ಮದಗಜ ಶೂಟಿಂಗ್ ಕಂಪ್ಲೀಟ್.. ತೆರೆಗೆ ಬರೋದು ಯಾವಾಗ ಗೊತ್ತಾ?

ಮದಗಜ ಶೂಟಿಂಗ್ ಕಂಪ್ಲೀಟ್.. ತೆರೆಗೆ ಬರೋದು ಯಾವಾಗ ಗೊತ್ತಾ?

ಅಂತೂ ಇಂತೂ ಅಡೆತಡೆಗಳನ್ನ ಮೆಟ್ಟಿ ನಿಂತು ಗುರಿ ಮುಟ್ಟಿದ ‘ಮದಗಜ’.. ಶೂಟಿಂಗ್ ಸೆಟ್ನಲ್ಲಿ ಕಳೆದ ಒಂದು ವರ್ಷದಿಂದ ಕಾಲ ಕಳೆದು ಕೊನೆಗೂ ತನ್ನ ಕೆಲಸವನ್ನ ಮುಗಿಸಿ ಕ್ಯಾಮೆರಾಕ್ಕೆ ಕೈ ಮುಗಿದಿದೆ ಮದಗಜ ಫಿಲ್ಮ್ ಟೀಮ್.. ಮದಗಜ ಸಿನಿಯಾನ ಹೇಗಿತ್ತು.. ಮದಗಜ ಮುಂದಿನ ಗುರಿ ಏನು..?

ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ ಮಹೇಶ್ ಕುಮಾರ್ ನಿರ್ದೇಶನದ ಉಮಾಪತಿ ಶ್ರೀನಿವಾಸ್ ನಿರ್ಮಾಣದ ಬಿಗ್ ಬಜೆಟ್ ಪ್ಲಸ್ ಭಾರಿ ನಿರೀಕ್ಷಿತ ಸಿನಿಮಾ ಮದಗಜ..

ಒಂದು ವರ್ಷ ಆರು ತಿಂಗಳು 19 ದಿನ.. ಇದು ರೋರಿಂಗ್ ಸ್ಟಾರ್ ಶ್ರೀಮುರಳಿಯವರ ಮದಗಜ ಸಿನಿಮಾದ ಶೂಟಿಂಗ್ ಯಾನ.. ಕಳೆದ ವರ್ಷ 2020ರ ಫೆಬ್ರವರಿ 6ನೇ ತಾರೀಖ್ ಶೂಟಿಂಗ್ ಅಂಗಳಕ್ಕೆ ಕಾಲಿಟ್ಟಿತ್ತು ಮದಗಜ ಸಿನಿಮಾ ತಂಡ.. 2020 ಫೆಬ್ರವರಿ 6 ರಿಂದ 2021 ಆಗಸ್ಟ್ 25ರ ತನಕ ಒಂದು ವರ್ಷ ಆರು ತಿಂಗಳು 19 ದಿನದಲ್ಲಿ ಮದಗಜ ಸಿನಿಮಾ ಶೂಟಿಂಗ್ ಆಗಿದ್ದು ಕೇವಲ 74 ದಿನ.. ಸಿನಿಮಾ ತಂಡ ಪಕ್ಕಾ ಪ್ಲಾನ್ ಮಾಡಿಕೊಂಡು ಶೂಟಿಂಗ್ ಅಂಗಳಕ್ಕೆ ಇಳಿದಿದ್ರು ಕಾಣದ ಕೊರೊನಾ ಮದಗಜ ಪ್ಲಾನ್ ವರ್ಕ್ ಕೌಟ್ ಮಾಡ್ಲೇ ಇಲ್ಲ..

blank

ಇದನ್ನೂ ಓದಿ: ‘ಮುಗುಳು ನಗೆ’ ಹುಡ್ಗಿ ಸಿಗರೇಟ್ ಹಿಡಿದ್ದು ಯಾಕೆ..? ಧಮ್ ಹೊಡೆಯೊದು ಕಲಿತ್ರಾ ‘ಮದಗಜ’ ಬೆಡಗಿ..?

ಪೋಸ್ಟರ್ಸ್, ಬರ್ತ್​ ಡೇ ಟೀಸರ್​ಗಳಿಂದ ಗಮನ ಸೆಳೆದ ಮದಗಜ ಸಿನಿಮಾ ತಂಡ ಶೂಟಿಂಗ್ ವಿಚಾರದಲ್ಲಿ ಸಾಕಷ್ಟು ಸದ್ದು ಮಾಡಿತ್ತು.. ಖಡಕ್ ಆ್ಯಕ್ಷನ್ ಕಮರ್ಶಿಯಲ್ ಎಂಟರ್ಟೈನ್ಮೆಂಟ್ ಆಗಿರೋ ಮದಗಜ ಚಿತ್ರದ ಶೂಟಿಂಗ್ನಲ್ಲಿ ಶ್ರೀ ಮುರಳಿ ಕಾಲಿಗೆ ಪೆಟ್ಟು ಕೂಡ ಮಾಡಿಕೊಂಡಿದ್ದರು.. ಕೊರೊನಾ ಲಾಕ್ ಡೌನ್ ಕೊಂಚ ಕಾಲ ಶೂಟಿಂಗ್ ಇಲ್ಲದೆ ಕಾಲ ಕಳೆದಿದ್ದ ಚಿತ್ರತಂಡ ಕೊನೆಗೂ ಶೂಟಿಂಗ್ ಕಂಪ್ಲೀಟ್ ಮಾಡಿಕೊಂಡಿದೆ..

ಶ್ರೀಮುರಳಿ ಮದಗಜ ಶೂಟಿಂಗ್ ಕಂಪ್ಲೀಟ್
ವರ್ಷ ಕೊನೆ ವಾರ ಮದಗಜ ರಿಲೀಸ್ ಟಾರ್ಗೆಟ್

ವಾರಾಣಸಿಯಿಂದ ಮದಗಜ ಸಿನಿಮಾ ಶೂಟಿಂಗ್ ಪ್ರಾರಂಭವಾಗಿ ಮಿನರ್ವ ಮಿಲ್ ನಲ್ಲಿ ಹೈದ್ರಾಬಾದ್ ರಾಮೋಜಿ ರಾವ್ ಫಿಲ್ಮ್ ಸಿಟಿಯಲ್ಲಿ ಮೈಸೂರಿನಲ್ಲಿ ಸುತ್ತಾ ಮುತ್ತಾ ಹಳ್ಳಿಗಳಲ್ಲಿ ಈಗ ಕೊನೆಗೆ ಬೆಂಗಳೂರಿನ ಮಿನರ್ವ ಮಿಲ್ನಲ್ಲೇ ಮದಗಜ ಶೂಟಿಂಗ್ ಅಂತ್ಯವಾಗಿದೆ.. ಒಟ್ಟು 74 ದಿನ ಶೂಟಿಂಗ್ ಮಾಡಿ ಮುಗಿಸಿದೆ.. ಶ್ರೀಮುರಳಿ , ಅಶಿಕಾ ರಂಗನಾಥ್ , ಜಗಪತಿ ಬಾಬು , ಚಿಕ್ಕಣ್ಣ ಸೇರಿದಂತೆ ದೊಡ್ಡ ತಾರಬಳಗವೇ ಈ ಚಿತ್ರದಲ್ಲಿ ಅಡಗಿದೆ.. ಚಿಕ್ಕಣ್ಣ ಜೊತೆ ಕಾಮಿಡಿ ಪ್ಲಸ್ ಒಂದು ಫೈಟ್ ಸೀನ್ ಕಂಪ್ಲೀಟ್ ಮಾಡುವ ಮೂಲಕ ಮದಗಜ ಸಿನಿಮಾ ಶೂಟಿಂಗ್ ಪೂರ್ಣಗೊಂಡಿದೆ.. ಆಲ್ ಮೊಸ್ಟ್ ಆಲ್ ಪೋಸ್ಟರ್ ಪ್ರೊಡಕ್ಷನ್ ಕೆಲಸ ಮುಗಿಸಿರೋ ಮದಗಜ ಫಿಲ್ಮ್ ಟೀಮ್ ಮುಂದಿನ ತಿಂಗಳು ಸಾಂಗ್ ಒಂದನ್ನ ಚಿತ್ರಪ್ರೇಮಿಗಳ ಮುಂದೆ ಬಿಡಲು ಪ್ಲಾನ್ ಮಾಡಿಕೊಂಡಿದೆ..

blank

ಇನ್ನೂ ಯಾವಾಗ ಮದಗಜ ಸಿನಿಮಾ ರಿಲೀಸ್ ಅನ್ನೋ ಪ್ರಶ್ನೆಗೆ ಉತ್ತರ ಈ ವರ್ಷದ ಕೊನೆ ತಿಂಗಳು ಡಿಸೆಂಬರ್ ಕೊನೆಯ ಶುಕ್ರವಾರ ಅಂದ್ರೆ ಡಿಸೆಂಬರ್ 31ನೇ ತಾರೀಖ್ ಶುಕ್ರವಾರ ಬಹುಭಾಷೆಗಳಲ್ಲಿ ಮದಗಜ ಸಿನಿಮಾವನ್ನ ತೆರೆಗೆ ಅರ್ಪಿಸಲು ಚಿತ್ರತಂಡ ಹೊಂಚು ಹಾಕಿಕೊಂಡಿದೆ. ಮಾಸ್ ಮತ್ತು ಕ್ಲಾಸ್ ಆಡಿಯನ್ಸ್​ಗೆ ಹಬ್ಬದೂಟವನ್ನ ಹಾಕಲು ನಿರ್ದೇಶಕ ಮಹೇಶ್ ಸಿನಿ ಬಳಗ ಶ್ರಮಿಸುತ್ತಿದೆ..

Source: newsfirstlive.com Source link