ಇವನೇ ನೋಡಿ ಕಾಬೂಲ್ ಆತ್ಮಾಹುತಿ ದಾಳಿಕೋರ ಉಗ್ರ; ISIS-Kನಿಂದ ಫೋಟೋ ರಿಲೀಸ್

ಇವನೇ ನೋಡಿ ಕಾಬೂಲ್ ಆತ್ಮಾಹುತಿ ದಾಳಿಕೋರ ಉಗ್ರ; ISIS-Kನಿಂದ ಫೋಟೋ ರಿಲೀಸ್

ತಾಲಿಬಾನಿಗಳ ವಶವಾಗಿರುವ ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್​ ಏರ್​ಪೋರ್ಟ್​ ಬಳಿ ನಿನ್ನೆ ರಾತ್ರಿ ನಡೆದ ಸರಣಿ ಆತ್ಮಹತ್ಯಾ ಬಾಂಬ್ ದಾಳಿಯಲ್ಲಿ 100ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಸದ್ಯ ಘಟನೆಗೆ ಸಂಬಂಧಿಸಿದಂತೆ ಕೃತ್ಯ ನಡೆಸಿದ್ದು ನಾವೇ ಎಂದು ಐಎಸ್​ಐಎಸ್​-ಕೆ ಹೇಳಿಕೊಂಡಿದೆ.

ಇದನ್ನೂ ಓದಿ: ಕಾಬೂಲ್ ಏರ್​ಪೋರ್ಟ್​ನಲ್ಲಿ ಉಗ್ರರ ಅಟ್ಟಹಾಸ;​ 103 ಕ್ಕೇರಿದ ಸಾವಿನ ಸಂಖ್ಯೆ

ಇದರ ಮುಂದುವರಿದ ಭಾಗವಾಗಿ ಐಎಸ್​ಐಎಸ್​-ಕೆ ಆತ್ಮಹತ್ಯಾ ದಾಳಿ ನಡೆಸಿದ ಓರ್ವ ಉಗ್ರನ ಫೋಟೋವನ್ನೂ ಬಿಡುಗಡೆ ಮಾಡಿದೆ. ಉಗ್ರನ ಹೆಸರು ಅಬ್ದುಲ್ ರೆಹಮಾನ್ ಅಲ್-ಲೋಘ್ರಿಯಾಗಿದ್ದು ಈತನೇ ಐಸಿಸ್​ ಪರವಾಗಿ ಆತ್ಮಹತ್ಯಾ ದಾಳಿ ನಡೆಸಿದ್ದು ಎಂದು ಹೇಳಿಕೊಂಡಿದೆ.

ಇದನ್ನೂ ಓದಿ: ‘ನೀವು ಎಲ್ಲಿದ್ದರೂ ಹುಡುಕಿ ಹೊಡೆಯುತ್ತೇವೆ.. ಬೆಲೆ ತೆತ್ತುವಂತೆ ಮಾಡ್ತೇವೆ’- ಉಗ್ರರಿಗೆ ಅಮೆರಿಕ ವಾರ್ನಿಂಗ್

ಇನ್ನು ಐಎಸ್​ಐಎಸ್​-ಕೆ 2015 ರಲ್ಲಿ ರಚನೆಯಾದ ಉಗ್ರ ಸಂಘಟನೆಯಾಗಿದ್ದು ಇದರಲ್ಲಿನ K ಅಂದ್ರೆ ಖೋರಾಸನ್ ಎಂದಾಗಿದ್ದು ಇದು ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಮಧ್ಯ ಏಷ್ಯಾದಲ್ಲಿ ಉಗ್ರರನ್ನ ಹೊಂದಿದೆ ಎನ್ನಲಾಗಿದೆ.

ಇನ್ನು ಈ ಸಂಘಟನೆ ಈ ಹಿಂದೆ ಸಾರ್ವಜನಿಕರ ಮೇಲೆ 100ಕ್ಕೂ ಹೆಚ್ಚು ಬಾರಿ ಹಾಗೂ ಯುಎಸ್​, ಆಫ್ಘನ್ ಮತ್ತು ಪಾಕಿಸ್ತಾನದ ಭದ್ರತಾ ಸೇವೆಯ ಮೇಲೆ 250ಕ್ಕೂ ಹೆಚ್ಚು ಬಾರಿ ದಾಳಿ ನಡೆಸಿದೆ ಎನ್ನಲಾಗಿದೆ. ಮೇ ತಿಂಗಳಲ್ಲಿ ಐಎಸ್​ಐಎಸ್​-ಕೆ ಮೂರು ಬಾರಿ ಕಾರ್ ಬಾಂಬ್ ದಾಳಿ ನಡೆಸಿ 68 ಅಫ್ಘನ್​ ಪ್ರಜೆಗಳನ್ನ ಕೊಂದಿತ್ತು ಎಂಬ ಮಾಹಿತಿ ಇದೆ.

Source: newsfirstlive.com Source link