ಗುರಿ ತಪ್ಪಿದ ಗೃಹಸಚಿವ; ಅತ್ಯಾಚಾರ ನಡೆದ ಸ್ಥಳ ಪರಿಶೀಲನೆ ಮಾಡದೇ ಗನ್ ಹಿಡಿದು ಟೈಂಪಾಸ್?

ಗುರಿ ತಪ್ಪಿದ ಗೃಹಸಚಿವ; ಅತ್ಯಾಚಾರ ನಡೆದ ಸ್ಥಳ ಪರಿಶೀಲನೆ ಮಾಡದೇ ಗನ್ ಹಿಡಿದು ಟೈಂಪಾಸ್?

ಮೈಸೂರು: ಗ್ಯಾಂಗ್​ ರೇಪ್​ ಪ್ರಕರಣದ ಸಭೆ ನಡೆಸಲು ಮೈಸೂರಿಗೆ ತೆರಳುವುದಾಗಿ ಹೇಳಿದ್ದ ಗೃಹ ಸಚಿವ ಆರಗ ಜ್ಞಾನೇಂದ್ರ ಪೊಲೀಸ್ ಅಕಾಡೆಮಿಯಲ್ಲಿ ಬ್ಯೂಸಿಯಾಗಿದ್ದು, ಶೂಟಿಂಗ್ ಪ್ರಾಕ್ಟಿಸ್​ ಮಾಡ್ತಿದ್ದಾರೆ..ಹೀಗಾಗಿ ಅತ್ಯಾಚಾರ ನಡೆದ ಸ್ಥಳಕ್ಕೇ ಭೇಟಿ ನೀಡದೇ ಅರಗ ಜ್ಞಾನೇಂದ್ರ ಗನ್ ಹಿಡಿದು ಟೈಂಪಾಸ್ ಮಾಡ್ತಿದ್ದಾರಾ? ಎಂದು ಪ್ರಶ್ನೆಗಳು ಮೂಡುವಂತಾಗಿದೆ.

ಕರ್ನಾಟಕ ಪೊಲೀಸ್ ಅಕಾಡೆಮಿಯ ಭೇಟಿಯಲ್ಲಿರುವ ಗೃಹ ಸಚಿವ ಆರಗ ಜ್ಞಾನೇಂದ್ರ ಗನ್ ಹಿಡಿದು ಶೂಟ್ ಮಾಡಿದ್ದಾರೆ. ನಗರದ ಕರ್ನಾಟಕ ಪೊಲೀಸ್ ಅಕಾಡೆಮಿಗೆ ಭೇಟಿ ನೀಡಿದ ಸಚಿವರು ಭೇಟಿಯ ವೇಳೆ ಗನ್ ಹಿಡಿದು ಶೂಟ್ ಮಾಡಿದ್ದು, ತೀವ್ರ ವಿರೋಧ ವ್ಯಕ್ತವಾಗುತ್ತಿದೆ.

blank

ಅಕಾಡೆಮಿಗೆ ಭೇಟಿ ನೀಡಿ ಕಟ್ಟಡ ಹಾಗೂ ವ್ಯವಸ್ಥೆ ಬಗ್ಗೆ ಮಾಹಿತಿ ಪಡೆದುಕೊಂಡ ಸಚಿವ. ಮಾಡೆಲ್ ಪೊಲೀಸ್ ಸ್ಟೇಷನ್, ಮೂಡ್ ಕೋರ್ಟ್, ಪರೀಕ್ಷಾರ್ಥಿಗಳ ಕೊಠಡಿ, ಸಭಾಂಗಣ, ಗ್ರಂಥಾಲಯ ಸೇರಿ ವ್ಯವಸ್ಥೆ ಬಗ್ಗೆ ಸಮಾಲೋಚನೆ ನಡೆಸಿದ್ದಾರೆ ಎನ್ನಲಾಗಿದೆ. ಫೈರಿಂಗ್ ಸಿಮ್ಯುಲೇಟರ್‌ ಉದ್ಘಾಟನೆ ವೇಳೆ, ಗನ್ ಹಿಡಿದು ಶೂಟ್​ ಮಾಡಿ, ಶೂಟಿಂಗ್ ಪ್ರಾಕ್ಟೀಸ್ ಮಾಡ್ತಿದ್ದಾರೆ. ಇನ್ನು ಗೃಹ ಸಚಿವರ ಈ ನಡೆಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.

ಇದನ್ನೂ ಓದಿ: ಸಾಮೂಹಿಕ ಅತ್ಯಾಚಾರ: ಈ ಶಾಕ್​ನಿಂದ ಹೊರಬರುವವರೆಗೆ ಏನೂ ಕೇಳಬೇಡಿ ಎಂದು ಕಣ್ಣೀರಿಟ್ಟ ಯುವತಿ

Source: newsfirstlive.com Source link