ಆಂಗ್ಲರ ರಣವ್ಯೂಹ ಭೇದಿಸಲು ವಿಫಲವಾಗ್ತಿರೋ ಕೊಹ್ಲಿಗೆ ಕಾಡ್ತಿದೆಯಾ ‘ಆ’ ತಪ್ಪಿನ ನೆನಪು?

ಆಂಗ್ಲರ ರಣವ್ಯೂಹ ಭೇದಿಸಲು ವಿಫಲವಾಗ್ತಿರೋ ಕೊಹ್ಲಿಗೆ ಕಾಡ್ತಿದೆಯಾ ‘ಆ’ ತಪ್ಪಿನ ನೆನಪು?

ನಾಯಕ ವಿರಾಟ್ ಕೊಹ್ಲಿಯ ವೈಫಲ್ಯ ಮುಂದುವರಿದಿದೆ. ಇಂದು, ನಾಳೆ ಕಮ್​ಬ್ಯಾಕ್ ಮಾಡ್ತಾರೆ ಅಂತಾ ನಿರೀಕ್ಷೆಯಲ್ಲಿದ್ದ ಅಭಿಮಾನಿಗಳ ನಂಬಿಕೆಯೂ, ಹುಸಿಯಾಗಿದೆ. ಹಾಗಾದ್ರೆ ಕೊಹ್ಲಿಯ ಈ ವೈಫಲ್ಯಕ್ಕೆ ಕಾರಣವೇನು..? ಇದಕ್ಕೆ ಪರಿಹಾರವೇನು..? ವಿರಾಟ್​ ಕೊಹ್ಲಿ, ಟೀಮ್ ಇಂಡಿಯಾದ ಟಾಪ್ ಕ್ಲಾಸ್ ಬ್ಯಾಟ್ಸ್​ಮನ್..! ತನ್ನ ಬ್ಯಾಟಿಂಗ್​ ಮೂಲಕ ನಡುಕ ಹುಟ್ಟಿಸೋ ವಿರಾಟ್​, ಪ್ರಸಕ್ತ ಕಾಲದ ಶ್ರೇಷ್ಠ ಆಟಗಾರ. ಬ್ಯಾಟ್​​ನಿಂದ ಅದ್ಭುತಗಳನ್ನೇ ಸೃಷ್ಟಿಸೋ ಕೊಹ್ಲಿ​, ಕ್ರಿಕೆಟ್ ಲೋಕದಲ್ಲಿ ಲೆಕ್ಕವಿಲ್ಲದಷ್ಟು ದಾಖಲೆಗಳನ್ನ ಬರೆದಿದ್ದಾರೆ ಹಾಗೇ ಬ್ರೇಕ್ ಮಾಡಿದ್ದಾರೆ. ಆದ್ರೆ, ಅದ್ಯೋಕೋ ಇತ್ತಿಚೀನ ದಿನಗಳಲ್ಲಿ ವಿರಾಟ್​ನ ವಿಶ್ವರೂಪ ಮಾಯವಾಗಿದೆ.

blank

ಹೌದು..! 2018ರ ಇಂಗ್ಲೆಂಡ್ ಪ್ರವಾಸದಲ್ಲಿ ಅಬ್ಬರಿಸಿ ಬೊಬ್ಬೆರೆದಿದ್ದ ವಿರಾಟ್​, ಈಗ ಸಂಪೂರ್ಣ ವ್ಯತಿರಿಕ್ತ ಪ್ರದರ್ಶನ ನೀಡುತ್ತಿದ್ದಾರೆ. ಆದ್ರಲ್ಲೂ ಇಂಗ್ಲೆಂಡ್​ನಲ್ಲಿ​ ಸಂಪೂರ್ಣ ವೈಫಲ್ಯ ಅನುಭವಿಸ್ತಿರುವ ಕೊಹ್ಲಿ, 4 ಇನ್ನಿಂಗ್ಸ್​ಗಳಿಂದ ಕೇವಲ 69 ರನ್ ಮಾತ್ರವೇ ಕಲೆಹಾಕಿದ್ದಾರೆ. ಆದ್ರೆ ಈ ಪೈಕಿ 2 ಬಾರಿ ವೇಗಿ ಜೇಮ್ಸ್​ ಆ್ಯಂಡರ್ಸನ್​ಗೆ ವಿಕೆಟ್ ಒಪ್ಪಿಸಿದ್ದಾರೆ.. ಇದು 2014ರ ಪ್ರವಾಸವನ್ನ ನೆನೆಪಿಸುವಂತೆ ಮಾಡಿದೆ…

ಇದನ್ನೂ ಓದಿ:ನೆಟ್ ಪ್ರಾಕ್ಟೀಸ್ ಮಾಡೋದು ಬಿಟ್ಟು ವಾಲಿಬಾಲ್ ಆಡಿದ ಧೋನಿ.!

ಮೊದಲ ಬಾರಿಗೆ ಇಂಗ್ಲೆಂಡ್ ಪ್ರವಾಸಕ್ಕೆ ತೆರಳಿದ್ದ ವಿರಾಟ್​ಗೆ, ಇದು ಅತ್ಯಂತ ಕಹಿ ಅಧ್ಯಾಯವಾಗಿತ್ತು. ಸರಣಿಯಲ್ಲಿ ಕೇವಲ 134 ರನ್‌ ಕಲೆಹಾಕಿದ್ದ ಕೊಹ್ಲಿಗೆ, ಕ್ರಿಕೆಟ್​ ಕರಿಯರ್​​​ನ ಅಂತ್ಯದ ಘಟ್ಟ ಅಂತಾನೇ ಬಿಂಬಿಸಲಾಗಿತ್ತು. ಆದ್ರೆ ನಂತರದ ಆಸ್ಟ್ರೇಲಿಯಾ ಸರಣಿಯಲ್ಲಿ ವಿರಾಟ್​ ಪುಟಿದಿದಿದ್ದು, ಈಗ ಇತಿಹಾಸ..! ಯೆಸ್.. ಕ್ಯಾಪ್ಟನ್ ಕೊಹ್ಲಿಯ ಸಮಸ್ಯೆಗೆ ಸುನೀಲ್ ಗವಾಸ್ಕರ್, ಮಾಸ್ಟರ್​ ಬ್ಲಾಸ್ಟರ್​ ಸಚಿನ್ ತೆಂಡುಲ್ಕರ್​ ಬಳಿ ಮಾತುಕತೆ ನಡೆಸುವಂತೆ ಸಲಹೆ ನೀಡಿದ್ದಾರೆ..

blank

‘ಕೊಹ್ಲಿ ಶಪತ ಮಾಡಬೇಕು’
ವಿರಾಟ್‌, ಸಚಿನ್​​​ಗೆ ಕರೆ ಮಾಡಿ, ತಮ್ಮ ಆಟ ಸುಧಾರಿಸಲು ಏನು ಮಾಡಬೇಕೆಂದು ಕೇಳಬೇಕಿದೆ. ಹಿಂದೆ ಸಿಡ್ನಿ ಟೆಸ್ಟ್‌ನಲ್ಲಿ ಸಚಿನ್‌ ಮಾಡಿದ್ದ ಕೆಲಸ, ಈಗ ಕೊಹ್ಲಿ ಮಾಡಬೇಕಿದೆ. ಅಂದು ಸಚಿನ್ ಕವರ್‌ ಡ್ರೈವ್ ಆಡುವುದಿಲ್ಲ ಎಂದು ನಿರ್ಧರಿಸಿ ದ್ವಿಶತಕ ಬಾರಿಸಿದ್ದರು. ಕೊಹ್ಲಿ ಕೂಡ ಇಂಥದ್ದೇ ಮಾರ್ಗ ಅನುಸರಿಸಬೇಕಿದೆ.
 -ಸುನೀಲ್ ಗವಾಸ್ಕರ್, ಮಾಜಿ ಕ್ರಿಕೆಟಿಗ

ಅಂದ್ಹಾಗೆ, ಕೊಹ್ಲಿಗೆ ಗವಾಸ್ಕರ್ ನೀಡಿದ್ದ ಸಲಹೆ ಹಿಂದೆ ಇಂಟ್ರೆಸ್ಟಿಂಗ್ ಕಥೆ ಇದೆ. 2014ರಲ್ಲಿ ಆಫ್​​ಸ್ಟಂಪ್ ಆಚೆ ಹೋಗುತ್ತಿದ್ದ ಎಸೆತಗಳನ್ನ ಆಡಲು ತಿಣುಕಾಡುತ್ತಿದ್ದ ಕೊಹ್ಲಿ, ಅಂದು ಸಚಿನ್ ಮಾರ್ಗದರ್ಶನ ಪಡೆದಿದ್ದರು. ಬಳಿಕ ಆಸಿಸ್ ಪ್ರವಾಸದಲ್ಲಿ ಮಿಂಚಿದ್ದ ಕೊಹ್ಲಿ, 2018ರ ಇಂಗ್ಲೆಂಡ್​ ಪ್ರವಾಸದಲ್ಲೂ ಅಬ್ಬರಿಸಿದ್ದರು. ಈ ಬಳಿಕ ಕೊಹ್ಲಿ ಹಿಂತಿರುಗಿ ನೋಡಿದ್ದೇ ಇಲ್ಲ.!!! ಆದ್ರೆ ಕಳೆದ ಎರಡು ವರ್ಷಗಳಿಂದ ಕೊಹ್ಲಿ, ಮತ್ತೆ ಬ್ಯಾಡ್​ ಫಾರ್ಮ್​ಗೆ ಸಿಲುಕಿದ್ದಾರೆ. ಇದೇ ಕಾರಣಕ್ಕೆ ಸಚಿನ್ ಸಲಹೆ ಪಡೆಯಲು ಸೂಚಿಸಿರೋದು ಕೂಡ.. !!! ಒಟ್ನಲ್ಲಿ ಸದ್ಯ ಔಟ್​ ಆಫ್​ ಫಾರ್ಮ್​ನಲ್ಲಿರುವ ವಿರಾಟ್, ಶೀಘ್ರ ಫಾರ್ಮ್​ಗೆ ಮರಳಲಿ, ತಮ್ಮ ವಿರಾಟ ರೂಪ ತೋರಿಸಲಿ ಅನ್ನೋದೆ ಅಭಿಮಾನಿಗಳ ಆಶಯ..

Source: newsfirstlive.com Source link