ನನ್ನ ಚಿಕ್ಕ ವಯಸ್ಸಿನ ಫೋಟೋ ಬಳಸಿದ್ಕೆ ಕೋಟಿಗಟ್ಟಲೇ ಪರಿಹಾರ ಕೊಡಿಸಿ ಎಂದು ಕೋರ್ಟ್​ ಮೊರೆ ಹೋದ ವ್ಯಕ್ತಿ

ನನ್ನ ಚಿಕ್ಕ ವಯಸ್ಸಿನ ಫೋಟೋ ಬಳಸಿದ್ಕೆ ಕೋಟಿಗಟ್ಟಲೇ ಪರಿಹಾರ ಕೊಡಿಸಿ ಎಂದು ಕೋರ್ಟ್​ ಮೊರೆ ಹೋದ ವ್ಯಕ್ತಿ

ಅಮೆರಿಕಾ ರಾಕ್ ಬ್ಯಾಂಡ್ ನಿರ್ವಾಣ ವಿರುದ್ಧ ವ್ಯಕ್ತಿಯೊಬ್ಬರು ಕೋರ್ಟ್​ ಮೊರೆ ಹೋಗಿದ್ದಾರೆ. ಇದಕ್ಕೆ ಕಾರಣ ನಿರ್ವಾಣ ಇತ್ತೀಚೆಗೆ ನಿರ್ಮಿಸಿದ ನೆವರ್​​ಮೈಂಡ್​​ ಆಲ್ಬಂನಲ್ಲಿ ಬಳಸಿದ ಫೋಟೋ.

ಹೌದು, ನಿರ್ವಾಣಾ ರಾಕ್​​ ಬ್ಯಾಂಡ್​​ ಸಂಸ್ಥೆಯೂ ನೆವರ್​​ಮೈಂಡ್​​ ಎಂಬ ಆಲ್ಬಂ ಮಾಡಿತ್ತು. ಈ ಆಲ್ಬಂ ಬೆಸ್ಟ್​ ಸೆಲ್ಲಿಂಗ್​​ ಮ್ಯಾಗಜಿನ್​​ ಆಗಿತ್ತು. 30 ಮಿಲಿಯನ್​​​ಗೂ ಹೆಚ್ಚು ಆಲ್ಬಂ ಕಾಪಿಗಳು ಸೇಲ್​​ ಆದವು. ಬಹಳ ಜನಪ್ರಿಯವಾದ ನೆವೆರ್​​ಮೈಂಡ್​​ ಆಲ್ಬಂ ಟೀನೇಜ್​​ ಮತ್ತು ಯೂತ್ಸ್​ ಅನ್ನು ಆಕರ್ಷಿಸಿತ್ತು.

ಸದ್ಯ 30 ವರ್ಷದ ಮಿಸ್ಟರ್​​ ಎಲ್ಡೆನ್​​​ ನಾನು ಚಿಕ್ಕವನಿದ್ದಾಗ ತೆಗೆದ ಫೋಟೋವನ್ನು ಈ ಆಲ್ಬಂನಲ್ಲಿ ಬಳಸಲಾಗಿದೆ. ಇದು ಸ್ವಿಮ್ಮಿಂಗ್​​ ಮಾಡುತ್ತಿರುವ ನಗ್ನ ಫೋಟೋ ಆಗಿದ್ದು, ಯಾವುದೇ ವಾಟರ್​​ ಮಾರ್ಕ್​​​ ಹಾಕದೆ ಬಳಸಿದ್ದಾರೆ. ಇದರಿಂದ ನನಗೆ ಮರ್ಯಾದೆ ಹೋಗಿದೆ ಎಂದು ಕೋರ್ಟ್​ ಮೆಟ್ಟಿಲೇರಿದ್ದಾರೆ. ಅಲ್ಲದೇ ರಾಕ್​​ ಬ್ಯಾಂಡ್​​ ಟೀಮ್​​ನಲ್ಲಿರುವ 15 ಸದಸ್ಯರಿಂದಲೂ ಪರಿಹಾರ ಕೊಡಿಸಿ. ಒಬ್ಬರು ಕನಿಷ್ಠ 150,000 ಡಾಲರ್​​ ನೀಡಬೇಕು ಎಂದು ಕೇಸ್​​ ಹಾಕಿದ್ದಾರೆ.

ಇದನ್ನೂ ಓದಿ: ಮೈಸೂರಲ್ಲಿ ಗ್ಯಾಂಗ್ ರೇಪ್​​: ‘ಆ’ ದಿನ ಅಲ್ಲಿ ಏನೆಲ್ಲಾ ನಡೆಯಿತು..?

ಎಲ್ಡೆನ್​​ ಪರ ವಕೀಲರು, ಕೋರ್ಟ್​ನಲ್ಲಿ ತನ್ನ ಕಕ್ಷಿದಾರರಿಗೆ ಪರಿಹಾರ ಕೊಡಿಸುವಂತೆ ವಾದ ಮಾಡಿದ್ದಾರೆ. ಜತೆಗೆ ಇದು ಚೈಲ್ಡ್​ ಪೋರ್ನೋಗ್ರಫಿ ಆಗಿದ್ದು, ಎಲ್ಡೆನ್​​ಗೆ ಮುಜುಗರ ಉಂಟಾಗಿದೆ. ಫೋಟೋ ಸಂಪೂರ್ಣ ಬೆತ್ತಲಾಗಿದ್ದು ಮಾನ ಹೋಗಿದೆ. ಆದ್ದರಿಂದ ಟೀಮ್​​ನ ಎಲ್ಲಾ ಸದಸ್ಯರಿಂದಲೂ ಪರಿಹಾರ ಕೊಡಿಸಿ ಎಂದು ವಾದ ಮಾಡಿದ್ದಾರೆ.

ಇನ್ನು, ಯುಎಸ್​​ ಕಾನೂನು ಪ್ರಕಾರ ಮಕ್ಕಳ ಫೋಟೋ ಬಳಸುವುದು ಅಪರಾಧವೇನಲ್ಲ. ಎಲ್ಡೆನ್​​ ತಾನು 25 ವರ್ಷಗಳ ಹಿಂದೆ ತೆಗೆಸಿದ್ದ ಫೋಟೋವನ್ನು ತನ್ನ ಪೋಷಕರೇ ನಿರ್ವಾಣ ಸಂಸ್ಥೆಗೆ ಮಾರಾಟ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ​​​​

Source: newsfirstlive.com Source link