ಕಾಬೂಲ್ ಏರ್​ಪೋರ್ಟ್​ನಲ್ಲಿ ಉಗ್ರರ ಅಟ್ಟಹಾಸ;​ 103 ಕ್ಕೇರಿದ ಸಾವಿನ ಸಂಖ್ಯೆ

ಕಾಬೂಲ್ ಏರ್​ಪೋರ್ಟ್​ನಲ್ಲಿ ಉಗ್ರರ ಅಟ್ಟಹಾಸ;​ 103 ಕ್ಕೇರಿದ ಸಾವಿನ ಸಂಖ್ಯೆ

ಕಾಬೂಲ್ ಏರ್​ಪೋರ್ಟ್​ನಲ್ಲಿ ನಡೆದ ಸರಣಿ ಬಾಂಬ್ ಸ್ಫೋಟದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಏರಿಕೆಯಾಗುತ್ತಲೇ ಇದ್ದು ಈವರೆಗೆ ಒಟ್ಟು 103 ಮಂದಿ ಸಾವನ್ನಪ್ಪಿದ್ದಾರೆಂದು ಅಂತಾರಾಷ್ಟ್ರೀಯ ಪತ್ರಿಕೆ ವಾಲ್ ಸ್ಟ್ರೀಟ್ ಜರ್ನಲ್ ಹೇಳಿದೆ.

ಸಾವನ್ನಪ್ಪಿದವರ ಪೈಕಿ 13 ಅಮೆರಿಕನ್ ಸೈನಿಕರು ಹಾಗೂ 90 ಮಂದಿ ಆಫ್ಘನ್ ಪ್ರಜೆಗಳು ಎನ್ನಲಾಗಿದೆ. ಕಾಬೂಲ್ ಏರ್​ಪೋರ್ಟ್​ನ ಅಬ್ಬೆ ಗೇಟ್ ಬಳಿ ಸೂಸೈಡ್ ಬಾಂಬ್ ದಾಳಿ ನಡೆಸಿದ ವ್ಯಕ್ತಿ ಕೈನಲ್ಲಿ ಬಂದೂಕು ಹಿಡಿದಿದ್ದ ಎಂಬ ಮಾಹಿತಿ ಲಭ್ಯವಾಗಿದೆ. ನಂತರ ಏರ್​ಪೋರ್ಟ್ ಹತ್ತಿರ ಹೋಟೆಲ್ ಒಂದರಲ್ಲೂ ಬಾಂಬ್ ಸ್ಫೋಟಗೊಂಡಿದೆ.

ಇದನ್ನೂ ಓದಿ: ‘ನೀವು ಎಲ್ಲಿದ್ದರೂ ಹುಡುಕಿ ಹೊಡೆಯುತ್ತೇವೆ.. ಬೆಲೆ ತೆತ್ತುವಂತೆ ಮಾಡ್ತೇವೆ’- ಉಗ್ರರಿಗೆ ಅಮೆರಿಕ ವಾರ್ನಿಂಗ್

ಇನ್ನು ಕಳೆದ ರಾತ್ರಿ ಅಲ್ಲಲ್ಲಿ ಸ್ಫೋಟದ ಸದ್ದುಗಳು ಕೇಳಿಬಂದವೆಂಬ ವರದಿಯಾಗಿದೆ. ಸದ್ಯ 130ಕ್ಕೂ ಹೆಚ್ಚು ಮಂದಿ ಘಟನೆಯಲ್ಲಿ ಗಾಯಗೊಂಡಿದ್ದು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಸ್ಫೋಟದ ಬೆನ್ನಲ್ಲೇ ಏರ್​ಪೋರ್ಟ್​ನಿಂದ ತಮ್ಮ ದೇಶದ ಪ್ರಜೆಗಳನ್ನು ವಾಪಸ್ ಕರೆಸಿಕೊಳ್ಳುತ್ತಿದ್ದ ಬಹುತೇಕ ದೇಶಗಳು ತಮ್ಮ ಕಾರ್ಯಾಚರಣೆಯನ್ನ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿವೆ. ಕಾಬೂಲ್​ನಲ್ಲೇ ಉಳಿದುಕೊಂಡಿದ್ದ ಕೆಲವು ರಾಯಭಾರಿ ಕಚೇರಿಗಳ ಅಧಿಕಾರಿಗಳು ತಮ್ಮ ದೇಶಗಳಿಗೆ ವಾಪಸ್ಸಾಗ್ತಿದ್ದಾರೆ ಎನ್ನಲಾಗಿದೆ.

Source: newsfirstlive.com Source link