1.5 ಕೋಟಿ ಆದಾಯ ಗಳಿಸುತ್ತಿದ್ದ ಆರೋಪದಡಿ ಬಿಗ್‍ಬಿ ಬಾಡಿ ಗಾರ್ಡ್ ವರ್ಗಾವಣೆ

ಮುಂಬೈ: ಬಾಲಿವುಡ್ ನಟ ಬಿಗ್ ಬಿ ಅಮಿತಾಬ್ ಬಚ್ಚನ್ ತಮ್ಮ ಬಾಡಿಗಾರ್ಡ್ ಜಿತೇಂದ್ರ ಶಿಂಧೆಗೆ ವಾರ್ಷಿಕ 1.5 ಕೋಟಿ ವೇತನ ನೀಡುತ್ತಾರೆ. ಇದು ದೇಶದ ಅನೇಕ ಖಾಸಗಿ ಕಂಪನಿಗಳ ಸಿಇಒಗಳ ಸಂಬಳಕ್ಕಿಂತ ಹೆಚ್ಚಾಗಿದೆ ಎಂಬ ಆರೋಪ ಬಳಿಕ ಇದೀಗ ಜಿತೇಂದ್ರ ಶಿಂಧೆರನ್ನು ವರ್ಗಾಯಿಸಲಾಗಿದ್ದು, ಈ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಮುಂಬೈ ಪೊಲೀಸ್ ಇಲಾಖೆಗೆ ಕಾನ್ಸ್‌ಸ್ಟೇಬಲ್‌ ಆಗಿ ಸೇರಿಕೊಂಡ ಜಿತೇಂದ್ರ ಶಿಂಧೆ ಅವರನ್ನು ಅಮಿತಾಬ್ ಬಚ್ಚನ್ ಅಂಗರಕ್ಷಕರಾಗಿ ನೇಮಿಸಲಾಯಿತು. ಕಳೆದ ಹಲವು ವರ್ಷಗಳಿಂದ ಜೀತೆಂದ್ರ ಶಿಂಧೆ ಬಿಗ್‍ಬಿ ಅಂಗ ರಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇತ್ತೀಚೆಗೆ ಜೀತೆಂದ್ರ ಶಿಂಧೆಯವರ ವಾರ್ಷಿಕ ಆದಾಯ 1.5 ಕೋಟಿ ಎಂಬ ಸುದ್ದಿ ಹೊರಬಂದಿದ್ದು, ಜೀತೆಂದ್ರ ಶಿಂಧೆ ಅಮಿತಾಬ್ ಬಚ್ಚನ್ ಅಥವಾ ಬೇರೆಯವರಿಂದ ಹಣ ಸಂಪಾದಿಸುತ್ತಿದ್ದಾರೆಯೇ ಎಂದು ಮುಂಬೈ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ:ಸೋನು ಸೂದ್ ‘ದೇಶ್ ಕೆ ಮೆಂಟರ್ಸ್’ ಕಾರ್ಯಕ್ರಮದ ಬ್ರ್ಯಾಂಡ್ ಅಂಬಾಸಿಡರ್: ಅರವಿಂದ್ ಕೇಜ್ರಿವಾಲ್

ಈ ಬಗ್ಗೆ ಶಿಂಧೆ ತಮ್ಮ ಪತ್ನಿ ಭದ್ರತಾ ಏಜೆನ್ಸಿಗಳನ್ನು ನಡೆಸುತ್ತಿದ್ದಾರೆ. ಈ ಭದ್ರತಾ ಏಜೆನ್ಸಿ ಮೂಲಕ ಹಲವಾರು ಸೆಲಬ್ರೆಟಿಗಳಿಗೆ ಮತ್ತು ಹೆಸರಾಂತ ಗಣ್ಯರಿಗೆ ಭದ್ರತೆಯನ್ನು ಒದಗಿಸಲಾಗುತ್ತಿದೆ. ಅಲ್ಲದೇ ತಮ್ಮ ಪತ್ನಿಯ ಹೆಸರಿನಲ್ಲಿ ಭದ್ರತಾ ವ್ಯವಹಾರಗಳನ್ನು ನಡೆಸುತ್ತಿದ್ದೇನೆ. ಜೊತೆಗೆ ಅಮಿತಾಬ್ ಬಚ್ಚನ್ 1.5 ಕೋಟಿ ರೂಪಾಯಿ ವೇತನ ಪಾವತಿಸುತ್ತಿಲ್ಲ ಎಂದು ಪೊಲೀಸರಿಗೆ ಹೇಳಿದ್ದಾರೆ. ಇದನ್ನೂ ಓದಿ:ಮಹಿಳೆಯರ ವಿರುದ್ಧದ ಅಪರಾಧಗಳತ್ತ ಕಣ್ಣು ಮುಚ್ಚಬೇಡಿ, ಮಾತನಾಡಿ: ರಮ್ಯಾ

blank

ಮುಂಬೈ ಪೊಲೀಸರ ಪ್ರಕಾರ ಒಬ್ಬ ಪೊಲೀಸನ್ನು ಒಂದೇ ಸ್ಥಳದಲ್ಲಿ 5 ವರ್ಷಕ್ಕಿಂತ ಹೆಚ್ಚು ಕಾಲ ನಿಯೋಜಿಸಲಾಗುವುದಿಲ್ಲ. ಜಿತೇಂದ್ರ ಶಿಂಧೆ 2015ರಿಂದ ಅಮಿತಾಬ್ ಬಚ್ಚನ್‍ಗಾಗಿಯೇ ಕೆಲಸ ಮಾಡುತ್ತಿದ್ದಾರೆ. ಬಚ್ಚನ್ ಸೆಕ್ಯೂರಿಟಿಗಾಗಿ ಇಬ್ಬರು ಕಾನ್ಸ್‌ಸ್ಟೇಬಲ್‌ಗಳನ್ನು ಯೋಜಿಸಲಾಗಿದ್ದು, ಅದರಲ್ಲಿ ಜಿತೇಂದ್ರ ಶಿಂಧೆ ಅಮಿತಾಬ್ ಬಚ್ಚನ್‍ರವರ ನೆಚ್ಚಿನ ಬಾಡಿಗಾರ್ಡ್ ಆಗಿದ್ದರು. ಅಮಿತಾಬ್ ಬಚ್ಚನ್ ಹೋದ ಕಡೆಯಲೆಲ್ಲಾ ಜಿತೇಂದ್ರ ಶಿಂಧೆ ಕಾಣಿಸಿಕೊಳ್ಳುತ್ತಿದ್ದರು. ಇದೀಗ ಅವರನ್ನು ದಕ್ಷಿಣ ಮುಂಬೈನ ಪೊಲೀಸ್ ಸ್ಟೇಷನ್‍ಗೆ ವರ್ಗಾಯಿಸಲಾಗಿದೆ.

Source: publictv.in Source link