ಹಣಕಾಸಿನ ವಿಚಾರಕ್ಕೆ ಪೆಟ್ರೋಲ್​ ಬಂಕ್​ನಲ್ಲಿ ಯುವಕರ ನಡುವೆ ಭೀಕರ ಹೊಡೆದಾಟ

ಹಣಕಾಸಿನ ವಿಚಾರಕ್ಕೆ ಪೆಟ್ರೋಲ್​ ಬಂಕ್​ನಲ್ಲಿ ಯುವಕರ ನಡುವೆ ಭೀಕರ ಹೊಡೆದಾಟ

ಹಾಸನ: ಹಣಕಾಸಿನ ವಿಷಯಕ್ಕೆ ಸಂಬಂಧಪಟ್ಟಂತೆ ಎರಡು ಗುಂಪಿನ ನಡುವೆ ಬಡಿದಾಟವಾಗಿರೋ ಘಟನೆ ಜಿಲ್ಲೆಯ, ಸಕಲೇಶಪುರ ತಾಲ್ಲೂಕಿನ ಬಾಳೆಗದ್ದೆಯ ಗುರುದೇವ್ ಪೇಟ್ರೊಲ್ ಬಂಕ್ ಬಳಿ ನಡೆದಿದೆ.

ಬೇಲೂರು ಪಟ್ಟಣದ ಧೀರೇಶ್ ಹಾಗೂ ಬಾಳೆಗದ್ದೆಯ ಕವನ್ ನಡುವೆ ಹಣಕಾಸು ವ್ಯವಹಾರವಿತ್ತು ಎನ್ನಲಾಗಿದೆ. ಈ ವಿಚಾರವಾಗಿ ಕುಡಿದ ಮತ್ತಿನಲ್ಲಿ ಯುವಕರು, ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಹೀಗಾಗಿ, ಗಲಾಟೆಯಲ್ಲಿ ಕವನ್​ಗೆ ಗಾಯಗಳಾಗಿದ್ದು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಯುವಕರು ಹೊಡೆದಾಡುವ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆದ್ರೆ, ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಯಾವುದೇ ಪ್ರಕರಣ ದಾಖಲಾಗಿಲ್ಲ ಎನ್ನಲಾಗಿದೆ.

Source: newsfirstlive.com Source link