ಅಂದು ಅಡಿಲೇಡ್​, ಈಗ ಲೀಡ್ಸ್​ನಲ್ಲಿ ದಿಢೀರ್​ ಕುಸಿತ.. ‘ಈ’ ​ ಪದ್ಧತಿ ಅನುಸರಿಸಿದ್ರೆ, ಎಲ್ಲದಕ್ಕೂ ಸಿಗುತ್ತಾ ಪರಿಹಾರ.?

ಅಂದು ಅಡಿಲೇಡ್​, ಈಗ ಲೀಡ್ಸ್​ನಲ್ಲಿ ದಿಢೀರ್​ ಕುಸಿತ.. ‘ಈ’ ​ ಪದ್ಧತಿ ಅನುಸರಿಸಿದ್ರೆ, ಎಲ್ಲದಕ್ಕೂ ಸಿಗುತ್ತಾ ಪರಿಹಾರ.?

ಭಾರತದಲ್ಲಿ ಮಾತ್ರವಲ್ಲ ವಿದೇಶಗಳಲ್ಲೂ ಇತ್ತೀಚಿನ ದಿನಗಳಲ್ಲಿ ಟೀಮ್​ ಇಂಡಿಯಾ ಟೆಸ್ಟ್​ ಮಾದರಿಯಲ್ಲಿ ಸುಲಭವಾಗಿ ಗೆಲುವನ್ನ ದಾಖಲಿಸ್ತಿದೆ. ಆದ್ರೆ, ಇದೇ ಸಮಯದಲ್ಲಿ ಕಳಪೆ ಪ್ರದರ್ಶನಗಳೂ ಬಂದಿದೆ. ವಿಶ್ವದ ಎಲ್ಲಾ ತಂಡಗಳಿಗೆ ಕಠಿಣ ಸವಾಲಾಗಿರೋ ಕೊಹ್ಲಿ ಪಡೆ, ಆಗಾಗ ಹೀನಾಯ ಪ್ರದರ್ಶನ ನೀಡ್ತಿರೋದ್ಯಾಕೆ.?

ಕಳೆದ ಕೆಲ ವರ್ಷಗಳಿಂದ ಟೆಸ್ಟ್​ ಮಾದರಿಯಲ್ಲಿ ಟೀಮ್​ ಇಂಡಿಯಾದ ಪಾರುಪತ್ಯ ಅಮೋಘವಾಗಿ ಸಾಗ್ತಿದೆ. ತವರಿನಲ್ಲಿ ಮಾತ್ರ ಹೀರೋಗಳು ಎಂಬ ಹಣೆಪಟ್ಟಿಯನ್ನ ಕಳಚಿ ವಿದೇಶಿ ಪಿಚ್​​ಗಳಲ್ಲೂ ಕೊಹ್ಲಿ ಪಡೆ ಗೆದ್ದು ಬೀಗ್ತಿದೆ. ಇದಕ್ಕೆ ಆಸ್ಟ್ರೇಲಿಯಾ ನೆಲದಲ್ಲಿ ಕಳೆದ ಎರಡು ಬಾರಿ ಬಾರ್ಡರ್​​-ಗವಾಸ್ಕರ್​​ ಸರಣಿಯಲ್ಲಿ ಜಯಿಸಿರೋದೆ ಸಾಕ್ಷಿ.

blank

ಇದನ್ನೂ ಓದಿ: ದುಬಾರಿ ಪಾಂಡ್ಯ..! ಅವರ ವಾಚ್​​ನ ಬೆಲೆ ಎಷ್ಟು ಕೋಟಿಯದ್ದು ಗೊತ್ತಾ..?

ಆದ್ರೆ, ಸಕ್ಸಸ್​ಫುಲ್​ ಜರ್ನಿ ಹೀನಾಯ ಪ್ರದರ್ಶನಗಳಿಗೆ ಸಾಕ್ಷಿಯಾಗಿದೆ ಅನ್ನೋದನ್ನ ಮರೆಯುವಂತಿಲ್ಲ. ಆಸ್ಟ್ರೇಲಿಯಾದ ಅಡಿಲೇಡ್​​ನಲ್ಲಿ 36 ರನ್​ಗಳಿಗೆ ಸರ್ವಪತನ ಕಂಡಿದ್ದು, ಇದೀಗ ಹೆಡಿಂಗ್ಲೆಯಲ್ಲಿ 78 ರನ್​ಗಳಿಗೆ ಆಲೌಟ್​ ಆಗಿರೋದೆ ಇದಕ್ಕೆ ಸಾಕ್ಷಿಯಾಗಿ ನಿಂತಿದೆ. ವಿಶ್ವದ ಎಲ್ಲಾ ಕ್ರಿಕೆಟ್​ ತಂಡಗಳ ಪಾಲಿಗೆ ಕಠಿಣ ಸವಾಲಾಗಿರುವ ಟೀಮ್​ ಇಂಡಿಯಾ ಹೀಗೆ ಕಳಪೆ ಪ್ರದರ್ಶನಕ್ಕೆ ಗುರಿಯಾಗ್ತಿರೋದು ಯಾಕೆ ಅನ್ನೋ ಚರ್ಚೆ ಎಲ್ಲೆಡೆ ನಡೀತಾ ಇದೆ. ಇದಕ್ಕೆ ‘too much cricket’​​ ಅನ್ನೋದಷ್ಟೇ ಉತ್ತರವಾಗಿದೆ. ಲೀಡ್ಸ್​ನಲ್ಲಿ ನೀಡಿದ ಕಳಪೆ ಪ್ರದರ್ಶನದ ಬಳಿಕ ಪಾಕ್​ ಮಾಜಿ ಕ್ರಿಕೆಟಿಗ ಸಲ್ಮಾನ್​ ಭಟ್​ ಕೂಡ ಇದೇ ಅಭಿಪ್ರಾಯ ತಿಳಿಸಿದ್ದಾರೆ.

‘ಭಾರತ ಶ್ರೇಷ್ಠ ತಂಡ ಅನ್ನೋದ್ರಲ್ಲಿ ಅನುಮಾನವೇ ಇಲ್ಲ. ಅದನ್ನ ದೇಶ-ವಿದೇಶಗಳಲ್ಲಿ ತಂಡ ನಿರೂಪಿಸಿದೆ. ಆದ್ರೆ, ಭಾರತ 36 ರನ್​ಗಳಿಗೆ ಅಡಿಲೇಡ್​​ನಲ್ಲಿ, 78 ರನ್​ಗಳಿಗೆ ಹೆಡಿಂಗ್ಲಿಯಲ್ಲಿ ಆಲ್​​​​​ಔಟ್​ ಆಗಿರೋದಕ್ಕೆ ಅತಿಯಾದ ಕ್ರಿಕೆಟ್​​​ ಕಾರಣ ಎಂದು ನನಗನಿಸುತ್ತದೆ. ಟೀಮ್​ ಇಂಡಿಯಾ ಬ್ಯುಸಿ ಶೆಡ್ಯೂಲ್​​ ಹೊಂದಿದೆ. ಹೀಗಿದ್ದಾಗ ನೀವು ಎಷ್ಟೇ ಉತ್ತಮ ಆಟಗಾರನಾಗಿದ್ರೂ, ಒಬ್ಬ ಮನುಷ್ಯನಾಗಿ ದೇಹ, ಮನಸ್ಸು ಸ್ಪಂದಿಸಲ್ಲ’
       -ಸಲ್ಮಾನ್​ ಭಟ್​, ಮಾಜಿ ಕ್ರಿಕೆಟಿಗ

ಸಲ್ಮಾನ್​ ಭಟ್​ ಹೇಳಿದ್ದು ಅಕ್ಷರಶಃ ಸತ್ಯ.! ಟೀಮ್​ ಇಂಡಿಯಾಗಿರೋ ಬ್ಯುಸಿ ಶೆಡ್ಯೂಲ್​ ಈ ವೈಫಲ್ಯಕ್ಕೆ ಕಾರಣವಾಗಿದೆ. ಟೀಮ್​ ಇಂಡಿಯಾ ಟೆಸ್ಟ್​ ತಂಡವನ್ನೇ ಗಮನಿಸಿದ್ರೆ, ಕೆಲ ಆಟಗಾರರು ಬಹಳ ದೀರ್ಘ ಕಾಲದಿಂದಲೇ ತಂಡದ ಅವಿಭಾಜ್ಯ ಅಂಗವಾಗಿದ್ದಾರೆ. ಅದರಲ್ಲೂ ಭಾರತಕ್ಕಿರುವ ಬ್ಯುಸಿ ಶೆಡ್ಯೂಲ್​ನಲ್ಲಿ 3 ಮಾದರಿಯಲ್ಲೂ ಆಟಗಾರರು ಆಡ್ತಿದ್ದಾರೆ. ಇದೇ ಈಗ ಪ್ರದರ್ಶನದ ಮೇಲೆ ಪರಿಣಾಮ ಬೀರ್ತಿದೆ. ಮಧ್ಯಮ ಕ್ರಮಾಂಕದ ಅನುಭವಿಸ್ತಾ ಇರೋ ಸತತ ವೈಫಲ್ಯವೇ ಇದಕ್ಕೆ ಪ್ರಮುಖ ಕಾರಣ.

blank

ಭಾರತದ ಈ ಸಮಸ್ಯೆಗೆ ರೋಟೇಶನ್​ ಪದ್ಧತಿಯೊಂದೆ ಪರಿಹಾರವಾಗಿದೆ. ಇದರಿಂದ ಆಟಗಾರರಿಗೆ ವಿಶ್ರಾಂತಿ ಸಿಗೋದಲ್ದೇ, ಇನ್ನುಳಿದ ಆಟಗಾರರಿಗೂ ಅವಕಾಶ ಸಿಗುತ್ತೆ ಅನ್ನೋದು ತಜ್ಞರ ಸಲಹೆಯಾಗಿದೆ. ಟೀಮ್​ ಇಂಡಿಯಾದ ಬೆಂಚ್​​ ಸ್ಟ್ರೆಂಥ್​​ ಹೆಚ್ಚಿರೋ ಕಾರಣ ಇದನ್ನ ಅನುಸರಿಸಲುಬಹುದಾಗಿದೆ. ಹೀಗಾಗಿ ಟೀಮ್​ ಮ್ಯಾನೇಜ್​ಮೆಂಟ್​​​ ಯಾವ ನಿರ್ಧಾರ ತೆಗೆದುಕೊಳ್ಳುತ್ತೆ ಅನ್ನೋದು ಕುತೂಹಲ ಮೂಡಿಸಿದೆ.

 

Source: newsfirstlive.com Source link