ಸಾಮೂಹಿಕ ಅತ್ಯಾಚಾರ: ಈ ಶಾಕ್​ನಿಂದ ಹೊರಬರುವವರೆಗೆ ಏನೂ ಕೇಳಬೇಡಿ ಎಂದು ಕಣ್ಣೀರಿಟ್ಟ ಯುವತಿ

ಸಾಮೂಹಿಕ ಅತ್ಯಾಚಾರ: ಈ ಶಾಕ್​ನಿಂದ ಹೊರಬರುವವರೆಗೆ ಏನೂ ಕೇಳಬೇಡಿ ಎಂದು ಕಣ್ಣೀರಿಟ್ಟ ಯುವತಿ

ಮೈಸೂರು: ಸಾಂಸ್ಕೃತಿಕ ನಗರದಲ್ಲ್ಲಿ ನಡೆದ ಗ್ಯಾಂಗ್ ರೇಪ್‌‌ ಪ್ರಕರಣಕ್ಕೆ ಸಂಬಂಧಪಟ್ಟಂತೆ, ಸಂತ್ರಸ್ತೆಗೆ ಆಗಿರೋ ದುರ್ಘಟನೆಯಿಂದ ಇನ್ನೂ ಹೊರಬಾರದೇ, ಶಾಕ್​ನಿಂದ ಘಟನೆ ಕುರಿತು ಪೊಲೀಸರ ಬಳಿ ಮಾಹಿತಿ ಹಂಚಿಕೊಳ್ಳಲು ಹಿಂದೇಟು ಹಾಕ್ತಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಮೈಸೂರು ಗ್ಯಾಂಗ್ ರೇಪ್: ಪೊಲೀಸರ ‘ತಲೆದಂಡ’ದ ಸುಳಿವು ಕೊಟ್ಟ ಸರ್ಕಾರ

ಶಾಕ್​ನಿಂದ ಮೊದಲು ಹೊರಬರಲು‌ ಅವಕಾಶ‌ ನೀಡುವಂತೆ, ಪೊಲೀಸ್ ಅಧಿಕಾರಿಗಳಲ್ಲಿ ಸಂತ್ರಸ್ತ ಯುವತಿ ಮನವಿ ಮಾಡಿದ್ದಾರೆ. ಅಲ್ಲದೇ.. ಇನ್ನೆರಡು ದಿನದ ಬಳಿಕ ಘಟನೆ ಬಗ್ಗೆ ವಿವರಿಸುತ್ತೇನೆ, ಅಲ್ಲಿಯವರೆಗೂ ನನ್ನ ಪಾಡಿಗೆ ನನ್ನ ಬಿಟ್ಟು ಬಿಡಿ ಅಂತ ಸಂತ್ರಸ್ತ ಯುವತಿ ಪೊಲೀಸ್ರಲ್ಲಿ ಮನವಿಮಾಡಿದ್ದಾರಂತೆ. ಈಗಾಗಲಲೇ 20ಕ್ಕೂ ಹೆಚ್ಚು ಮಂದಿಯನ್ನ ಘಟನೆ ಸಂಬಂಧ ಪೊಲೀಸ್ರು ವಿಚಾರಣೆಗೆ ಒಳಪಡಿಸಿದ್ದಾರೆ. ಅಷ್ಟೇ ಅಲ್ಲದೇ, ಆ ಮಾರ್ಗದಲ್ಲಿರುವ ಅಂಗಡಿ‌‌- ಮುಂಗಟ್ಟುಗಳ ಸಿಸಿಟಿವಿ ದೃಶ್ಯವನ್ನು ಕೂಡ ಪೊಲೀಸ್ರು ಪರಿಶೀಲಿಸಿದ್ದಾರೆ.

ಇದನ್ನೂ ಓದಿ: ಮೈಸೂರಲ್ಲಿ ಗ್ಯಾಂಗ್ ರೇಪ್​​: ‘ಆ’ ದಿನ ಅಲ್ಲಿ ಏನೆಲ್ಲಾ ನಡೆಯಿತು..?

ಇನ್ನೂ, ಇಂದು ಘಟನಾ ಸ್ಥಳಕ್ಕೆ ಗೃಹ ಸಚಿವ‌ ಅರಗ ಜ್ಞಾನೆಂದ್ರ ಭೇಟಿ ನೀಡಿ, ಪ್ರಕರಣ ಸಂಬಂಧ ಮಾಹಿತಿ ಸಂಗ್ರಹಿಸಲಿದ್ದಾರೆ. ಇಂಥ ಕೃತ್ಯ ಎಸಗಿರೋ, ದುರುಳರ ಪತ್ತೆಗೆ ಪೊಲೀಸ್ರಿಗೆ ಒತ್ತಡ ಹೆಚ್ಚಿದೆ. ಸದ್ಯ ಅತ್ಯಾಚಾರಕ್ಕೆ ಒಳಗಾದ ಸ್ನೇಹಿತನ ಹೇಳಿಕೆ ಆಧಾರದ ಮೇಲೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Source: newsfirstlive.com Source link