ಮಹಿಳಾ ವೈದ್ಯೆಯ ಮೇಲೆ ಹಲ್ಲೆ.. ಆ್ಯಸಿಡ್​ ಹಾಕೋದಾಗಿ ಬೆದರಿಕೆ ಆರೋಪ

ಮಹಿಳಾ ವೈದ್ಯೆಯ ಮೇಲೆ ಹಲ್ಲೆ.. ಆ್ಯಸಿಡ್​ ಹಾಕೋದಾಗಿ ಬೆದರಿಕೆ ಆರೋಪ

ಬೆಂಗಳೂರು: ಆಸ್ಪತ್ರೆಗೆ ನುಗ್ಗಿ ಮಹಿಳಾ ವೈದ್ಯರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ, ಆಸ್ಪತ್ರೆಯ ಪೀಠೋಪಕರಣ ಧ್ವಂಸ ಮಾಡಿದ ಘಟನೆ ನಗರದ ಕೆಂಗೇರಿಯಲ್ಲಿ ನಡೆದಿದೆ.

ನಗರದ ಮಾತೃ ಆಸ್ಪತ್ರೆಗೆ ನುಗ್ಗಿದ ದುಷ್ಕರ್ಮಿಗಳು, ಆಸ್ಪತ್ರೆ ಕಟ್ಟಡ ಮತ್ತು ಹಣಕಾಸಿನ ವಿಚಾರವಾಗಿ ಆಸ್ಪತ್ರೆಯ ವೈದ್ಯೆ ಜೀಶಾ ಹಾಗೂ ರಶ್ಮಿ ಎಂಬುವರ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.

blank

ಆಸ್ಪತ್ರೆ ಕಟ್ಟಡದ ಮಾಲೀಕರ ಜೊತೆ ಆಸ್ಪತ್ರೆ ಆಡಳಿತ ಮಂಡಳಿ ನಡುವೆ ಗಲಾಟೆ ನಡೆದಿದೆ ಎನ್ನಲಾಗಿದ್ದು, ಕಟ್ಟಡದ ಮಾಲೀಕ ಕಿಶೋರ್ ಕುಮಾರ್ ಆಂಡ್ ಗ್ಯಾಂಗ್ ಆಸಿಡ್ ಹಾಕುವುದಾಗಿ ಬೆದರಿಕೆ ಹಾಕಿ, ಹಲ್ಲೆ ಮಾಡಿರುವುದಾಗಿ ಹಲ್ಲೆಗೊಳಗಾದ ವೈದ್ಯರು ಆರೋಪ ಮಾಡಿದ್ದಾರೆ. ಜೊತೆಗೆ ಆಸ್ಪತ್ರೆಯ ಸಿಬ್ಬಂದಿಯ ಮೇಲೂ ಹಲ್ಲೆ ಮಾಡಿರುವುದಾಗಿ ಆರೋಪಿಸಿದ್ದಾರೆ.

ಇದನ್ನೂ ಓದಿ: ಓದಿದ್ದು ಇಂಜಿನಿಯರಿಂಗ್​, ಮಾಡ್ತಿರೋದು ಕಳ್ಳತನ.. ಕಾಲೇಜುಗಳೇ ಈತನ ಟಾರ್ಗೆಟ್

ಹಲ್ಲೆ ಬಳಿಕ ಬ್ಯಾಟರಾಯನಪುರ ಉಪ ವಿಭಾಗದ ಎಸಿಪಿಗೆ ದೂರು ನೀಡಿದ ವೈದ್ಯೆ ಜೀಶಾ ಹಾಗೂ ರಶ್ಮಿ, ಕೆಂಗೇರಿ ಠಾಣಾ ಇನ್ಸ್ ಪೆಕ್ಟರ್ ವಿರುದ್ದ ವಸಂತ್ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿದ್ದು, ದೂರು ನೀಡಿದರೂ ದೂರು ಸ್ವೀಕಾರ ಮಾಡ್ತಿಲ್ಲ ಎಂದು ಹೇಳಿದ್ದಾರೆ..

ಏನಿದು ಪ್ರಕರಣ..?

ಕಳೆದ ಮೂರು ವರ್ಷಗಳ ಹಿಂದೆ ಮಾತೃ ಆಸ್ಪತ್ರೆಯನ್ನ ವೈದ್ಯೆ ಜಿಶಾ ಲೀಸ್​ಗೆ ಹಾಕಿಕೊಂಡಿದ್ದರು.. ಒಟ್ಟು 10 ವರ್ಷಕ್ಕೆ ಅಗ್ರಿಮೆಂಟ್ ಮಾಡಿಕೊಳ್ಳಲಾಗಿತ್ತು. ಅಗ್ರಿಮೆಂಟ್ ಮುಗಿಯೋಕೆ ಇನ್ನೂ ಏಳು ವರ್ಷ ಬಾಕಿ ಇದೆ.. ಆದ್ರೆ ಇವಾಗ್ಲೇ ಖಾಲಿ ಮಾಡಿ ಅಂತಿರೋ ಕಟ್ಟಡದ ಮಾಲೀಕ ಕಿಶೋರ್ ಒತ್ತಾಯ ಹಾಕಿದ್ದಾರೆ ಎನ್ನಲಾಗಿದೆ.

ಅಗ್ರಿಮೆಂಟ್ ಮುಗಿದ್ಮೇಲೆ ಖಾಲಿ ಮಾಡ್ತೀನಿ ಅಂತ ವೈದ್ಯೆ ಜಿಶಾ ಹೇಳಿದ್ದು ಈ ವಿಚಾರಕ್ಕೆ ಇಬ್ಬರ ಮಧ್ಯೆಯೂ ಜಗಳವಾಗ್ತಿತ್ತಂತೆ. ಇದೇ ವಿಚಾರಕ್ಕೆ ತನ್ನ ಕಡೆಯವರನ್ನ ಕಳುಹಿಸಿ ಕಿಶೋರ್ ಹಲ್ಲೆ ಮಾಡಿಸಿದ್ದಾರೆ. ಕಳೆದ 24 ನೇ ತಾರೀಖು ಕೂಡ ಹಲ್ಲೆ ಮಾಡಿರೋದಾಗಿ ಹಲ್ಲೆ ಮಾಡಿ ಆ್ಯಸಿಡ್ ಹಾಕೋದಾಗಿ ಬೆದರಿಕೆಯೊಡ್ಡಿದ್ದಾರೆ ಎಂದಿದ್ದಾರೆ. ಈ ಬಗ್ಗೆ ಕೆಂಗೇರಿ ಠಾಣೆಗೆ ದೂರು ನೀಡಿದ್ರು ದೂರು ತೆಗೆದುಕೊಂಡಿಲ್ಲ ಅಂತಾ ಆಕ್ರೋಶ ಹೊರಹಾಕಿದ್ದಾರೆ.

Source: newsfirstlive.com Source link