ಮೈಸೂರು ಗ್ಯಾಂಗ್​ ರೇಪ್​ ರಾಜ್ಯದ ಅರಾಜಕತೆಗೆ ಹಿಡಿದ ಕೈಗನ್ನಡಿ- ಕುಸುಮಾ ಹನುಮಂತರಾಯಪ್ಪ

ಮೈಸೂರು ಗ್ಯಾಂಗ್​ ರೇಪ್​ ರಾಜ್ಯದ ಅರಾಜಕತೆಗೆ ಹಿಡಿದ ಕೈಗನ್ನಡಿ- ಕುಸುಮಾ ಹನುಮಂತರಾಯಪ್ಪ

ಬೆಂಗಳೂರು: ಮೈಸೂರಿನಲ್ಲಿ ನಡೆದಿರುವ ವಿದ್ಯಾರ್ಥಿನಿ ಮೇಲಿನ ಸಾಮೂಹಿಕ ಅತ್ಯಾಚಾರ ರಾಜ್ಯದಲ್ಲಿ ಸೃಷ್ಟಿಯಾಗಿರುವ ಅರಾಜಕತೆಗೆ ಹಿಡಿದ ಕೈಗನ್ನಡಿಯಾಗಿದೆ‌ ಎಂದು ಕಾಂಗ್ರೆಸ್ ನಾಯಕಿ ಕುಸುಮಾ ಹನುಮಂತರಾಯಪ್ಪ ಕಿಡಿಕಾರಿದ್ದಾರೆ.

ಸರಣಿ ಟ್ವೀಟ್​ ಮಾಡುವ ಮೂಲಕ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಅವರು, ಪವಿತ್ರ ಕ್ಷೇತ್ರ ಚಾಮುಂಡಿ ಬೆಟ್ಟದಲ್ಲಿ ವಿದ್ಯಾರ್ಥಿನಿ ಮೇಲೆ ನಡೆದಿರುವ ಗ್ಯಾಂಗ್ ರೇಪ್ ರಾಜ್ಯದಲ್ಲಿ ಸೃಷ್ಟಿಯಾಗಿರುವ ಅರಾಜಕತೆಗೆ ಹಿಡಿದ ಕೈಗನ್ನಡಿಯಾಗಿದೆ‌. ಕೃತ್ಯ ನಡೆದು ಇಷ್ಟು ಗಂಟೆಗಳಾದರೂ ಆರೋಪಿಗಳ ಪತ್ತೆ ಮಾಡದಿರುವುದು ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಪೋಲೀಸ್ ವ್ಯವಸ್ಥೆ ಕುಸಿದುಬಿದ್ದಿರುವುದಕ್ಕೆ ನಿದರ್ಶನವಾಗಿದೆ ಎಂದಿದ್ದಾರೆ.

ಇದನ್ನೂ ಓದಿ: ಮೈಸೂರಲ್ಲಿ ಗ್ಯಾಂಗ್ ರೇಪ್​​: ‘ಆ’ ದಿನ ಅಲ್ಲಿ ಏನೆಲ್ಲಾ ನಡೆಯಿತು..?

ಸರ್ಕಾರದ ವಿರುದ್ಧ ಗುಡುಗಿದ ಅವರು, ಬೇಟಿ ಬಚಾವೋ, ಬೇಟಿ ಪಡಾವೋ ಹೆಸರಿನಲ್ಲಿ, ಎಷ್ಟು ಜನ ಹೆಣ್ಣು ಮಕ್ಕಳನ್ನು ಈ ಸಮಾಜದ ಕೆಲ ವ್ಯಾಘ್ರ ಮುಷ್ಠಿಯಿಂದ ರಕ್ಷಿಸಿದ್ದೀರಾ? ಎಷ್ಟು ಜನ ನೊಂದು-ಬೆಂದ ಹೆಣ್ಣು ಮಕ್ಕಳ ಕಣ್ಣೀರನ್ನು ಒರೆಸಿದ್ದೀರಾ? ಎಷ್ಟು ಜನ ಹೆಣ್ಣು ಮಕ್ಕಳ ಕಷ್ಟಗಳನ್ನು ಆಲಿಸಿದ್ದೀರಾ?ಎಷ್ಟು ಜನ ಅಬಲೆಯರ ನೋವುಗಳನ್ನ ಮರೆಯಾಗಿಸಲು ಪ್ರಯತ್ನಿಸಿದ್ದೀರಾ?ಎಷ್ಟು ಜನ ವಿದ್ಯಾವಂತ ಹೆಣ್ಣು ಮಕ್ಕಳಿಗೆ ಸಮಾಜದಲ್ಲಿ ಸೂಕ್ತ ಸ್ಥಾನ-ಮಾನವನ್ನ ಕಲ್ಪಿಸಿದ್ದೀರಾ? ಎಂದು ವಾಗ್ದಾಳಿ ನಡೆಸಿದ್ದಾರೆ. ಇಡೀ ರಾಷ್ಟ್ರದಲ್ಲೇ ಅತ್ಯುತ್ತಮ ಹೆಸರು ಹೊಂದಿರುವ ಕರ್ನಾಟಕ ಪೋಲೀಸ್ ಇಲಾಖೆ ಆದಷ್ಟು ಬೇಗ ಆರೋಪಿಗಳನ್ನು ಬಂಧಿಸಬೇಕೆಂದು ಆಗ್ರಹಪಡಿಸಿ ಟ್ವೀಟ್​ ಮಾಡಿದ್ದಾರೆ.

ಇದನ್ನೂ ಓದಿ: ಸಾಮೂಹಿಕ ಅತ್ಯಾಚಾರ: ಈ ಶಾಕ್​ನಿಂದ ಹೊರಬರುವವರೆಗೆ ಏನೂ ಕೇಳಬೇಡಿ ಎಂದು ಕಣ್ಣೀರಿಟ್ಟ ಯುವತಿ

Source: newsfirstlive.com Source link