ ಕಾಬೂಲ್​ ನಗರ ಸಾಕ್ಷಿಯಾಗಿದೆ. ಇಲ್ಲಿಯವರೆಗೂ ಒಟ್ಟು 6 ಕಡೆ ಬಾಂಬ್​ ಸ್ಫೋಟಗೊಂಡಿದೆ. ಈ ಭೀಕರ ದಾಳಿಯಲ್ಲಿ ಒಟ್ಟು 60ಕ್ಕೂ ಹೆಚ್ಚು ಅಫ್ಘಾನಿಸ್ತಾನ್ ಜನ ಮೃತಪಟ್ಟಿದ್ರೆ, 130ಕ್ಕೂ ಹೆಚ್ಚು ಜನರು ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ಅಧಿಕೃತ ಮಾಹಿತಿ ಲಭ್ಯವಾಗಿದೆ. ಇನ್ನು 300ಕ್ಕೂ ಅಧಿಕ ಮಂದಿ ಸರಣಿ ಸ್ಫೋಟದಲ್ಲಿ ಮೃತರಾಗಿದ್ದಾರೆ ಅಂತಾ ಅಫ್ಘಾನ್​ನಲ್ಲಿನ ಕೆಲವು ಮಾಧ್ಯಮಗಳು ವರದಿ ಮಾಡಿವೆ. ಅಲ್ಲದೇ ಅಮೆರಿಕಾ ಸೇನೆಯ ಒಟ್ಟು 13 ಸೈನಿಕರು ಈ ಭೀಬತ್ಸ ಸ್ಫೋಟದಲ್ಲಿ ಜೀವ ತೆತ್ತಿದ್ದಾರೆ. ಇನ್ನು, 15 ಮಂದಿ ಯುಎಸ್ ಯೋಧರು ಗಂಭೀರವಾಗಿ ಗಾಯಗೊಂಡಿದ್ದಾರೆ.

06. ‘ದೊಡ್ಡಣ್ಣ’ನ ವಾರ್ನಿಂಗ್

blankಇನ್ನು ಈ ಕಾಬೂಲ್ ಏರ್​ಪೋರ್ಟ್​ನಲ್ಲಿ​ ನಡೆದ ಬಾಂಬ್​ ಸ್ಫೋಟವನ್ನು ಅಮೆರಿಕಾ ತೀವ್ರವಾಗಿ ಖಂಡಿಸಿದೆ. ಅಮೆರಿಕ ಅಧ್ಯಕ್ಷ ಜೋ ಬೈಡನ್​ ಘಟನೆ ಹಿಂದಿರೋರಿಗೆ ತಕ್ಕ ಪಾಠ ಕಲಿಸೋದಾಗಿ ಎಚ್ಚರಿಕೆ ನೀಡಿದ್ದಾರೆ. ಕೃತ್ಯ ಎಸಗಿದವರಿಗೆ ನಾವು ತಕ್ಕ ಪಾಠ ಕಲಿಸುತ್ತೇವೆ ನಾವು ಸುಮ್ಮನಿರಲ್ಲ. ಹುಡುಕಿ, ತಕ್ಕ ಉತ್ತರ ನೀಡುತ್ತೇವೆ ಅಂತಾ ಅಮೆರಿಕಾ ಅಧ್ಯಕ್ಷ ಜೋ ಬೈಡನ್ ಎಚ್ಚರಿಕೆ ನೀಡಿದ್ದಾರೆದಾಳಿಯಲ್ಲಿ ಮರಣರಾದ ಅಮೆರಿಕ ಸೈನಿಕರು ವೀರರು ಅಂತಾ ಬೈಡನ್ ಹೇಳಿದ್ದಾರೆ.

07. ವಿಡಿಯೋದಲ್ಲಿ ರಿವಾಲ್ವರ್​ ತೋರಿಸಿ ವಿವಾದ ಸೃಷ್ಟಿ
ಕರ್ತವ್ಯದಲ್ಲಿ ನಿರತರಾಗಿದ್ದ ಮಹಿಳಾ ಕಾನ್‌ಸ್ಟೇಬಲ್​ ಒಬ್ಬರು ಇನ್‌ಸ್ಟಾಗ್ರಾಂ ವಿಡಿಯೊವೊಂದರಲ್ಲಿ ರಿವಾಲ್ವಾರ್​ ತೋರಿಸಿ ವಿವಾದಕ್ಕೊಳಗಾಗಿದ್ದಾರೆ. ಮಹಿಳಾ ಕಾನ್‌ಸ್ಟೇಬಲ್ ಪ್ರಿಯಾಂಕಾ ಮಿಶ್ರಾ ಎಂಬವರು ಇನ್‌ಸ್ಟಾಗ್ರಾಂ ವಿಡಿಯೊದಲ್ಲಿ ರಂಗ್‌ಭಾಜಿ ಡೈಲಾಗ್‌ಗೆ ಲಿಪ್ ಸಿಂಕ್ ಮಾಡಿ ರಿವಾಲ್ವರ್ ಪ್ರದರ್ಶಿಸಿದ್ದಾರೆ. ಹರಿಯಾಣ ಹಾಗೂ ಪಂಜಾಬ್ ಕೆಟ್ಟ ಹೆಸರು ಹೊಂದಿದ್ದು ಉತ್ತರ ಪ್ರದೇಶಕ್ಕೆ ಬನ್ನಿ ರಂಗ್‌ಭಾಜಿ ಏನೆಂದು ತೋರಿಸುತ್ತೇವೆ ಎಂಬ ಡೈಲಾಗ್‌ಗೆ ರಿವಾಲ್ವರ್ ಪ್ರದರ್ಶಿಸುತ್ತಾ ಲಿಪ್ ಸಿಂಕ್ ಮಾಡಿದ್ದಾರೆ. ಈ ಕುರಿತು ಉತ್ತರ ಪ್ರದೇಶ ಪೊಲೀಸರು ತನಿಖೆಗೆ ಆದೇಶ ಹೊರಡಿಸಿದ್ದಾರೆ. ಇನ್ನು ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿದ್ದು, ವಿವಾದಕ್ಕೀಡಾಗಿದೆ.

08. ಜೈಲಿನಲ್ಲಿ ಆರೋಪಿಗಳ ಮೋಜು-ಮಸ್ತಿ
ಗ್ಯಾಂಗ್‌ಸ್ಟರ್‌ ನೀರಜ್ ಬವಾನಾ ಎಂಬಾತನನ್ನು ದೆಹಲಿಯ ಜೈಲೊಂದರಲ್ಲಿ ಬಂಧಿಸಲಾಗಿತ್ತು. ಆರೋಪಿಯೊಂದಿಗೆ ಆತನ ಸಹೋದರರಾದ ರಾಹುಲ್ ಕಲಾ ಮತ್ತು ನವೀನ್ ಬಾಲಿನನ್ನು ಕೂಡ ಬಂಧಿಸಲಾಗಿತ್ತು. ಆರೋಪಿಗಳು ಲಾಕಪ್​ನಲ್ಲಿ ಗುಂಡು-ತುಂಡು ತಿಂದು ಮೋಜು-ಮಸ್ತಿ ಮಾಡಿದ್ದಾರೆ. ಈ ದೃಶ್ಯಗಳು ಜಾಲತಾಣದಲ್ಲಿ ವೈರಲ್ ಆಗಿದೆ. ಆರೋಪಿಗಳು ಫೋನ್‌ನಲ್ಲಿ ಮಾತನಾಡುವುದು ಮತ್ತು ಧೂಮಪಾನ ಮಾಡೋ ದೃಶ್ಯಗಳೂ ಇವೆ. ಇವರೀಗ ಸದ್ಯ ಪೊಲೀಸ್‌ ರಿಮಾಂಡ್‌ನಲ್ಲಿದ್ದಾರೆ, ಇದಕ್ಕೂ ಮೊದಲು ಇವರನ್ನು ಮಾಂಡೋಲಿ ಜೈಲಿನಲ್ಲಿ ಇರಿಸಲಾಗಿತ್ತು. ಇವೆರಡು ಜೈಲುಗಳ ಪೈಕಿ ಯಾವ ಜೈಲಿನಲ್ಲಿ ಇಂಥಹ ಸೌಲಭ್ಯಗಳನ್ನು ಇವರಿಗೆ ನೀಡಲಾಗಿದೆ ಎಂಬುದು ಖಚಿತವಾಗಿಲ್ಲ. ಈ ಬಗ್ಗೆ ತನಿಖೆ ನಡೆಯುತ್ತಿದೆ.

09. ಆಂಗ್ಲರ ಆರ್ಭಟ.. ಬೃಹತ್ ಮುನ್ನಡೆ
ಹೆಡ್ಡಿಂಗ್ಲಿ​​ನಲ್ಲಿ ಟೀಮ್ ಇಂಡಿಯಾ ಹಾಗೂ ಇಂಗ್ಲೆಂಡ್ ನಡುವೆ ನಡೆಯುತ್ತಿರುವ ಮೂರನೇ ಟೆಸ್ಟ್​ ಪಂದ್ಯದ ಎರಡನೇ ದಿನವೂ ಆಂಗ್ಲರ ಪಾರುಪತ್ಯ ಮುಂದುವರಿದಿದೆ. ಜೋ​ ರೂಟ್ ಆಕರ್ಶಕ ಶತಕದ ನೆರವಿನಿಂದ ಇಂಗ್ಲೆಂಡ್​ ರನ್​ಗಳ ಬೃಹತ್ ಬೆಟ್ಟವನ್ನೇ ನಿರ್ಮಿಸಿದೆ. ಜೋ​ ರೂಟ್ ಸೆಂಚುರಿ ಜೊತೆಗೆ ರೋರಿ ಬರ್ನ್ಸ್, ಹಸೀಬ್ ಹಮೀದ್ ಹಾಗೂ ಡೇವಿಡ್​ ಮಲನ್​ರ ಅರ್ಧಶತಕದ ಸಹಾಯದಿಂದ ಇಂಗ್ಲೆಂಡ್​ ತಂಡ 8 ವಿಕೆಟ್​ ನಷ್ಟಕ್ಕೆ ಆಟ ಇಂದಿಗೆ ಕಾಯ್ದಿರಿಸಿದೆ. ಟೀಮ್ ಇಂಡಿಯಾ ಪರ ಮಹಮದ್ ಶಮಿ ಮೂರು ವಿಕೆಟ್​ ಪಡೆದ್ರೆ, ಮಹಮದ್ ಸಿರಾಜ್ ಹಾಗೂ ರವೀಂದ್ರ ಜಡೇಜಾ ತಲಾ 2 ವಿಕೆಟ್​ ಪಡೆದುಕೊಂಡಿದ್ದಾರೆ. ಇನ್ನು, ಜಸ್ಪ್ರಿತ್ ಬೂಮ್ರಾ ಒಂದು ವಿಕೆಟ್ ಕಬಳಿಸಿದ್ದಾರೆ. ಎರಡನೇ ದಿನದಾಟದ ಅಂತ್ಯಕ್ಕೆ ಇಂಗ್ಲೆಂಡ್​ 345ರನ್​ಗಳನ್ನ ಪೇರಿಸಿದೆ. ಹೀಗಾಗಿ ಇಂದು ಕೊಹ್ಲಿ ಬಳಗಕ್ಕೆ ಕಠಿಣ ಸವಾಲು ಎದುರಾಗಲಿದೆ.

10. ವಾಲಿಬಾಲ್​ ಆಟವಾಡಿದ ಧೋನಿ ಬಳಗ
ಎರಡನೇ ಹಂತದ ಐಪಿಎಲ್ ಆರಂಭಕ್ಕೆ ಕೆಲವು ದಿನಗಳಷ್ಟೆ ಬಾಕಿ ಉಳಿದಿದೆ. ಈಗಾಗಲೇ ಅರಬ್ಬರ ನಾಡಿನಲ್ಲಿ ಬೀಡುಬಿಟ್ಟಿರುವ ಹಲವು ತಂಡಗಳ ಫೈಕಿ, ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಟಗಾರರು ಭರ್ಜರಿ ಸಮರಾಭ್ಯಾಸ ಆರಂಭಿಸಿದ್ದಾರೆ. ನೆಟ್ಸ್​ನಲ್ಲಿ ಬೆವರಿಳಿಸುತ್ತಿರುವ ಧೋನಿ ನೇತೃತ್ವದ ತಂಡ, ಚಾಂಪಿಯನ್ ಪಟ್ಟಕ್ಕೇರುವ ಹುಮ್ಮಸ್ಸಿನಲ್ಲಿದೆ. ಅಭ್ಯಾಸದ ಜೊತೆಗೆ ರಿಲ್ಯಾಕ್ಸ್ ಮೂಡ್ನಲ್ಲಿ ಧೋನಿ ಆ್ಯಂಡ್ ಟೀಮ್, ವಾಲಿಬಾಲ್ ಆಡಿ ಗಮನ ಸೆಳೆದಿದ್ದಾರೆ. ಬೀಚ್ ಪಕ್ಕದಲ್ಲಿನ ಮರಳಿನಲ್ಲಿ ವಾಲಿಬಾಲ್ ಆಡಿರುವ ಧೋನಿ ಆ್ಯಂಡ್ ಟೀಮ್, ಸಖತ್ ಎಂಜಾಯ್ ಮಾಡಿದ್ದಾರೆ.

Source: newsfirstlive.com Source link