‘ಹೋಗಿ ಸಾಯ್ರಿ.. ಜಾಸ್ತಿ ತಿನ್ಬೇಡ್ರಿ..’ ಅನ್ನೋದು ಬಿಜೆಪಿ ಸಂಸ್ಕೃತಿ- ಆರ್. ಧ್ರುವನಾರಾಯಣ್

‘ಹೋಗಿ ಸಾಯ್ರಿ.. ಜಾಸ್ತಿ ತಿನ್ಬೇಡ್ರಿ..’ ಅನ್ನೋದು ಬಿಜೆಪಿ ಸಂಸ್ಕೃತಿ- ಆರ್. ಧ್ರುವನಾರಾಯಣ್

ಮೈಸೂರು: ಅಕ್ಕಿ ಕೇಳಿದವರಿಗೆ ಹೋಗಿ ಸಾಯ್ರಿ ಎನ್ನೋದು, ಅಕ್ಕಿ ಕೊಡಲಾಗದೆ- ಜಾಸ್ತಿ ತಿನ್ಬೇಡ್ರಿ ಅನ್ನೋದು ಕೈಲಾಗದ ಬಿಜೆಪಿಯ ವರಸೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ ವಾಗ್ದಾಳಿ ನಡೆಸಿದ್ದಾರೆ.

ಗ್ಯಾಂಗ್ ರೇಪ್ ಪ್ರಕರಣ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೈಸೂರಲ್ಲಿ ನಾಲ್ಕು ದಿನದ ಹಿಂದೆ ಶೂಟೌಟ್ ನಡೆದಿದೆ, ನಂತರ ಗ್ಯಾಂಗ್ ರೇಪ್ ನಡೆದಿದೆ ಆದರೆ ಯಾರನ್ನೂ ಸಹ ಸರ್ಕಾರ ಇನ್ನೂ ಪತ್ತೆ ಹಚ್ಚಿಲ್ಲ. ಗೃಹ ಸಚಿವ ಕಾಂಗ್ರೆಸ್ ನವರು ನನ್ನನ್ನು ರೇಪ್ ಮಾಡ್ತಿದ್ದಾರೆ ಅಂತ ಬೇಜವಾಬ್ದಾರಿ ಹೇಳಿಕೆ ಕೊಟ್ಟಿದ್ದಾರೆ. ಅವರ ಕ್ಷೇತ್ರದಲ್ಲೇ ಓರ್ವ ಯುವತಿ ಸಾವನ್ನಪ್ಪಿದ್ದಾಳೆ ಕೂಡಲೇ ಆರೋಪಿಗಳ ಪತ್ತೆ ಮಾಡಬೇಕು. ಈ ಕುರಿತು ಮೈಸೂರಿನಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಮೆರವಣಿಗೆ ಸಹಿತ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ ಎಂದರು.

ಇದನ್ನೂ ಓದಿ: ಮೈಸೂರಿನಲ್ಲಿ ವ್ಯವಸ್ಥೆ ಹದಗೆಟ್ಟಿದೆ ಎಂದು ತಿಂಗಳ ಹಿಂದೆಯೇ ಹೇಳಿದ್ದೆ- ಇಂದ್ರಜಿತ್ ಲಂಕೇಶ್

Source: newsfirstlive.com Source link