ಶೋಷಿತ ವರ್ಗದ ಹೆಣ್ಣುಮಕ್ಕಳ ಮೇಲೆ ಹೆಚ್ಚು ಅತ್ಯಾಚಾರಗಳಾಗಿವೆ -ಇಂದ್ರಜೀತ್ ಲಂಕೇಶ್

ಶೋಷಿತ ವರ್ಗದ ಹೆಣ್ಣುಮಕ್ಕಳ ಮೇಲೆ ಹೆಚ್ಚು ಅತ್ಯಾಚಾರಗಳಾಗಿವೆ -ಇಂದ್ರಜೀತ್ ಲಂಕೇಶ್

ಮೈಸೂರು: ಮೈಸೂರಿನಲ್ಲಿ ವಿದ್ಯಾರ್ಥಿನಿಯೋರ್ವಳ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಸುದ್ದಿಗೋಷ್ಠಿ ನಡೆಸಿದರು. ಕರ್ನಾಟಕದಲ್ಲಿ ಕಳೆದ ಎರಡು ವರ್ಷಗಳಲ್ಲಿ 400 ಕ್ಕೂ ಹೆಚ್ಚು ರೇಪ್ ಕೇಸ್ ಆಗಿದೆ. ಇದರಲ್ಲಿ ಹೆಚ್ಚಿನದು ಶೋಷಿತ ವರ್ಗಕ್ಕೆ ಸೇರಿದ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರಗಳಾಗಿವೆ ಎಂದು ಇಂದ್ರಜಿತ್ ಲಂಕೇಶ್ ಹೇಳಿದ್ದಾರೆ.

ಇದನ್ನೂ ಓದಿ: ಮೈಸೂರಿನಲ್ಲಿ ವ್ಯವಸ್ಥೆ ಹದಗೆಟ್ಟಿದೆ ಎಂದು ತಿಂಗಳ ಹಿಂದೆಯೇ ಹೇಳಿದ್ದೆ- ಇಂದ್ರಜಿತ್ ಲಂಕೇಶ್

ಅತ್ಯಾಚಾರ ಮಾಡಿದ್ರೆ ಏನು ಶಿಕ್ಷೆ ಎಂಬುದನ್ನು ಹೆಚ್ಚು ಪ್ರಚಾರ ಮಾಡಬೇಕು. ಅತ್ಯಾಚಾರ ಮಾಡಿದವರಿಗೆ ಯಾವ ಶಿಕ್ಷೆ ಎಂದು ಬಸ್ ನಿಲ್ದಾಣಗಳಲ್ಲಿ ಹಾಕಬೇಕಿದೆ. ರಾಜಕಾರಣಿಗಳು ನಾನೇ ಈ ನಿಲ್ದಾಣ ಮಾಡಿಸಿದ್ದು ಎಂದು ಹಾಕ್ತಾರೆ.. ಆದರೆ ಇಂದು ರೇಪ್ ಕೇಸ್​ಗೆ ಯಾವ ಶಿಕ್ಷೆ ಎಂದು ಹಾಕಬೇಕಿದೆ‌ ಎಂದಿದ್ದಾರೆ.

ಇದನ್ನೂ ಓದಿ: ಮೈಸೂರು ಗ್ಯಾಂಗ್​ ರೇಪ್​ ರಾಜ್ಯದ ಅರಾಜಕತೆಗೆ ಹಿಡಿದ ಕೈಗನ್ನಡಿ- ಕುಸುಮಾ ಹನುಮಂತರಾಯಪ್ಪ

Source: newsfirstlive.com Source link