ಚಂದನ್ ಕುಮಾರ್ ಫಿಟ್ನೆಸ್‍ಗೆ ಫ್ಯಾನ್ಸ್ ಫಿದಾ

ಬೆಂಗಳೂರು: ಕೇವಲ 2 ತಿಂಗಳಲ್ಲಿ ಸ್ಯಾಂಡಲ್‍ವುಡ್ ನಟ ಚಂದನ್ ಕುಮಾರ್ ದೇಹದ ಟ್ರಾನ್ಸ್​ಫಾರ್ಮೇಷನ್​ ನೋಡಿ ಫ್ಯಾನ್ಸ್ ಅಚ್ಚರಿಗೊಂಡಿದ್ದಾರೆ.

ಕೊರೊನಾ ಲಾಕ್‍ಡೌನ್ ಸಮಯದಲ್ಲಿ ಅನೇಕರು ಮನೆಯಲ್ಲೇ ಇರಬೇಕಾದ ಪರಿಸ್ಥಿತಿ ಎದುರಾಗಿದ್ದರಿಂದ ಫಿಟ್ನೆಸ್ ಕಳೆದುಕೊಂಡಿದ್ದಾರೆ. ಇದರಲ್ಲಿ ಚಂದನ್ ಕುಮಾರ್ ಕೂಡ ಒಬ್ಬರು. ಆದರೆ ಕೇವಲ ಎರಡೇ ತಿಂಗಳಲ್ಲಿ ಅವರ ದೇಹದಲ್ಲಿ ಸಾಕಷ್ಟು ಬದಲಾವಣೆ ಆಗಿದೆ. ಈ ಬಗ್ಗೆ ಅವರು ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಹಂಚಿಕೊಂಡಿದ್ದಾರೆ.

ಜೂನ್ 21ರ ಫೋಟೋದಲ್ಲಿ ಚಂದನ್‍ಗೆ ಹೊಟ್ಟೆ ಬಂದಿತ್ತು. ಆದರೆ ಆಗಸ್ಟ್ 26ರ ಫೋಟೋದಲ್ಲಿ ಅವರು ಸಖತ್ ಫಿಟ್ ಆಗಿದ್ದಾರೆ. ಈ ಫೋಟೋ ನೋಡಿದ ಫ್ಯಾನ್ಸ್ ಅಚ್ಚರಿ ಹೊರ ಹಾಕಿದ್ದಾರೆ. ಇನ್ನೂ ಕೆಲವರು ನೀವೇ ನಮಗೆ ಸ್ಫೂರ್ತಿ ಎಂದು ಬರೆದುಕೊಂಡಿದ್ದಾರೆ. ಸದ್ಯ ಈ ಫೋಟೋ ಸಾಕಷ್ಟು ವೈರಲ್ ಆಗುತ್ತಿದೆ. ಇದನ್ನೂ ಓದಿ:  ಮಹಿಳೆಯರ ವಿರುದ್ಧದ ಅಪರಾಧಗಳತ್ತ ಕಣ್ಣು ಮುಚ್ಚಬೇಡಿ, ಮಾತನಾಡಿ: ರಮ್ಯಾ

ಚಂದನ್ ಕುಮಾರ್ ತೆಲುಗು ಧಾರಾವಾಹಿಯಲ್ಲಿ ನಟಿಸುತ್ತಿದ್ದರು. ಕೊರೊನಾ ಎರಡನೇ ಅಲೆ ಬರುವುದಕ್ಕೂ ಕೆಲ ತಿಂಗಳ ಮೊದಲು ಅವರ ಮದುವೆ ನಿಗದಿ ಆದ ಕಾರಣ ನಟನೆಯಿಂದ ಒಂದು ಬ್ರೇಕ್ ತೆಗೆದುಕೊಂಡರು. ಈ ಕಾರಣಕ್ಕೆ ತೆಲುಗು ಧಾರಾವಾಹಿಯಿಂದ ಹೊರ ಬಂದರು. ಹೀಗಾಗಿ ಚಂದನ್ ಮನೆಯಲ್ಲೇ ಇರಬೇಕಾದ ಪರಿಸ್ಥಿತಿ ಎದುರಾಗಿತ್ತು. ಅಲ್ಲದೆ ಅವರಿಗೆ ಜಿಮ್‍ಗೆ ತೆರಳೋಕು ಸಾಧ್ಯವಾಗಿರಲಿಲ್ಲ. ಹೀಗಾಗಿ ಅವರ ದೇಹ ಶೇಪ್ ಕಳೆದುಕೊಂಡಿತ್ತು. ಆದರೆ ಸತತ ಎರಡು ತಿಂಗಳು ಜಿಮ್‍ನಲ್ಲಿ ಬೆವರು ಹರಿಸಿದ್ದಾರೆ. ಈ ಮೂಲಕ ಅವರ ಬಾಡಿಯನ್ನು ಕರಗಿಸಿದ್ದಾರೆ.

Source: publictv.in Source link