ಬಿಬಿಎಂಪಿ ವ್ಯಾಪ್ತಿಯಲ್ಲಿ ನಾಳೆಯಿಂದ “ಕೋವಿಡ್-19 ಲಸಿಕಾ ಮೇಳ” ಈಗ ಗುರಿ ಏನು?

ಬಿಬಿಎಂಪಿ ವ್ಯಾಪ್ತಿಯಲ್ಲಿ ನಾಳೆಯಿಂದ “ಕೋವಿಡ್-19 ಲಸಿಕಾ ಮೇಳ” ಈಗ ಗುರಿ ಏನು?

ರಾಜ್ಯದಲ್ಲಿ ಕೊವಿಡ್-19 ಲಸಿಕಾಕರಣ ಹೆಚ್ಚಿಸುವ ನಿಟ್ಟಿನಲ್ಲಿ ದಿನಾಂಕ, 27-08-2021ರಂದು ಅಂದ್ರೆ ನಾಳೆ ರಾಜ್ಯದಾದ್ಯಂತ “ಕೋವಿಡ್ -19 ಲಸಿಕಾ ಮೇಳ”ವನ್ನು ಹಮ್ಮಿಕೊಳ್ಳಲಾಗಿದ್ದು, ಲಸಿಕಾ ಮೇಳದ ಅಂಗವಾಗಿ ಪಾಲಿಕೆ ವ್ಯಾಪ್ತಿಯಲ್ಲಿ 1,25,000 ಮಂದಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದೆ.

blank

ಪಾಲಿಕೆಯ ಆಯಾ ವಲಯ ಮಟ್ಟದಲ್ಲಿ ನಿಗದಿತ ಗುರಿ ಸಾಧಿಸಲು ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದ್ದು, ನಗರದ ಪ್ರಾಥಮಿಕ ಆರೋಗ್ಯ ಕೇಂದ್ರ ಸೇರಿದಂತೆ ಲಸಿಕೆ ನೀಡುವ ಸ್ಥಳದಲ್ಲಿ ಯಾವುದೇ ಸಮಸ್ಯೆಯಾಗಂತೆ ಲಸಿಕೆ ನೀಡಲು ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ.ನಗರದ ಆಯಾ ವಾರ್ಡ್‌ಗಳಿಗೆ ಅವಶ್ಯಕ ಲಸಿಕೆಗಳನ್ನು ಮುಂಚಿತವಾಗಿಯೇ ಪೂರೈಸಲಾಗುವುದು.ಲಸಿಕೆ ನೀಡುವ ಸಲುವಾಗಿ ಹೆಚ್ಚು ಸೆಷನ್‌ಗಳನ್ನು ಮಾಡಿಕೊಂಡು ಅಗತ್ಯ ಸಿಬ್ಬಂದಿನ್ನು ನಿಯೋಜಿಸಿಕೊಂಡು ಲಸಿಕೆ ನೀಡಲು ವ್ಯವಸ್ಥೆ ಮಾಡಿಕೊಳ್ಳಲಾಗಿರುತ್ತದೆ. ಲಸಿಕಾ ಮೇಳ ಹಮ್ಮಿಕೊಂಡಿರುವ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಿ , ಲಸಿಕೆ ನೀಡುವ ಸ್ಥಳದಲ್ಲಿ ಕಡ್ಡಾಯವಾಗಿ ಕೊವಿಡ್ ನಿಯಮಗಳನ್ನು ಪಾಲಿಸಲು ಆರೋಗ್ಯಾಧಿಕಾರಿಗಳಿಗೆ ಸೂಚನೆ ನೀಡಲಾಗಿರುತ್ತದೆ.

blank

ಲಸಿಕಾ ಮೇಳದ ಅಂಶಗಳು:

  • ಇದುವರೆಗೆ ಒಂದೂ ಡೋಸ್ ಲಸಿಕೆ ಪಡೆಯದ ಆರೋಗ್ಯ ಕಾರ್ಯಕರ್ತರ ಮತ್ತು ಮುಂಚೂಣಿ ಕಾರ್ಯಕರ್ತರ ಶೇ.100 ರಷ್ಟು ಕೋವಿಡ್ -19 ಲಸಿಕಾಕರಣ
  • 2ನೇ ಡೋಸ್‌ಗೆ ಬಾಕಿ ಇರುವ ಆರೋಗ್ಯ ಕಾರ್ಯಕರ್ತರ ಮತ್ತು ಮುಂಚೂಣಿ ಕಾರ್ಯಕರ್ತರ ಶೇ.100ರಷ್ಟು ಕೊವಿಡ್ -19 ಲಸಿಕಾಕರಣ
  • 60 ವರ್ಷ ಮೇಲ್ಪಟ್ಟವರ 1 ನೇ ಡೋಸ್ ಹಾಗೂ 2 ನೇ ಡೋಸ್ ಕೋವಿಡ್ ಲಸಿಕಾಕರಣ
  • ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳ 1 ರಿಂದ 10 ನೇ ತರಗತಿ, ಪದವಿ ಪೂರ್ವ ಕಾಲೇಜಿನ(11ನೇ ಹಾಗೂ 12ನೇ ತರಗತಿ ಅನ್ವಯಿಸುವಲ್ಲಿ) ಭೋದಕ ಭೋದಕೇತರ ಸಿಬ್ಬಂದಿಗಳು ಇನ್ನೂ ಕೋವಿಡ್-19 ಲಸಿಕೆ ಪಡೆಯದಿದ್ದಲ್ಲಿ ಅವರಿಗೆ ಲಸಿಕಾಕರಣ
  • 18 ವರ್ಷ ಮೇಲ್ಪಟ್ಟ ಅರ್ಹ ಫಲಾನುಭವಿಗಳ ಕೋವಿಡ್-19 ಲಸಿಕೆಯನ್ನ ನೀಡಬೇಕು

blank

Source: newsfirstlive.com Source link