ಓದಿದ್ದು ಇಂಜಿನಿಯರಿಂಗ್​, ಮಾಡ್ತಿರೋದು ಕಳ್ಳತನ.. ಕಾಲೇಜುಗಳೇ ಈತನ ಟಾರ್ಗೆಟ್

ಓದಿದ್ದು ಇಂಜಿನಿಯರಿಂಗ್​, ಮಾಡ್ತಿರೋದು ಕಳ್ಳತನ.. ಕಾಲೇಜುಗಳೇ ಈತನ ಟಾರ್ಗೆಟ್

ಬೆಂಗಳೂರು: ಸೆಕ್ಯುರಿಟಿ ಕೆಲಸ ಕೇಳಿ ಬಂದು ಕಳ್ಳತನ ಮಾಡ್ತಿದ್ದ ಕಳ್ಳನನ್ನ ಬಾಗಲೂರು ಪೊಲೀಸ್ರು ಬಂಧಿಸಿದ್ದಾರೆ. ಒಡಿಸ್ಸಾ ಮೂಲದ ಆರೋಪಿ ರಾಜಪಾತ್ರ ಬಂಧಿತ ಆರೋಪಿ.

ಇಂಜಿನಿಯರಿಂಗ್ ಓದಿದ್ದ ಈ ವ್ಯಕ್ತಿ, ಕಳ್ಳತನದ ದಾರಿಯನ್ನ ಹಿಡ್ದಿದ್ದಾನೆ. ಅಷ್ಟೇ ಅಲ್ಲ ಕಾಲೇಜು‌ ಸಂಸ್ಥೆಗಳೇ ಈ ರಾಜಪಾತ್ರನ ಟಾರ್ಗೆಟ್. ಬಾಗಲೂರಿನ ಸಿಎಂಆರ್ ಕಾಲೇಜಿನಲ್ಲೂ ಈ ಕಳ್ಳ ಕೈಚಳಕ ತೋರಿದ್ದ. ಒಡಿಸ್ಸಾದ ಬಿಜು ಲರ್ನಿಂಗ್ ಇನ್ಸ್ಟಿಟ್ಯೂಟ್​ನಲ್ಲೂ ಈತ ಕಳ್ಳತನ ಮಾಡಿದ್ದ ಆರೋಪಿಯಾಗಿದ್ದಾನಂತೆ.

ಇದನ್ನೂ ಓದಿ: ಹಣಕಾಸಿನ ವಿಚಾರಕ್ಕೆ ಪೆಟ್ರೋಲ್​ ಬಂಕ್​ನಲ್ಲಿ ಯುವಕರ ನಡುವೆ ಭೀಕರ ಹೊಡೆದಾಟ

ಮೊದಲು, ಯಾವ ಕಾಲೇಜಿನಲ್ಲಿ ಎಷ್ಟು ಕಂಪ್ಯೂಟರ್​ಗಳಿವೆ ಎಂಬ ಬಗ್ಗೆ ಆರೋಪಿ, ಮಾಹಿತಿ ಕಲೆಹಾಕ್ತಿದ್ದ. ನಂತರ ಸೀದಾ ಸೀದಾ ಕಾಲೇಜಿಗೆ ಹೋಗಿ ಸೆಕ್ಯುರಿಟಿ ಕೆಲಸ ಕೇಳ್ತಿದ್ದ. ಕೆಲಸಕ್ಕೆ ಸೇರಿದ್ದ ಎರಡೇ ದಿನದಲ್ಲಿ ಕಂಪ್ಯೂಟರ್​ನ ಒಳಭಾಗದಲ್ಲಿರೋ ಪ್ರೊಸೆಸರ್, ಱಮ್​ಗಳನ್ನ ಕದ್ದೊಯ್ತಿದ್ದ. ಈ ರೀತಿ ಹತ್ತಕ್ಕೂ ಹೆಚ್ಚು ಕಾಲೇಜಿನಲ್ಲಿ ಆರೋಪಿ ರಾಜ್​ ಕೃತ್ಯ ಎಸಗಿದ್ದಾನಂತೆ.

blank

 

ಕಳ್ಳತನದ ಬಳಿಕ ಆರೋಪಿ ಒಡಿಸ್ಸಾಗೆ ಎಸ್ಕೇಪ್ ಆಗಿದ್ದ.. ಈ ಕಳ್ಳತನ ಮಾಡೋಕೆ ಒಂದು ತಿಂಗಳು ಕಾಲೇಜಿನಲ್ಲಿ ಸೆಕ್ಯುರಿಟಿ ಗಾರ್ಡ್ ಕೆಲಸ ಮಾಡಿಕೊಂಡಿದ್ದನಂತೆ. ಒಡಿಸ್ಸಾಗೆ ತೆರಳಿ ಅಲ್ಲಿ ಬಿಜು‌ ಇ-ಲರ್ನಿಂಗ್ ಕಾಲೇಜಿನಲ್ಲಿ ಸೆಕ್ಯುರಿಟಿ ಕೆಲಸಕ್ಕೆ ಸೇರಿದ್ದ. ಅಲ್ಲೂ ಕೂಡ 150 ಕ್ಕೂ ಹೆಚ್ಚು ಕಂಪ್ಯೂಟರ್ ನ ಹಾರ್ಡ್ ಡಿಸ್ಕ್, ಱಮ್, ಪ್ರೊಸೆಸರ್ ಎಗರಿಸಿದ್ದ. ಊರಲ್ಲಿ ಸೇಲ್ ಮಾಡೋಕಾಗಲ್ಲ ಅಂತ ಮತ್ತೆ ಬೆಂಗಳೂರಿಗೆ ಬಂದಿದ್ದ. ಲಿಂಕ್ಡ್​ಇನ್ ವೆಬ್​ಸೈಟ್​ನಲ್ಲಿ ರಿವರ್ಕ್ ಎಂಡವರ್ ಪ್ರೈ ಲಿ ಹೆಸರಿನಲ್ಲಿ ಪೇಜ್ ಕ್ರಿಯೇಟ್ ಮಾಡಿದ್ದ. ಆ ಕಂಪೆನಿಗೆ ತಾನೇ ಡೈರೆಕ್ಟರ್ ಅಂತಾನೂ ಹೇಳಿಕೊಂಡಿದ್ದ. ವೆಬ್​ ಸೈಟ್​ನಲ್ಲಿ ತಾನು ಕಡಿಮೆ ರೇಟ್​ಗೆ ಕಂಪ್ಯೂಟರ್  ಱಮ್, ಪ್ರೊಸೆಸರ್, ಹಾರ್ಡ್ ಡಿಸ್ಕ್ ಸೇಲ್ ಮಾಡೋದಾಗಿ ಌಡ್ ನೀಡಿದ್ದ ಎನ್ನಲಾಗಿದೆ. ಇದೀಗ ಆರೋಪಿಯನ್ನ ಬಂಧಿಸಿ ವಿಚಾರಣೆ ನಡೆಸ್ತಿರೋ ಬಾಗಲೂರು ಪೊಲೀಸರು 40 ಲಕ್ಷ ರೂಪಾಯಿ ಬೆಲೆಬಾಳೋ ರ್ಯಾಮ್, ಹಾರ್ಡ್ ಡಿಸ್ಕ್, ಪ್ರೊಸೆಸರ್​ನ್ನ ವಶಕ್ಕೆ ಪಡೆದಿದ್ದಾರೆ.

Source: newsfirstlive.com Source link