ಮೈಸೂರಿನಲ್ಲಿ ವ್ಯವಸ್ಥೆ ಹದಗೆಟ್ಟಿದೆ ಎಂದು ತಿಂಗಳ ಹಿಂದೆಯೇ ಹೇಳಿದ್ದೆ- ಇಂದ್ರಜಿತ್ ಲಂಕೇಶ್

ಮೈಸೂರಿನಲ್ಲಿ ವ್ಯವಸ್ಥೆ ಹದಗೆಟ್ಟಿದೆ ಎಂದು ತಿಂಗಳ ಹಿಂದೆಯೇ ಹೇಳಿದ್ದೆ- ಇಂದ್ರಜಿತ್ ಲಂಕೇಶ್

ಮೈಸೂರು: ಯುವತಿ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಸಾಂಸ್ಕೃತಿಕ ನಗರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ನಿರ್ದೇಶಕ ಇಂದ್ರಜಿತ್ ಲಂಕೇಶ್.. ಮೈಸೂರಿನ ಇಂದಿನ ಪರಿಸ್ಥಿತಿ ನೋಡಿ ನೋವಾಗಿದೆ ಎಂದಿದ್ದಾರೆ.

ಇದನ್ನೂ ಓದಿ: ಸಾಮೂಹಿಕ ಅತ್ಯಾಚಾರ: ಈ ಶಾಕ್​ನಿಂದ ಹೊರಬರುವವರೆಗೆ ಏನೂ ಕೇಳಬೇಡಿ ಎಂದು ಕಣ್ಣೀರಿಟ್ಟ ಯುವತಿ 

ಹಲ್ಲೆ, ಗ್ಯಾಂಗ್​ರೇಪ್ ಪ್ರಕರಣ ಆತಂಕ ಮೂಡಿಸಿವೆ.. ಇಂತಹ ಅಪರಾಧ ಘಟನೆಗಳಿಗೆ ಯಾರು ಕಾರಣರು?.. ಈ ಪರಿಸ್ಥಿತಿಗೆ ರಾಜಕಾರಣಿಗಳ ಕೈವಾಡ ಕಾರಣ.. ಪೊಲೀಸರ ಕರ್ತವ್ಯದಲ್ಲಿ ರಾಜಕಾರಣಿಗಳ ಹಸ್ತಕ್ಷೇಪ ಕಾರಣ.. ಮೈಸೂರು ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ.. ವ್ಯವಸ್ಥೆ ಹದಗೆಟ್ಟಿದೆ ಎಂದು ತಿಂಗಳ ಹಿಂದೆಯೇ ಹೇಳಿದ್ದೆ.. ಮೈಸೂರಿನ ಈ ಪರಿಸ್ಥಿತಿಯನ್ನು ಪ್ರಶ್ನಿಸಬೇಕಿದೆ. ಇಲ್ಲಿ ವಿಪಕ್ಷ ಯಾವುದು? ಆಡಳಿತ ಪಕ್ಷ ಯಾವುದು..? ಬೆಂಗಳೂರಿನಲ್ಲಿರುವರಿಂದ ಮೈಸೂರಿನಲ್ಲಿ ಕಾರುಬಾರು ನಡೆಯುತ್ತಿದೆ. ಮೈಸೂರನ್ನು ತಾಲಿಬಾನ್, ಯುಪಿಗೆ ಹೋಲಿಸಿದ್ದಾರೆ.. ರಾಜಕಾರಣಿಗಳ ಹೇಳಿಕೆಯಿಂದ ಮೈಸೂರಿನ ಘನತೆಗೆ ಧಕ್ಕೆಯಾಗಿದೆ.

ಅತ್ಯಾಚಾರ ಪ್ರಕರಣಗಳಿಗಿರುವ ಫಂಡ್​ನ್ನು ಸರ್ಕಾರ ಬಳಸಿಲ್ಲ.. ಕರ್ನಾಟಕದಲ್ಲಿ 400ಕ್ಕೂ ಹೆಚ್ಚು ಅತ್ಯಾಚಾರ ಆಗಿದೆ. ಪ್ರಕರಣದ ತನಿಖೆಗೆ, ಪ್ರಕರಣ ತಡೆಯಲು ಫಂಡ್ ಇದೆ. ರಾಜ್ಯದಲ್ಲಿ ಈವರೆಗೆ ಆ ಫಂಡ್ ಬಳಕೆಯಾಗಿಲ್ಲ ಎಂದು ಇದೇ ವೇಳೆ ಇಂದ್ರಜಿತ್ ಲಂಕೇಶ್ ಕಿಡಿಕಾರಿದ್ದಾರೆ.

Source: newsfirstlive.com Source link