ಐಪಿಎಲ್​​ಗೂ ಮುನ್ನ ವೈಷ್ಣೋ ದೇವಿ ದರ್ಶನ ಪಡೆದ ಶಿಖರ್ ಧವನ್

ಐಪಿಎಲ್​​ಗೂ ಮುನ್ನ ವೈಷ್ಣೋ ದೇವಿ ದರ್ಶನ ಪಡೆದ ಶಿಖರ್ ಧವನ್

ಟೀಮ್ ಇಂಡಿಯಾದ ಆರಂಭಿಕ​ ಬ್ಯಾಟ್ಸ್​ಮನ್ ಶಿಖರ್ ಧವನ್, ಐಪಿಎಲ್​ ಆರಂಭಕ್ಕೂ ಮುನ್ನ ದೇವರ ಮೊರೆ ಹೋಗಿದ್ದಾರೆ. ಜಮ್ಮು-ಕಾಶ್ಮೀರದ ಕಾತ್ರದಲ್ಲಿರುವ ವೈಷ್ಣೋ ದೇವಿ ದೇವಸ್ಥಾನಕ್ಕೆ ಧವನ್, ಕುಟುಂಬ ಸಮೇತರಾಗಿ ಭೇಟಿ ನೀಡಿದ್ದಾರೆ. ರಿಯಾಸಿ ಜಿಲ್ಲೆಯ ಕತ್ರಾ ಪಟ್ಟಣದ ತ್ರಿಕುಟ ಬೆಟ್ಟಕ್ಕೆ ಕುಟುಂಬ ಸಮೇತರಾಗಿ ಆಗಮಿಸಿದ್ದ ಶಿಖರ್ ಧವನ್, ಶ್ರೀ ಮಾತಾ ವೈಷ್ಣೋ ದೇವಿಗೆ, ವಿಶೇಷ ಪೂಜೆ ಸಲ್ಲಿಸಿ ಹಿಂತಿರುಗಿದ್ದಾರೆ.

ಈ ಬಗ್ಗೆ ತಮ್ಮ ಇನ್ಸ್​​ಟಾಗ್ರಾಮ್​ನಲ್ಲಿ ತಂದೆ ಜೊತೆಗಿನ ಪೋಟೋ ಹಂಚಿಕೊಂಡಿರುವ ಶಿಖರ್​ ಧವನ್, ತಮ್ಮ ಬಾಲ್ಯದ ದಿನಗಳನ್ನ ನೆನಪಿಸಿಕೊಂಡಿದ್ದಾರೆ. ವೈಷ್ಣೋ ದೇವಿ ದೇವಸ್ಥಾನದ ವಾಕಿಂಗ್ ಟೂರ್ ಚೆನ್ನಾಗಿತ್ತು. ನನ್ನ ತಂದೆ ನನ್ನನ್ನ ಇಲ್ಲಿಗೆ ಕರೆತಂದ ನನ್ನ ಬಾಲ್ಯದ ದಿನಗಳು ನೆನಪಾಯಿತು ಎಂದು ತಮ್ಮ ಅನುಭವ ಹಂಚಿಕೊಂಡಿದ್ದಾರೆ.

Source: newsfirstlive.com Source link