ಅತ್ಯಾಚಾರ ಪ್ರಕರಣಗಳ ವಿರುದ್ಧ ಕೆಂಡವಾದ ರಮ್ಯಾ-ಮಹಿಳಾ ವಿರೋಧಿ ಮನಸ್ಥಿತಿಗೆ ಏನಂದ್ರು?

ಅತ್ಯಾಚಾರ ಪ್ರಕರಣಗಳ ವಿರುದ್ಧ ಕೆಂಡವಾದ ರಮ್ಯಾ-ಮಹಿಳಾ ವಿರೋಧಿ ಮನಸ್ಥಿತಿಗೆ ಏನಂದ್ರು?

ಬೆಂಗಳೂರು: ರಮ್ಯಾ ಸೋಷಿಯಲ್ ಮೀಡಿಯಾದಲ್ಲಿ ಅತ್ಯಾಚಾರ ಪ್ರಕರಣಗಳನ್ನು ಖಂಡಿಸಿ ಪೋಸ್ಟ್ ಮಾಡಿದ್ದಾರೆ. ಪುರುಷರು ಮಹಿಳೆಯರ ಮೇಲೆ ನಡೆಸುವ ಎಲ್ಲ ಕ್ರೈಂಗಳಿಗೂ ನಾವು ಮಹಿಳೆಯರೇ ತೆಗಳಿಕೆಗೆ ಗುರಿಯಾಗ್ತಿದ್ದೇವೆ. ಅದು ಅತ್ಯಾಚಾರವಾಗಿರಲಿ, ಬೈಗುಳ ಅಥವಾ ದೈಹಿಕ ಹಲ್ಲೆಯೇ ಆಗಿರಲಿ.

ಇದನ್ನೂ ಓದಿ: ಮೈಸೂರು ಗ್ಯಾಂಗ್​ ರೇಪ್​ ರಾಜ್ಯದ ಅರಾಜಕತೆಗೆ ಹಿಡಿದ ಕೈಗನ್ನಡಿ- ಕುಸುಮಾ ಹನುಮಂತರಾಯಪ್ಪ

ರಮ್ಯಾ ಹೇಳಿದ್ದೇನು..? 

ಇದು ನಿನ್ನದೇ ತಪ್ಪು, ನೀನು ಅದನ್ನು ಹೇಳಬಾರದಿತ್ತು, ನೀನು ಅದನ್ನು ಮಾಡಬಾರದಿತ್ತು, ನೀನು ಅದನ್ನು ಧರಿಸಬಾರದಿತ್ತು, ತುಂಬಾ ಟೈಟ್, ತುಂಬಾ ಶಾರ್ಟ್, ತುಂಬಾ ತೋರಿಕೆಯದ್ದು, ತುಂಬಾ ಉದ್ದದ್ದು, ನೀನು ಲೇಟ್ ಆಗಿ ಹೋಗಬಾರ್ದಿತ್ತು, ನೀನು ಹೊರಗೇ ಹೋಗಬಾರದಿತ್ತು, ನೀನು ಮೇಕಪ್ ಹಾಕಬಾರದಿತ್ತು, ರೆಡ್ ಲಿಪ್​ಸ್ಟಿಕ್ ಯಾಕೆ ಹಾಕಿದ್ದೀಯ..?, ಹೊಳೆಯುವುದನ್ನು ಯಾಕೆ ಹಾಕಿದ್ದೀಯಾ..? ನೀನು ಕಣ್ಮಿಟುಕಿಸಬಾರದಿತ್ತು, ನಿನಗೆ ಇದು ಬೇಡ, ನಿನಗೆ ಅದು ಬೇಡ- ಯಾಕೆ..? ಯಾಕಂದ್ರೆ ಪುರುಷರು ಯಾವತ್ತಿಗೂ ಪುರುಷರೇ.. ನಾವೇ ಕಾಂಪ್ರಮೈಸ್ ಮಾಡಿಕೊಳ್ಳಬೇಕು, ನಾವೇ ಬದಲಾಗಬೇಕು, ನಾವೇ ಅಡ್ಜಸ್ಟ್ ಆಗಬೇಕು, ನಾವದನ್ನು ಧರಿಸಬಾರದು- ನೋ.. ನೋ.. ಈ ನಾನ್​ಸೆನ್ಸ್​ಗೆ ಫುಲ್​ಸ್ಟಾಪ್.

ಪ್ರಾಮಾಣಿಕವಾಗಿ ಹೇಳಬೇಕೆಂದರೆ ಇದನ್ನು ನಾನೂ ಮಾಡಿದ್ದೇನೆ.. ನನ್ನ ಗೆಳೆಯರಿಗೂ ಮಾಡಿದ್ದೇನೆ.. ಅವರಿಂದ ಬೈಸಿಕೊಂಡಿದ್ದೇನೆ. ಆದರೆ ಏನು ಗೊತ್ತಾ..? ಇನ್ನು ಮುಂದೆ ಇದು ಮುಂದುವರೆಯಲ್ಲ.. ಮಹಿಳೆಯರ ಮೇಲಿನ ಕ್ರೈ. ಬಗ್ಗೆ ಜಾಣಕುರುಡು ಬೇಡ.. ಮಾತಾಡಿ- ರಮ್ಯಾ ದಿವ್ಯ ಸ್ಪಂದನ, ನಟಿ

Source: newsfirstlive.com Source link