ಜೀವಹಾನಿ ಮಾಡುವ ಆಟಗಳು ಅನಿವಾರ್ಯಾನಾ..? ಬ್ಯಾನ್ ಆಗುತ್ತಾ ರೋಲರ್ ಕಾಸ್ಟರ್

ಜೀವಹಾನಿ ಮಾಡುವ ಆಟಗಳು ಅನಿವಾರ್ಯಾನಾ..? ಬ್ಯಾನ್ ಆಗುತ್ತಾ ರೋಲರ್ ಕಾಸ್ಟರ್

ರೋಲರ್ ಕಾಸ್ಟರ್.. ಒಮ್ಮೆ ಇದರಲ್ಲಿ ಜರ್ನಿ ಮಾಡಬೇಕು ಅಂದ್ರೆ ಜೀವವನ್ನೆ ಕೈಯಲ್ಲಿ ಹಿಡಿದು ಕುಳಿತುಕೊಳ್ಳಬೇಕು. ಅಂತಹ ಡೆಂಜರಸ್​ ರೈಡ್ ಅನುಭವ ಪಡೆಯಬೇಕೆಂದರೇ ಎರಡು ಗುಂಡಿಗೆ ಬೇಕೇ ಬೇಕು. ಜಗತ್ತಿನ ಅತ್ಯಂತ ವೇಗವಾದ ರೋಲರ್ ಕಾಸ್ಟರ್ ಟೋಕಿಯೋದಲ್ಲಿದೆ. ಆದರೆ ಆ ರೈಡ್ ಇನ್ಮೇಲೆ ಇರೋದಿಲ್ಲ ಅಂತಿದ್ದಾರೆ!.

ಈ ಬ್ಯುಸಿ ಲೈಫ್ ನಲ್ಲಿ ಮನರಂಜನೆ ಅನ್ನೋದು ತುಂಬಾ ಮುಖ್ಯ. ಒಂದಷ್ಟು ದಿನ ಕೆಲಸ ಮಾಡಿ ಒಂದು ದಿನ ಬ್ರೇಕ್ ತೆಗೆದುಕೊಂಡು.. ಎಲ್ಲವನ್ನು ಮರೆತು ಆರಾಮದಾಯಕ ಜೀವನವನ್ನು ಅನುಭವಿಸಿ ಬಿಡಬೇಕು. ಇದಕ್ಕಾಗಿ ಪ್ರತ್ಯೇಕ ಮನರಂಜನಾ ಉದ್ಯಮವಿದೆ. ಇದರಲ್ಲಿ ಸಿನಿಮಾ, ನಾಟಕ, ಉದ್ಯಾನವನ, ರೆಸಾರ್ಟ್, ಅಮ್ಯೂಸ್ಮೆಂಟ್ ಪಾರ್ಕ್ ಹೀಗೆ ಕಾಲ ಕಳೆಯುವ ಜಾಗಗಳು ಬಹಳಷ್ಟಿದೆ. ಆದರೆ ಮನರಂಜನೆ ಯಾವ ಮಟ್ಟಕ್ಕೆ ಇರಬೇಕು ? ಪ್ರಾಣ ಹೋಗವ ಅಥವ ಜೀವಕ್ಕೆ ಹಾನಿಯಾಗುವ ಮನರಂಜನೆಗಳು ನಿಜಕ್ಕೂ ಅನಿವಾರ್ಯನಾ ? ಇದೆ ಕಾರಣಕ್ಕೆ ವಿಶ್ವವಿಖ್ಯಾತವಾದ, ಹಲವು ರೆಕಾರ್ಡ್ಗಳನ್ನು ಬ್ರೇಕ್ ಮಾಡಿದ ಒಂದು ಆಟವನ್ನು ಬ್ಯಾನ್ ಮಾಡಲಾಗಿದೆ. ಅದುವೇ ರೋಲರ್‌ಕಾಸ್ಟರ್‌.

ಅಮ್ಯೂಸ್ಮೆಂಟ್ ಪಾರ್ಕ್ ಅನ್ನೋದು ಹೈ ಎಂಡ್ ಮನರಂಜನೆ ನೀಡುವ ಒಂದು ಜಾಗ. ಬೆಂಗಳೂರಿನಲ್ಲಿರೋ ವಂಡರ್ ಲಾ ನಿಮಗೆಲ್ಲ ಗೊತ್ತಿರಲೇಬೇಕು. ಈ ಜಾಗದಲ್ಲಿ ಸಾಕಷ್ಟು ಆಟಗಳು, ಮನಸ್ಸಿಗೆ ಖುಷಿ ಕೊಡುವ ನೀರಿನ ಆಟಗಳು ಇದ್ದೆ ಇರ್ತಾವೆ. ಮೇಲು ಕೆಳಗೂ ಅಲುಗಾಡಿಸಿ, ಸುತ್ತಾಡಿಸಿ, ಸುಸ್ತು ಮಾಡುವ ಡ್ರೈ ಗೇಮ್ಸ್ ಗಳು.. ನೀರಿನಲ್ಲಿ ಮಿಂದು ಎದ್ದಿ ಹೊರನಡೆಯುವ ವಾಟರ್ ಗೇಮ್ಸ್ ಗಳು ಇಷ್ಟು ಒಂದು ಮಟ್ಟಿಗಿನ ಸೇಫ್ ಮನರಂಜನೆ. ಆದರೆ ಇದೆ ಪಾರ್ಕ್ ನಲ್ಲಿ, ಯುವಕರನ್ನು ಹೆಚ್ಚು ಆಕರ್ಷಿಸುವ, ಭಯ ಅನ್ನೋದನ್ನು ಬಗಲಲ್ಲೆ ಇಟ್ಟುಕೊಂಡು ಕೂರುವಂತಹ ಗೇಮ್ಸ್ ಅಂದ್ರೆ ಅದು ರೋಲರ್ ಕೋಸ್ಟರ್. ಆ ರೋಲರ್ ಕಾಸ್ಟರ್ ರೈಡ್ ಅನ್ನು ಹಲವರು ಟ್ರೈ ಸಹ ಮಾಡಿರುವುದಿಲ್ಲ. ಅಂತಹ ಡೇಂಜರ್ಸ್ ರೈಡ್ ಅದು ಬಟ್ ಸಖತ್ ಖುಷಿ ಕೊಡುವ ಥ್ರಿಲಿಂಗ್ ರೈಡ್ ಸಹ ಹೌದು.

blank

ಅಲ್ಲಿ ಕುಳಿತವರು, ಬೆವರಿಳಿಸಿ, ಉಸಿರು ಬಿಡದೆ, ಬಹು ಎತ್ತರದ ಕಟ್ಟಡದಿಂದ ಬಿದ್ದಾಗ ಏನಾಗುತ್ತೆ ಅನ್ನೋ ಫೀಲ್ ಪಡೆಯುತ್ತಿದ್ದಾರೆ. ತಮ್ಮೆರಡು ಕಣ್ಣುಗಳನ್ನು ಮುಚ್ಚಿ, ನಮ್ಮ ನೆಚ್ಚಿನ ದೇವರನ್ನು ಪ್ರಾರ್ಥಿಸಿ, ಗಂಟಲು ಹರಿಯುವ ಹಾಗೆ ಚೀರುತ್ತಿದ್ದಾರೆ. ಆ ರೈಡ್ ನೋಡುತ್ತಿದ್ದರೆ., ಎಲ್ಲಿ ಆಯ ತಪ್ಪಿ ಬಿದ್ದು ಪ್ರಾಣ ಕಳೆದುಕೊಂಡು ಬಿಡ್ತಿವಿ ಅನ್ಸುತ್ತೆ. ಆದ್ರೆ ಹಲವು ಸೇಫ್ಟಿ ಬೆಲ್ಟ್ ಗಳು ನಮ್ಮನ್ನು ಕಟ್ಟು ಹಿಡಿದಿರೊದ್ರಿಂದ, ಬಿದ್ದು ಸಾಯುವ ಅಪಘಾತಗಳು ಕಡಿಮೆ. ಆದರೂ, ಟೋಕಿಯೋದಲ್ಲಿ ಈ ರೋಲರ್ ಕಾಸ್ಟರ್ ಇನ್ಮೆಲೇ ಬ್ಯಾನ್ ಅಗಲಿದ್ಯಂತೆ !

ಆಗಲೇ ನೋಡಿದ ರೋಲರ್ ಕಾಸ್ಟರ್ ಗೂ.. ಇವಾಗ ನೀವು ನೋಡುತ್ತಿರುವ ರೈಡ್ ಗೂ ಏನ್ ವ್ಯತ್ಯಾಸ? ಅನ್ನಬೇಡಿ. ಇದು ಟೋಕಿಯೋದಲ್ಲಿ ಫ‌ುಜಿ-ಕ್ಯೂ ಹೈಲ್ಯಾಂಡ್‌ ಅಮ್ಯೂಸ್‌ಮೆಂಟ್‌ ಪಾರ್ಕ್‌ನಲ್ಲಿರುವ ರೋಲರ್‌ ಕಾಸ್ಟರ್‌ ಡೋ – ಡೋನ್ಪಾ. ಅಷ್ಟೆ ಅಲ್ಲ ವಿಶ್ವದ ಅತ್ಯಂತ ವೇಗದ ರೋಲರ್‌ ಕಾಸ್ಟರ್‌. ಈ ರೈಡ್ ಅಂದ್ರೆ ವಿಶ್ವಾದ್ಯಂತ ಕ್ರೇಜ್ ಇದೆ. ಎಲ್ಲವನ್ನು ಬಿಟ್ಟು ಈ ರೈಡ್ಅನ್ನು ಒಮ್ಮೆಯಾದರೂ ಟ್ರೈ ಮಾಡಲೇಬೇಕು ಎಂದು ಕಾದುಕುಳಿತಿರುವ ಅದರದೇ ಪ್ಯಾನ್ ಬಳಗವಿದೆ. ಅಷ್ಟು ಮಜ, ಹಾಗೂ ಅಷ್ಟೇ ಥ್ರಿಲಿಂಗ್ ಈ ರೋಲರ್ ಕಾಸ್ಟರ್ ರೈಡ್.

ಟೋಕಿಯೋ ವೇಗಿ ರೋಲರ್ ಕಾಸ್ಟರ್‌ ರೈಡ್ಗೆ ನಿರ್ಬಂಧ
ಥ್ರಿಲ್ಲಿಂಗ್ ರೈಡ್ಗೆ ಬ್ರೇಕ್ ಹಾಕಿದ ಟೋಕಿಯೋ ಸರ್ಕಾರ

ಹೌದು, ವಿಶ್ವದ ಅತಿ ಎತ್ತರದ ಟ್ರಾಕ್ ಮೇಲೆ ಗಂಟೆಗೆ 112 ಕಿಲೋ ಮೀಟರ್ ವೇಗವಾಗಿ ಚಲಿಸುವ ಈ ರೋಲರ್ ಕಾಸ್ಟರ್ ಅನ್ನು ಇನ್ಮುಂದೆ ಓಡಾಡುವುದಿಲ್ಲ. ಈ ಒಂದು ರೈಡ್ ಸಂಪೂರ್ಣ ಒಂದು ನಿಮಿಷ 56 ಸೆಕೆಂಡ್ಗಳ ಕಾಲ ರಭಸವಾಗಿ ಚಲಿಸುತ್ತಿತ್ತು. ಅದುವೇ ನೆಲದ ಮೇಲಲ್ಲ.. ಆಕಾಶ ಮುಟ್ಟುವ ಹಾಗಿರುವ ಕಿರಿದಾದ ಟ್ರಾಕ್ ಮೇಲೆ. ಆ ರೈಡ್ ಅನುಭವಿಸಿದ್ದವರು, ಜಗತ್ತಿನ ಎಲ್ಲ ಧೈರ್ಯ ಸಾಹಸವನ್ನು ಪ್ರಯತ್ನಿಸಬಹುದಂತಹ ಜರ್ನಿಯನ್ನು ಜಪಾನ್ ಸರ್ಕಾರ, ಇದನ್ನು ಸ್ಟಾಪ್ ಮಾಡಿ ಎಂದು ಹೇಳುತ್ತಿದೆ. ಇನ್ಮುಂದೆ ಫುವಜಿ-ಕ್ಯೂ ಹೈಲ್ಯಾಂಡ್‌ ನಲ್ಲಿರುವ ಬಹು ದೊಡ್ಡ ರೋಲರ್ ಕಾಸ್ಟರ್ ಸರ್ಕಾರದ ಆದೇಶದ ಮೆರೆಗೆ ನಿರ್ಬಂಧ ಹೇರಲಾಗಿದೆ.

ರೋಲರ್ ಕಾಸ್ಟರ್ನಿಂದ ನೋವು ಅನುಭವಿಸಿದ ಜನರು
ರೈಡ್ ಮಾಡಿದ್ರೆ ಬರುತ್ತೆ ಬೆನ್ನು ಹಾಗೂ ಕತ್ತು ನೋವು

ರೋಲರ್‌ಕಾಸ್ಟರ್‌ಡೊ-ಡೊಡೊಪ್ನಾ ಇದುವರೆಗೂ ಯಾವುದೇ ಪ್ರಾಣಾಪಾಯದ ವರದಿಗಳನ್ನು ಕೊಟ್ಟಿಲ್ಲ. ಇದಕ್ಕೂ ಮೊದಲು ಅಮೆರಿಕದ 6 ಫ್ಲಾಗ್ ಎನ್ನವ ಅಮ್ಯೂಸ್ಮೆಂಟ್ ಪಾರ್ಕನಲ್ಲಿ, ಬೆಲ್ಟ್ಗಳನ್ನು ಹಾಕಿದ್ದರು, ಓರ್ವ ಮಹಿಳೆ ಮೇಲಿಂದ ಹಾರಿ ಪ್ರಾಣ ಕಳೆದುಕೊಂಡಿದ್ದು ಅಪಘಾತ ವರದಿಯಾಗಿತ್ತು. ಅಂದಿನ ಕಾಲಕ್ಕೆ ದೊಡ್ಡ ಸುದ್ದಿಯಾಗಿದ್ದರು, ಅದೊಂದು ರೋಲರ್ ಕಾಸ್ಟರ್ ಬಿಟ್ಟರೇ, ಬೇರೆ ಯಾವ ರೋಲರ್ ಕಾಸ್ಟರ್ ಗಳು ಬಂದ್ ಆಗಿರಲಿಲ್ಲ. ಆದರೆ ಟೋಕಿಯೋದಲ್ಲಿ ಆ ಭಾರಿಯ ದುರುಂತವೇನು ನಡೆದಿಲ್ಲ. ಆದರೂ ಆ ರೈಡ್ ಗೆ ನಿರ್ಭಂದ ಹೇರಲಾಗಿದೆ. ಇದಕ್ಕೆ ಕಾರಣ, ಆ ರೈಡ್ ಮಾಡಿದ ನಂತರ ಹಲವರಿಗೆ ಬೆನ್ನು ಹಾಗೂ ಕತ್ತಿನ ಭಾಗದಲ್ಲಿ ನೋವು ಕಾಣಿಸಿರೋದು ವರದಿಯಾಗಿದೆ. ಇದರಿಂದ ಕೂಡಲೇ ಇದನ್ನು ನಿಲ್ಲಿಸ ಬೇಕು ಅನ್ನೋದು ಜಪಾನ್ ಸರ್ಕಾರ ಆದೇಶ ಹೊರಡಿಸಿದೆ.

blank

ಟೋಕಿಯೋದಲ್ಲಿನ ಈ ಅಮ್ಯೂಸ್ಮೆಂಟ್ ಪಾರ್ಕ್ನಲ್ಲಿರುವ ಡೋ – ಡೋನ್ಪಾ ರೋಲರ್ ಕಾಸ್ಟರ್ 2001 ರಲ್ಲಿ ಉದ್ಘಾಟನೆಯಾಗಿದ್ದು ಅಂದಿನಿಂದ ಇಂದಿನವರೆಗೂ ಅದೆಷ್ಟೋ ರೈಡ್ಗಳು ಇಲ್ಲಿ ನಡೆದಿದೆ. ಆದರೆ 2017 ರಲ್ಲಿ ಗಂಟೆಗೆ 107 ಕಿಲೋ ಮೀಟರ್ ವೇಗದಿಂದ ಗಂಟೆಗೆ 112 ಕಿಲೋ ಮೀಟರ್ ಗೆ ಹೆಚ್ಚಿಸಿದ್ದರು. ಅಂದಿನಿಂದ ಆಟವಾಡಿದ ಮೂವರು ಬೆನ್ನು ನೋವಿನ ಬಗ್ಗೆ ದೂರು ನೀಡಿದ್ದರು. ಆದರೆ ಇದನ್ನು ಅಮ್ಯೂಸ್ಮೆಂಟ್ ಪಾರ್ಕ್ ವ್ಯವಸ್ಥಾಪಕರು ಒಪ್ಪಿರಲಿಲ್ಲ. ಈಗ ಇದೆ ಬೆನ್ನು ನೋವಿನ ತೊಂದರೆಯೊಂದಿಗೆ ಮತ್ತೊಂದು ವರದಿ ಬಂದ ಕ್ಷಣವೇ ನೇರವಾಗಿ ರೋಲರ್ ಕಾಸ್ಟರ್ ನನ್ನು ಸ್ಟಾಪ್ ಮಾಡಲು ಹೇಳಲಾಗಿದೆ.

30 ವರ್ಷದ ಮಹಿಳೆ ಒಬ್ಬರು, ಈ ರೈಡ್ ಮಾಡಿದ ಕೆಲ ದಿನಗಳಾದ ಮೇಲೆ ತಮ್ಮ ಬೆನ್ನಿನ ಮೂಳೆ ಮುರಿದು ಹೋಗಿರುವುದು ವೈದ್ಯರು ಖಚಿತ ಪಡಿಸಿದರು. ಈ ಕಾರಣದಿಂದ ಕೂಡಲೇ ಆ ರೈಡ್ ಅನ್ನು ಸಸ್ಪೆಂಡ್ ಮಾಡಿಬಿಟ್ಟಿದ್ದಾರೆ. ಆದರೆ ಈ ಅವಘಡವನ್ನು ಅಮ್ಯೂಸ್ಮೆಂಟ್ ಪಾರ್ಕ್ ವ್ಯವಸ್ಥಾಪಕರು ಇನ್ನು ಸಹ ಒಪ್ಪುತ್ತಿಲ್ಲ. ಅವರ ಪ್ರಕಾರ ರೈಡ್ ನಲ್ಲಿ ಯಾವುದೇ ತೊಂದರೆ ಇಲ್ಲ, ಆದರೆ ರೈಡ್ ಮಾಡುವಾಗ ಸರಿಯಾದ ಪೋಷ್ಚರ್‌ನಲ್ಲಿ ಕೂತಿಲ್ಲವೆಂದರೇ, ಬೆನ್ನಿಗೆ ವರಗಿ ಕೂರದೆ ಮುಂದೆ ಭಾಗಿದ್ದರೆ, ಈ ರೀತಿ ಆಗಬಹುದು ಎನ್ನುತ್ತಿದ್ದಾರೆ.

ತಜ್ಞರ ಪ್ರಕಾರ, ರೋಲರ್ ಕಾಸ್ಟರ್ ಗುರುತ್ವಾಕರ್ಷಣೆ ವೇಗಕ್ಕಿಂತ 3 ಪಟ್ಟು ಹೆಚ್ಚು ವೇಗವಾಗಿ ಚಲಿಸುವುದರಿಂದ, ದೇಹದ ಅಂಗಾಂಗದ ಮೇಲೆ ಪರಿಣಾಮಕಾರಿ ಆಗುತ್ತದೆ ಎನ್ನುತ್ತಾರೆ. ಆದರೆ ಆ ಥ್ರಿಲ್ಲಿಂಗ್ ಜರ್ನಿ ಮಾಡುವಾಗ, ಎಚ್ಚರಿಕೆಯಿಂದ ಬೆನ್ನೂರಿ ಕೂರದಿದ್ದರೆ, ಹೀಗೆ ವಿವಿದ ಅಂಗಾಂಗಗಳು ಹಾನಿ ಆಗುತ್ತದೆ, ಇಲ್ಲದಿದ್ದರೆ ಈ ರೈಡ್ ಸೇಫ್ ಅನ್ನುತ್ತಾರೆ ಅಮ್ಯೂಸ್ಮೆಂಟ್ ಪಾರ್ಕ್​ನವರು.

ಹೀಗೋ, ಹಾಗೋ ಒಟ್ಟಿನಲ್ಲಿ ಆ ಒಂದು ರೈಡ್ ನಿಂದ ಅದೆಷ್ಟು ಜನ ಗೊತ್ತಿಲ್ಲದೆ ಬೆನ್ನು ನೋವಿನಲ್ಲಿದ್ದಾರೊ ಗೊತ್ತಿಲ್ಲ. ಆದ್ರೆ 4 ಜನರ ವರದಿಯನ್ನು ಗಂಭೀರವಾಗಿ ತೆಗೆದುಕೊಂಡಿದೆ ಟೋಕಿಯೋ. ಇದರಿಂದ ಈ ಡೇಂಜರ್ಸ್ , ಥ್ರಿಲಿಂಗ್ ರೈಡ್ ಗೆ ದೊಡ್ಡ ಬ್ರೇಕ್ ಹಾಕಿದ ಹಾಗಾಗಿದೆ.

ಗ್ಲೋಬಲ್ ಅಸೋಸಿಯೇಷನ್ ಆಫ್ ಅಟ್ರಾಕ್ಷನ್ ಇಂಡಸ್ಟ್ರಿ ಪ್ರಕಾರ 1 ಕೋಟಿ ಜನರಲ್ಲಿ ಒಬ್ಬರಿಗೆ ರೋಲರ್ ಕಾಸ್ಟರ್ ನಿಂದ ಪ್ರಾಣ ಹಾನಿ ಆಗಿರೋದು. ಆದರೆ ಆ ಒಂದು ಜೀವವೂ ಜೀವನೇ ತಾನೆ ? ಮನರಂಜನೆ ಮನಸ್ಸಿಗೆ ಖುಷಿ ಕೊಡಬೇಕೇ ಹೊರತು, ನೋವು ಕೊಡಬಾರದು ಅಲ್ವಾ ?

Source: newsfirstlive.com Source link