ಕಾಬೂಲ್ ದಾಳಿಯ ಹೊಣೆ ಹೊತ್ತ ಐಎಸ್‍ಕೆಪಿ ಸಂಘಟನೆ

ಕಾಬೂಲ್: ಅಘ್ಘಾನಿಸ್ತಾನದಲ್ಲಿ ನೆತ್ತರಕೋಡಿ ಹರಿಸಿದ್ದು ನಾವೇ ಎಂದು ಇಸ್ಲಾಮಿಕ್ ಸ್ಟೇಟ್ ಐಎಸ್‍ಕೆಪಿ ಸಂಘಟನೆ ದಾಳಿಯ ಹೊಣೆ ಹೊತ್ತುಕೊಂಡಿದೆ.

ಅಮೆರಿಕ ನೇತೃತ್ವದಲ್ಲಿ ಸೇನಾ ಪಡೆಗಳ ಹಿಂತೆಗೆತ ಕಾರ್ಯಾಚರಣೆ ವೇಳೆ ಅಘ್ಘಾನಿಸ್ತಾನದಲ್ಲಿ ಏಳು ಸರಣಿ ಬಾಂಬ್ ಸ್ಫೋಟ ಸಂಭವಿಸಿತ್ತು. ಬಳಿಕ ರಾತ್ರಿಯಿಡಿ ನೆತ್ತರು ಹರಿಸಿದ ಪಾಪಿಗಳು ನಾವು ಎಲ್ಲಾ ಭದ್ರತಾ ತಡೆಗೋಡೆಗಳನ್ನೂ ದಾಟಿ ಅಮೆರಿಕ ಭದ್ರತಾ ಪಡೆಗಳಿರುವ ಪ್ರದೇಶಕ್ಕಿಂತ 16 ಅಡಿ ದೂರದಲ್ಲಿ ಆತ್ಮಾಹುತಿ ಬಾಂಬ್ ದಾಳಿ ನಡೆಸುವುದಕ್ಕೆ ಒಬ್ಬ ಬಾಂಬರ್‍ನಿಂದ ಸಾಧ್ಯವಾಗಿದೆ ಎಂದು ದಾಳಿಯ ಹೊಣೆ ಹೊತ್ತ ಐಎಸ್‍ಕೆಪಿ ಸಂಘಟನೆ ಪ್ರಚಾರ ಪಡೆದುಕೊಂಡಿದೆ. ಇದನ್ನೂ ಓದಿ: ಭಯೋತ್ಪಾದನೆ ವಿರುದ್ಧ ಜಗತ್ತು ಒಟ್ಟಾಗಿ ಹೋರಾಡಬೇಕು: ಭಾರತ

ಐಎಸ್‍ಕೆಪಿ ಸಂಘಟನೆ ಅಥವಾ ಐಎಸ್‍ಐಎಸ್-ಕೆ ಇಸ್ಲಾಮಿಕ್ ಸ್ಟೇಟ್ ಖೋರಸಾನ್ ಪ್ರಾಂತ್ಯದ ಐಸಿಸ್ ಉಗ್ರ ಸಂಘಟನೆಯ ಪ್ರಾಂತೀಯ ಸಂಘಟನೆಯಾಗಿದೆ. 2015 ಜನವರಿಯಲ್ಲಿ ಈ ಸಂಘಟನೆ ಅಸ್ತಿತ್ವಕ್ಕೆ ಬಂದಿದ್ದು, ಐಎಸ್‍ಕೆಪಿ ಸಂಘಟನೆಯು ಆಫ್ಘಾನಿಸ್ತಾನ, ಪಾಕಿಸ್ತಾನದಲ್ಲಿ ಸಕ್ರಿಯವಾಗಿದೆ ಎಂಬ ಬಗ್ಗೆ ಮಾಹಿತಿ ಇದೆ. ಇದನ್ನೂ ಓದಿ: ಐಸಿಸ್-ಕೆ ಉಗ್ರರ ವಿರುದ್ಧ ಅಮೆರಿಕ ಅಧ್ಯಕ್ಷ ಜೋ ಬೈಡನ್ ಗುಡುಗು

blank

ಜಿಹಾದಿ ಸಂಘಟನೆಗಳಲ್ಲೇ ಅತೀ ಕ್ರೂರವಾದ ಸಂಘಟನೆಯಾಗಿ ಗುರುತಿಸಿಕೊಂಡಿರುವ ಐಎಸ್‍ಕೆಪಿ, ತಾಲಿಬಾನ್ ಮತ್ತು ಅಮೆರಿಕ ಸೇನೆಯನ್ನು ಟಾರ್ಗೆಟ್ ಮಾಡಿಕೊಂಡು ದಾಳಿ ನಡೆಸಿರುವುದು ಸ್ಪಷ್ಟವಾಗಿದೆ. ತಾಲಿಬಾನ್, ಹಕ್ಕಾನಿ ಸಂಘಟನೆಗಿಂತಲೂ ಐಎಸ್‍ಕೆಪಿ ಸಂಘಟನೆ ಬಲಿಷ್ಠವಾಗಿದ್ದು, ತಾಲಿಬಾನ್‍ನಿಂದ ಹೊರಬಿದ್ದವರೇ ಐಎಸ್‍ಕೆಪಿ ಜೊತೆ ಸೇರಿಕೊಂಡು ಉಗ್ರರಾಗಿದ್ದಾರೆ. ಈ ಪಾಪಿಗಳು ಶಾಲಾ ಮಕ್ಕಳು, ಗರ್ಭಿಣಿ, ಹಸುಗೂಸುಗಳಿಗೂ ಗುಂಡಿಕ್ಕಿದ್ದು, ಆಸ್ಪತ್ರೆಗಳಿಗೂ ನುಗ್ಗಿ ರಕ್ತ ಹರಿಸಿರುವ ಚರಿತ್ರೆಯನ್ನು ಐಎಸ್‍ಕೆಪಿ ಹೊಂದಿದೆ.

Source: publictv.in Source link