ಸಾಮೂಹಿಕ ಅತ್ಯಾಚಾರ ಕೇಸ್: ‘ಆರೋಪಿಗಳು ಪತ್ತೆಯಾಗ್ತಾರೆ.. ಕಾಲಾವಕಾಶ ಬೇಕಷ್ಟೇ’ ಎಂದ ಆರಗ ಜ್ಞಾನೇಂದ್ರ

ಸಾಮೂಹಿಕ ಅತ್ಯಾಚಾರ ಕೇಸ್: ‘ಆರೋಪಿಗಳು ಪತ್ತೆಯಾಗ್ತಾರೆ.. ಕಾಲಾವಕಾಶ ಬೇಕಷ್ಟೇ’ ಎಂದ ಆರಗ ಜ್ಞಾನೇಂದ್ರ

ಮೈಸೂರು: ರಾಜ್ಯ ಗೃಹ ಸಚಿವರಾದ ಆರಗ ಜ್ಞಾನೇಂದ್ರ ಇಂದು ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ಚಾಮುಂಡಿ ದೇವಿಯ ಆಶೀರ್ವಾದ ಪಡೆದುಕೊಂಡರು.

ನಂತರ ಮಾಧ್ಯಮಗಳಿಗೆ ವಿದ್ಯಾರ್ಥಿನಿಯ ಮೇಲಿನ ಸಾಮೂಹಿಕ ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿ.. ಚಾಮುಂಡಿ ತಾಯಿ ಹತ್ರ ಬೇಡಿದ್ದೇನೆ.. ಎಲ್ಲರ ಮನಸ್ಸಿಗೂ ಒಳ್ಳೆಯ ಭಾವನೆ ಕೊಡ್ಲಿ.. ಬಂದಂಥ ಸಂದಿಗ್ಧತೆಗಳನ್ನ ಪರಿಹಾರ ಮಾಡುವ ಶಕ್ತಿಯನ್ನ ನಮಗೆ ಪೊಲೀಸರಿಗೆ ಕೊಡಲಿ, ಸರ್ಕಾರಕ್ಕೂ ಒಳ್ಳೇದಾಗಲಿ ಅಂತ ಬೇಡಿಕೊಂಡಿದ್ದೇನೆ.

ಇದನ್ನೂ ಓದಿ: ಕಾಂಗ್ರೆಸ್​ನವರು ನನ್ನ ರೇ** ಮಾಡೋಕೆ ಪ್ರಯತ್ನಿಸ್ತಿದ್ದಾರೆ -ಗೃಹ ಸಚಿವ ಆರಗ ಜ್ಞಾನೇಂದ್ರ

ಪ್ರಕರಣದ ತನಿಖೆಯಾಗ್ತಾ ಇದೆ.. ಯಾವ ಹಂತದಲ್ಲಿ ಇದೆ ಅಂತ ಹೇಳೋದಿಲ್ಲ.. ಖಂಡಿತ ಪೊಲೀಸರು ಆರೋಪಿಗಳನ್ನ ಹಿಡಿಯುತ್ತಾರೆಂಬ ಭಾವನೆ ಇದೆ. ಆರೋಪಿಗಳು ಪತ್ತೆಯಾಗ್ತಾರೆ.. ಅದಕ್ಕೆ ಕಾಲಾವಕಾಶ ಬೇಕಾಗುತ್ತದೆ ಎಂದು ಹೇಳಿದ್ದಾರೆ. ಇನ್ನು ಪ್ರಕರಣದ ಬಗ್ಗೆ ನಾನೇನೂ ಹೇಳೋದಿಲ್ಲ.. ಅದರಿಂದ ತನಿಖೆಗೆ ತೊಂದರೆಯಾಗುತ್ತದೆ ಎಂದಿದ್ದಾರೆ.

ಇದನ್ನೂ ಓದಿ: ಸಿದ್ದರಾಮಯ್ಯ, ರೇವಣ್ಣ, ನಾನು.. ಯಾರೇ ಗೃಹಸಚಿವರನ್ನ ರೇ** ಮಾಡಿದ್ರೆ ಕೇಸ್ ಹಾಕಲಿ- ಡಿಕೆಎಸ್​ ಲೇವಡಿ

Source: newsfirstlive.com Source link