ಇಲ್ಲಿವರೆಗೂ ಅತ್ಯಾಚಾರಿಗಳನ್ನ ಪತ್ತೆಮಾಡೋಕೆ ಆಗ್ತಿಲ್ವಾ..? ಪೊಲೀಸರಿಗೆ ಸಿಎಂ ತರಾಟೆ

ಇಲ್ಲಿವರೆಗೂ ಅತ್ಯಾಚಾರಿಗಳನ್ನ ಪತ್ತೆಮಾಡೋಕೆ ಆಗ್ತಿಲ್ವಾ..? ಪೊಲೀಸರಿಗೆ ಸಿಎಂ ತರಾಟೆ

ಮೈಸೂರು: ಯುವತಿ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಬಸವರಾಜ ಬೊಮ್ಮಾಯಿ ಪೊಲೀಸ್ ಅಧಿಕಾರಿಗಳ ವಿರುದ್ಧ ಕೆಂಡಾಮಂಡಲರಾಗಿದ್ದಾರೆ.

ಬೆಳಗ್ಗೆ ಪೊಲೀಸ್ ಉನ್ನತಾಧಿಕಾರಿಗಳಿಗೆ ಸಿಎಂ ತರಾಟೆ ತೆಗೆದುಕೊಂಡಿದ್ದು.. ಅನ್ಯರಾಜ್ಯದ ವಿದ್ಯಾರ್ಥಿನಿ ಮೇಲೆ ರೇಪ್ ಆಗಿದೆ.. ಇದು ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಇಲ್ಲಿಯವರೆಗೂ ಆರೋಪಿಗಳನ್ನು ಪತ್ತೆಮಾಡೋಕೆ ಆಗ್ತಿಲ್ವಾ? ಇದು ನಮ್ಮ‌ ಸರ್ಕಾರದ ಇಮೇಜ್ ಗೆ ಕುಂದು ತರುತ್ತೆ. ನಾನು ಇಂತದ್ದಕ್ಕೆಲ್ಲ ಅವಕಾಶ ಕೊಡುವವನಲ್ಲ.. ಕೂಡಲೇ ಆರೋಪಿಗಳನ್ನ ಬಂಧಿಸಿ.. ಘಟನೆಯ ಸಂಪೂರ್ಣ ಮಾಹಿತಿಯನ್ನ ನೀಡಿ. ಪೊಲೀಸರ ಕರ್ತವ್ಯ ಲೋಪ ಇದೆಯಾ ಈ ಬಗ್ಗೆ ವರದಿ ಕೊಡಿ ಎಂದು ಸಿಎಂ ತರಾಟೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.

Source: newsfirstlive.com Source link