ಹಾರ್ದಿಕ್ ಪಾಂಡ್ಯ ಧರಿಸಿದ ವಾಚ್ ಬೆಲೆ ಕೇಳಿ ದಂಗಾದ ಅಭಿಮಾನಿಗಳು

ಮುಂಬೈ: ಭಾರತ ತಂಡದ ಸ್ಟಾರ್ ಆಲ್‍ರೌಂಡರ್ ಹಾರ್ದಿಕ್ ಪಾಂಡ್ಯ ಇತ್ತೀಚೆಗೆ ಧರಿಸಿದ್ದ ಒಂದು ವಾಚ್ ಬೆಲೆ ಕೇಳಿ ಅಭಿಮಾನಿಗಳು ದಂಗಾಗಿದ್ದಾರೆ.

ಹೌದು. ಪಾಂಡ್ಯ ತಮ್ಮ ಲೈಫ್ ಅನ್ನು ರಾಯಲ್ ಆಗಿ ಲೀಡ್ ಮಾಡುತ್ತಿದ್ದಾರೆ. ಐಷಾರಾಮಿ ಮತ್ತು ಬ್ರಾಂಡೆಡ್ ವಸ್ತುಗಳ ಕಡೆ ಹೆಚ್ಚು ಒಲವನ್ನು ಹೊಂದಿರುವ ಪಾಂಡ್ಯ, ಇತ್ತೀಚೆಗೆ ಮುಂಬೈನ ಪ್ರಮುಖ ಬೀದಿಯೊಂದರಲ್ಲಿ ಐಷಾರಾಮಿ ಮನೆಯೊಂದನ್ನು ಖರೀದಿಸಿದ್ದರು, ಅವರೊಂದಿಗೆ ಟಾಪ್-ಬಿಲ್ ಲ್ಯಾಂಬೋರ್ಗಿನಿ ಹುರಕಾನ್ ಇವಿಎಸ್, ಮರ್ಸಿಡಿಸ್ ಎಎಮ್‍ಜಿ ಜಿ63 ಬೆಲೆಬಾಳುವ ಕಾರುಗಳನ್ನು ಕೂಡ ಕಾಣಬಹುದಾಗಿದೆ. ಇದನ್ನೂ ಓದಿ: ನಿಮ್ಮ ಅಹಂಕಾರವನ್ನು ಮೊದಲು ಹದ್ದುಬಸ್ತಿನಲ್ಲಿಡಿ ಕೊಹ್ಲಿ ವಿರುದ್ಧ ಮನಿಂದರ್ ಸಿಂಗ್ ಕಿಡಿ

ಪಾಂಡ್ಯ ಇದೀಗ ತಮ್ಮ ಸಾಮಾಜಿಕ ಜಾಲತಾಣದಲ್ಲಿ ತಾವು ಧರಿಸಿರುವ ವಾಚ್ ಒಂದರ ಫೋಟೋ ಹಂಚಿಕೊಂಡಿದ್ದಾರೆ. ಈ ವಾಚ್ ತುಂಬಾ ದುಬಾರಿ ಬೆಲೆಯಾದ್ದಾಗಿದ್ದು, ಇದನ್ನು ಕಂಡ ಅಭಿಮಾನಿಗಳು ಶಾಕ್ ಆಗಿದ್ದಾರೆ. ಪಾಂಡ್ಯ ಕೈಯಲ್ಲಿದ್ದ ವಾಚ್, ಪಾಟೆಕ್ ಫಿಲಿಪ್ ನಾಟಿಲಸ್ ಪ್ಲಾಟಿನಂ-5711 ಕಂಪನಿಯದ್ದಾಗಿದ್ದು, ಇದರ ಬೆಲೆ ಬರೋಬ್ಬರಿ 5 ಕೋಟಿ ರೂಪಾಯಿಯಾಗಿದೆ. ಇದೀಗ ಈ ವಾಚ್‍ನ ಒಡೆಯನಾಗಿರುವ ಪಾಂಡ್ಯರ ಫೋಟೋಗಳು ವೈರಲ್ ಆಗುತ್ತಿದೆ.

ಸದ್ಯ ಹಾರ್ದಿಕ್ ಪಾಂಡ್ಯ ಐಪಿಎಲ್ ಪಂದ್ಯಾಟಕ್ಕಾಗಿ ಮುಂಬೈ ಇಂಡಿಯನ್ಸ್ ತಂಡದೊಂದಿಗೆ ದುಬೈಗೆ ತೆರಳಿದ್ದಾರೆ. ಸೆಪ್ಟೆಂಬರ್ 19ರಿಂದ ಆರಂಭವಾಗಲಿರುವ ಐಪಿಎಲ್‍ಗಾಗಿ ಪಾಂಡ್ಯ ತಯಾರಿ ನಡೆಸುತ್ತಿದ್ದಾರೆ. ಇದನ್ನೂ ಓದಿ: ಶತಕ ಸಿಡಿಸದೇ 50 ಇನ್ನಿಂಗ್ಸ್ ಕಳೆದ ವಿರಾಟ್ ಬ್ಯಾಟ್

Source: publictv.in Source link