ಯುವಕರ ಗುಂಪುಗಳ ನಡುವೆ ಮಾರಾಮಾರಿ- ವೀಡಿಯೋ ಸಿಸಿಟಿವಿಯಲ್ಲಿ ಸೆರೆ

ಹಾಸನ: ಹಣಕಾಸು ವಿಷಯಕ್ಕೆ ಸಂಬಂಧಿಸಿದಂತೆ ಯುವಕರ ಗುಂಪುಗಳ ನಡುವೆ ಹೊಡೆದಾಟ ನಡೆದಿರುವ ಘಟನೆ ಜಿಲ್ಲೆಯ ಸಕಲೇಶಪುರದಲ್ಲಿ ನಡೆದಿದೆ.

ಬೇಲೂರು ಮೂಲದ ಯುವಕ ಹಾಗೂ ಬಾಳೆಗದ್ದೆಯ ಯುವಕನ ನಡುವೆ ಹಣಕಾಸು ವ್ಯವಹಾರವಿತ್ತು. ಈ ವ್ಯವಹಾರದಲ್ಲಿ ನಡೆದ ಭಿನ್ನಭಿಪ್ರಾಯಕ್ಕೆ ಸಂಬಂಧಿಸಿದಂತೆ ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಬಾಳೆಗದ್ದೆಯ ಖಾಸಗಿ ಪೆಟ್ರೋಲ್ ಬಂಕ್ ಬಳಿ ಯುವಕರ ಗುಂಪುಗಳ ನಡುವೆ ಹೊಡೆದಾಟ ನಡೆದಿದೆ. ಎರಡು ದಿನದ ಹಿಂದೆ ನಡೆದಿರುವ ಗಲಾಟೆಯಾಗಿದ್ದು, ಈ ಸಂದರ್ಭ ಹೊಡೆದಾಟದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ಪತ್ನಿಯನ್ನು ಕೊಂದು ಅಪಘಾತವೆಂದು ಬಿಂಬಿಸಿದ್ದ ಪತಿಯ ಬಂಧನ

ವ್ಯವಹಾರದ ವಿಚಾರಚಾಗಿ ಕುಡಿದ ಮತ್ತಿನಲ್ಲಿ ಯುವಕರ ತಂಡ ಪರಸ್ಪರ ಕುರ್ಚಿ ಹಿಡಿದು ಹೊಡೆದಾಡಿಕೊಂಡಿದ್ದಾರೆ. ಗಲಾಟೆಯಲ್ಲಿ ಓರ್ವನಿಗೆ ಗಾಯಗಳಾಗಿದ್ದು, ಯುವಕರ ಹೊಡೆದಾಡುವ ಸಿಸಿಟಿವಿ ದೃಶ್ಯಗಳು ವೈರಲ್ ಆಗುತ್ತಿದೆ. ಸಕಲೇಶಪುರ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಇದುವರೆಗೂ ಪೊಲೀಸ್ ಠಾಣೆಯಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ. ಇದನ್ನೂ ಓದಿ: ಮೈಸೂರಿನಲ್ಲಿ ದರೋಡೆ ಶೂಟೌಟ್ ಪ್ರಕರಣ – ಇಬ್ಬರ ಬಂಧನ

Source: publictv.in Source link