ಅಮೆರಿಕ ಅವಳಿ ಕಟ್ಟಡಗಳ ಮೇಲೆ ದಾಳಿ ಮಾಡಿದ್ದು ‘ಬಿನ್ ಲಾಡೆನ್ ಅಲ್ವೇ ಅಲ್ಲ’ ಎಂದ ತಾಲಿಬಾನ್

ಅಮೆರಿಕ ಅವಳಿ ಕಟ್ಟಡಗಳ ಮೇಲೆ ದಾಳಿ ಮಾಡಿದ್ದು ‘ಬಿನ್ ಲಾಡೆನ್ ಅಲ್ವೇ ಅಲ್ಲ’ ಎಂದ ತಾಲಿಬಾನ್

2001 ರ ಸೆಪ್ಟೆಂಬರ್ 11 ರಂದು ಅಮೆರಿಕಾದ ವರ್ಲ್ಡ್ ಟ್ರೇಡ್ ಸೆಂಟರ್​ನ ಅವಳಿ ಕಟ್ಟಡಗಳ ಮೇಲೆ ಅಲ್​ಖೈದಾ ಸಂಘಟನೆ ದಾಳಿ ನಡೆಸಿತ್ತು. ಈ ದಾಳಿಯಲ್ಲಿ ಒಸಾಮಾ ಬಿನ್​ಲಾಡೆನ್ ಕೈವಾಡ ಇದ್ದುದಕ್ಕೆ ಯಾವುದೇ ಸಾಕ್ಷಿ ಇಲ್ಲ ಎಂದು ಇದೀಗ ತಾಲಿಬಾನ್ ಹೇಳಿದೆ.

ಇದನ್ನೂ ಓದಿ: ಇವನೇ ನೋಡಿ ಕಾಬೂಲ್ ಆತ್ಮಾಹುತಿ ದಾಳಿಕೋರ ಉಗ್ರ; ISIS-Kನಿಂದ ಫೋಟೋ ರಿಲೀಸ್

ಅಂತಾರಾಷ್ಟ್ರೀಯ ಮಾಧ್ಯಮವೊಂದಕ್ಕೆ ಹೇಳಿಕೆ ನೀಡಿರುವ ತಾಲಿಬಾನ್ ವಕ್ತಾರ ಜಬೀಹುಲ್ಲಾ ಮುಜಾಹಿದ್. ಅಮೆರಿಕದಲ್ಲಿ ಕಟ್ಟಡಗಳ ಮೇಲಿನ ದಾಳಿ ವಿಷಯ ಚರ್ಚೆಗೆ ಬಂದಾಗ ಒಸಾಮ ಬಿನ್ ಲಾಡೆನ್ ಅಫ್ಘಾನಿಸ್ತಾನದಲ್ಲಿದ್ದರು. ಆದರೂ ಅಂದಿನ ಘಟನೆಯಲ್ಲಿ ಬಿನ್ ಲಾಡೆನ್ ಕೈವಾಡ ಇದೆ ಎಂಬುದಕ್ಕೆ ಯಾವುದೇ ಸಾಕ್ಷಿಯಿಲ್ಲ ಎಂದಿದ್ದಾರೆ. 20 ವರ್ಷ ನಾವು ಅಮೆರಿಕ ಜೊತೆಗೆ ಯುದ್ಧ ನಡೆಸಿದ್ದೇವೆ. ಆದರೂ ಈವರೆಗೂ ಅವರ ಕೈವಾಡ ಇದೆ ಎಂಬುದಕ್ಕೆ ಯಾವುದೇ ಸಾಕ್ಷಿ ಇಲ್ಲ ಎಂದು ಹೇಳಿದ್ದಾರೆ. ಈ ಯುದ್ಧಕ್ಕೆ ನ್ಯಾಯ ಎಂಬುದಿಲ್ಲ.. ಈ ಯುದ್ಧ ಒಂದು ನೆಪವಷ್ಟೇ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಕಾಬೂಲ್ ಏರ್​ಪೋರ್ಟ್​ನಲ್ಲಿ ಉಗ್ರರ ಅಟ್ಟಹಾಸ;​ 103 ಕ್ಕೇರಿದ ಸಾವಿನ ಸಂಖ್ಯೆ

ಇನ್ನು ಅಮೆರಿಕಾ ಸೇನೆ ಅಫ್ಘಾನಿಸ್ತಾನದಿಂದ ವಾಪಸ್ಸಾದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ.. ಅವರು ಬಹುತೇಕ ಸೈನಿಕರನ್ನ ಹಿಂದಕ್ಕೆ ಕರೆಸಿಕೊಂಡಿದ್ದಾರೆ. ನಮಗಿದು ಅತ್ಯಂದ ಸಂತಸದ ಘಳಿಗೆ ಎಂದು ಹೇಳಿದ್ದಾರೆ.

Source: newsfirstlive.com Source link