ಐಪಿಎಲ್​​ಗಾಗಿ ಆಟಗಾರರಿಗೆ ಹೆಚ್ಚಿದ ಬೇಡಿಕೆ.. ಜೋರಾಗಿದೆ ರಿಪ್ಲೇಸ್​ಮೆಂಟ್​​ ಸರ್ಕಸ್​​.!

ಐಪಿಎಲ್​​ಗಾಗಿ ಆಟಗಾರರಿಗೆ ಹೆಚ್ಚಿದ ಬೇಡಿಕೆ.. ಜೋರಾಗಿದೆ ರಿಪ್ಲೇಸ್​ಮೆಂಟ್​​ ಸರ್ಕಸ್​​.!

2ನೇ ಹಂತದ ಮಿಲಿಯನ್​ ಡಾಲರ್ ಟೂರ್ನಿ ಸೆಪ್ಟೆಂಬರ್​ 19ರಿಂದ ಮರು ಆಯೋಜನೆಗೊಳ್ಳಲಿದೆ. ಆದರೆ ಈ ನಡುವೆ ಫ್ರಾಂಚೈಸಿಗಳು ದ್ವಿತಿಯಾರ್ಧಕ್ಕೆ ಅಲಭ್ಯರಾಗುವ ಆಟಗಾರರ ಸ್ಥಾನಕ್ಕೆ ಬದಲೀ ಆಟಗಾರನ್ನ ಖರೀದಿಸುವತ್ತ ಚಿತ್ತ ನೆಟ್ಟಿವೆ. ಹಾಗಾದ್ರೆ ಯಾವೆಲ್ಲಾ ತಂಡಗಳು, ಯಾವ ಆಟಗಾರರನ್ನ ಆಯ್ಕೆ ಮಾಡಿಕೊಂಡಿವೆ.?

blank

ಕಲರ್​ಫುಲ್​ ಟೂರ್ನಿ ಇಂಡಿಯನ್​ ಪ್ರೀಮಿಯರ್​​ ಲೀಗ್​​​​ ಮತ್ತೆ ರಂಗು ಪಡೆದುಕೊಳ್ಳಲು ಕೆಲವು ದಿನಗಳಷ್ಟೇ ಬಾಕಿಯಿದೆ. 2ನೇ ಹಂತದ ಪಂದ್ಯಗಳ ಆರಂಭಕ್ಕೂ ಮುನ್ನ ಫ್ರಾಂಚೈಸಿಗಳು ಶ್ರೀಮಂತ ಲೀಗ್​​​​​​ಗೆ ಅಲಭ್ಯರಾಗುವ ಆಟಗಾರರ ರಿಪ್ಲೇಸ್​​​​​ ಮಾಡಿಕೊಳ್ಳುವಲ್ಲಿ ಬ್ಯುಸಿಯಾಗಿವೆ. ಕಳೆದ ವಾರವಷ್ಟೆ ಮೂವರನ್ನ ಖರೀದಿಸಿದ್ದ ಆರ್​​ಸಿಬಿ, ಇದೀಗ ಮತ್ತೊಬ್ಬರನ್ನ ತಂಡಕ್ಕೆ ಸೇರಿಸಿಕೊಂಡಿದೆ. ಅದೇ ರೀತಿ ಕೊಲ್ಕತ್ತಾ ನೈಟ್​ ರೈಡರ್ಸ್​, ರಾಜಸ್ಥಾನ್​ ರಾಯಲ್ಸ್, ಪಂಜಾಬ್​ ಕಿಂಗ್ಸ್​ ಕೂಡ ಬದಲೀ ಆಟಗಾರರನ್ನ ಖರೀದಿಸಿವೆ.

blank

ಈಗಾಗಲೇ IPL​​ಗೆ ಗೈರಾಗುವ ಆ್ಯಡಂ ಜಂಪಾ ಸ್ಥಾನಕ್ಕೆ ವನಿಂದು ಹಸರಂಗ, ಡೇನಿಯಲ್​ ಸ್ಯಾಮ್​​​​ಗೆ ದುಷ್ಮಂತ ಚಮೀರಾ ಆರ್​​ಸಿಬಿಯಲ್ಲಿ ರಿಪ್ಲೇಸ್​ ಆಗಿದ್ದಾರೆ. ಜೊತೆಗೆ ಇನ್ನು ಫಿನ್​ ಅಲೆನ್​​ ಜಾಗಕ್ಕೆ ಟಿಮ್ ಡೇವಿಡ್​ ಒಪ್ಪಂದ ಮಾಡಿಕೊಂಡಿದ್ದಾರೆ. ಇದೀಗ ಆಸಿಸ್​​ ವೇಗಿ ಕೇನ್​ ರಿಚರ್ಡ್​ಸನ್​ ಜಾಗಕ್ಕೆ ಇಂಗ್ಲೆಂಡ್​​ನ ಬೌಲರ್​ ಜಾರ್ಜ್​ ಗಾರ್ಟನ್​​ ಬೋಲ್ಡ್​ ಆರ್ಮಿ ಸೇರಿದ್ದಾರೆ.

ಕೆಕೆಆರ್​​ಗೆ ಕಮಿನ್ಸ್​​ ಅಲಭ್ಯ, ತಂಡ ಸೇರಿದ ನ್ಯೂಜಿಲೆಂಡ್​ ವೇಗಿ.!

ಕೊಲ್ಕತ್ತಾ ನೈಟ್​ ರೈಡರ್ಸ್​ ತಂಡದಲ್ಲಿ ಕೀ ಪ್ಲೇಯರ್​ ಪ್ಯಾಟ್​ ಕಮಿನ್ಸ್​ 2ನೇ ಚರಣದ ಐಪಿಎಲ್​ನಿಂದ ವೈಯಕ್ತಿಕ ಕಾರಣ ನೀಡಿ ಹಿಂದೆ ಸರಿದಿದ್ದಾರೆ. ಹಾಗಾಗಿ ಕೆಕೆಆರ್​ ಫ್ರಾಂಚೈಸಿ ನ್ಯೂಜಿಲೆಂಡ್​​​ ವೇಗಿ ಟಿಮ್​ ಸೌಥಿಗೆ ಗಾಳ ಹಾಕಿದೆ.

ಜೋಫ್ರಾ ಆರ್ಚರ್​​ ಜಾಗಕ್ಕೆ ಗ್ಲೇನ್​​ ಫಿಲಿಪ್ಸ್​​​ರನ್ನ ಖರೀದಿ​​.!

ಇಂಜುರಿಗೆ ಒಳಗಾಗಿ ಮೊದಲಾರ್ಧ IPL​ನಿಂದಲೂ ಹೊರಗುಳಿದಿದ್ದ ವೇಗಿ ಜೋಫ್ರಾ ಆರ್ಚರ್​​ ಇನ್ನೂ ಚೇತರಿಕೆಯಾಗಿಲ್ಲ. ಈ ಹಿನ್ನೆಲೆ ದ್ವಿತಿಯಾರ್ಧಕ್ಕೂ ಅಲಭ್ಯರಾಗ್ತಿದ್ದಾರೆ. ಹಾಗಾಗಿ ಅವರ ಬದಲಿಗೆ ನ್ಯೂಜಿಲೆಂಡ್​​ನ ವಿಕೆಟ್​ ಕೀಪರ್​ ಬ್ಯಾಟ್ಸ್​​​ಮನ್​ ಗ್ಲೇನ್​​ ಫಿಲಿಪ್ಸ್​​​ರನ್ನ ರಾಜಸ್ಥಾನ್​ ರಾಯಲ್​ ಖರೀದಿಸಿದೆ. ಇನ್ನ ಮತ್ತೊಬ್ಬ ವೇಗಿ ಆ್ಯಂಡ್ರೂ ಟೈ ಬದಲಿಗೆ ವಿಶ್ವದ ನಂಬರ್​ 1 ಟಿ20 ಬೌಲರ್​ ತಬ್ರೀಜ್​ ಶಂಶಿ ಜೊತೆಗೆ ಒಪ್ಪಂದ ಮಾಡಿಕೊಂಡಿದೆ. ಇನ್ನು ಬೆನ್​ಸ್ಟೋಕ್ಸ್​ ಸ್ಥಾನಕ್ಕೆ ಇನ್ನೂ ಆಟಗಾರನ ಹುಡುಕಾಟ ನಡೀತಿದೆ.

blank

ಪಂಜಾಬ್​​​ ಕಿಂಗ್ಸ್​​ ತಂಡಕ್ಕೆ ಕಾಲಿಟ್ಟ ಇಂಗ್ಲೆಂಡ್​ ಲೆಗ್​ಬ್ರೇಕ್​ ಬೌಲರ್​.!

ಪಂಜಾಬ್​ ಕಿಂಗ್ಸ್​ ತಂಡದ ವೇಗಿಗಳಾದ ರಿಲೆ ಮೆರಿಡಿತ್​ -ಜಾಯ್​ ರಿಚರ್ಡ್​​ಸನ್​ ಕೂಡ ಗೈರಾಗಲಿದ್ದಾರೆ. ಹಾಗಾಗಿ ರಿಚರ್ಡ್​​​ಸನ್​ಗೆ ಬದಲಿಗೆ ಇಂಗ್ಲೆಂಡ್​​ ಲೆಗ್​ಬ್ರೇಕ್​ ಸ್ಪಿನ್ನರ್​ ಆದಿಲ್​ ರಶೀದ್​, ಮೆರಿಡಿತ್​ ಸ್ಥಾನಕ್ಕೆ ಆಸಿಸ್​​ನ ನಥನ್​ ಎಲ್ಲಿಸ್​ರನ್ನ ಪಂಜಾಬ್​ ಖರೀದಿಸಿದೆ. ಇಷ್ಟೇ ಅಲ್ಲ..! ಐಪಿಎಲ್​ ಆರಂಭಕ್ಕೂ ಮುನ್ನ ಮತ್ತಷ್ಟು ಆಟಗಾರರು ಅಲಭ್ಯರಾಗುವ ಸಾಧ್ಯತೆ ಹೆಚ್ಚಿದೆ. ಆದ್ರೆ, ಬಿಸಿಸಿಐ ರಿಪ್ಲೆಸ್​ಮೆಂಟ್​ಗೆ ನೀಡಿರುವ ಕಾಲಾವಕಾಶವನ್ನ ಎಕ್ಸ್​​ಟೆಂಡ್​ ಮಾಡೋ ಸಾದ್ಯತೆ ಕಡಿಮೆಯಿದೆ.

 

Source: newsfirstlive.com Source link