ಅಮಿತಾಬ್​ ಹೆಸರಲ್ಲಿದ್ದ ರೋಲ್ಸ್​ ರಾಯ್ಸ್​ ಕಾರು ಸೀಜ್: ಮಾಲೀಕನಿಗೆ ವಾಪಸ್ ಕೊಟ್ಟ RTO

ಅಮಿತಾಬ್​ ಹೆಸರಲ್ಲಿದ್ದ ರೋಲ್ಸ್​ ರಾಯ್ಸ್​ ಕಾರು ಸೀಜ್: ಮಾಲೀಕನಿಗೆ ವಾಪಸ್ ಕೊಟ್ಟ RTO

ಬೆಂಗಳೂರು: ನಗರದಲ್ಲಿ ಇನ್ಸೂರೆನ್ಸ್ ಇಲ್ಲದೆ ಓಡಾಡ್ತಿದ್ದ ಅಮಿತಾಬ್ ಬಚ್ಚನ್ ಹೆಸರಲ್ಲಿ ನೋಂದಣಿಯಾಗಿದ್ದ ಬಾಬು ಎಂಬುವವರಿಗೆ ಸೇರಿದ ರೋಲ್ಸ್​ ರಾಯ್ಸ್ ಕಾರನ್ನ ಪೊಲೀಸರು ಜಪ್ತಿ ಮಾಡಿದ್ದರು. ಇದೀಗ ಜಪ್ತಿ  ಮಾಡಲಾದ ಕಾರನ್ನು ವಾಪಸ್ ನೀಡಿರುವುದಾಗಿ RTO ಅಧಿಕಾರಿ ಗುರುಮೂರ್ತಿ ತಿಳಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ರೋಲ್ಸ್​​ ರಾಯ್ಸ್​ ಸೀಜ್ ಕೇಸ್​​; ಅಮಿತಾಭ್​ ಬಚ್ಚನ್​​ಗೆ ನೋಟಿಸ್​​​​​

ಈ ಕುರಿತು ಮಾತನಾಡಿದ ಯಲಹಂಕ RTO ಅಧಿಕಾರಿ ಗುರುಮೂರ್ತಿ, ಕಾರಿಗೆ ಲೈಫ್ ಟೈಂ ತೆರಿಗೆ ಕಟ್ಟಿಲ್ಲ ಎಂದು ಕಾರು ಜಪ್ತಿ ಮಾಡಲಾಗಿತ್ತು. ಮತ್ತು ಅವರು ಗಾಡಿಯ ಎನ್​ಓಸಿ ಯನ್ನು ಕೂಡ ತೆಗೆದುಕೊಂಡು ಬಂದಿಲ್ಲ. ಅವರು ಕಾರಿನ ಹೊಗೆ ತಪಾಸಣೆ ಮತ್ತು ಇನ್ಶೂರೆನ್ಸ್ ಕೂಡ ಕಟ್ಟಿರಲಿಲ್ಲ. ಹಾಗಾಗಿ ನಾವು 5,500 ರೂಪಾಯಿ ಫೈನ್ ಹಾಕಿ ಜಫ್ತಿ ಮಾಡಿದ್ವಿ. ಆದರೆ ಲೈಫ್ ಟೈಂ ಟ್ಯಾಕ್ಸ್​ ಅವರು 2007ರಲ್ಲಿ ಕಟ್ಟಿದ್ದಾರೆ.

blank

ಇನ್ನು ಕಾರಿನ ನೋಂದಣಿ ಸಂಖ್ಯೆ ನನಗೆ ಬಹಳ ಲಕ್ಕಿ ನಂಬರ್​ ಎಂದು ಅವರು ಹೇಳಿದ್ದಾರೆ. ಆ ಕುರಿತು ಮುಚ್ಚಳಿಕೆ ಪತ್ರವನ್ನ ಕೂಡ ಬರೆದು ಕೊಟ್ಟಿದ್ದಾರೆ. ಕರ್ನಾಟಕದಲ್ಲಿ ಉಪಯೋಗ ಮಾಡಬೇಕು ಅಂದ್ರೆ ಕರ್ನಾಟಕದ ತೆರಿಗೆಯನ್ನ ಕಟ್ಟಿ ಅದನ್ನ ರಿಫಂಡ್ ಮಾಡಿಕೊಳ್ಳೋದಾಗಿ ಹೇಳಿದ್ದಾರೆ. ಹೀಗಾಗಿ ನಾವು ವಾಹನವನ್ನು ರಿಲೀಸ್​ ಮಾಡಿದ್ದೇವೆ ಎಂದು ಯಲಹಂಕ RTO ಅಧಿಕಾರಿ ಗುರುಮೂರ್ತಿ ತಿಳಿಸಿದ್ದಾರೆ.

ಇದನ್ನೂ ಓದಿ: ನೆಲಮಂಗಲ RTO ಅಧಿಕಾರಿಗಳಿಂದ ಸೀಜ್ ಆಯ್ತು ಅಮಿತಾಭ್ ಬಚ್ಚನ್ ಹೆಸರಿನಲ್ಲಿರೋ ಕಾರ್

ಕಾರು​ ವಾಪಸ್ ಪಡೆದ ಖುಷಿಯಲ್ಲಿರುವ ಕಾರ್​ ಮಾಲೀಕ ಬಾಬು, ನನಗೆ ಕಾರಿನ ಮಾಲೀಕತ್ವ ಬದಲಾವಣೆಯಾಗದೇ ಇದಿದ್ದು ಗೊತ್ತಿರಲಿಲ್ಲ. ನನ್ನ ಮ್ಯಾನೇಜರ್ ಯಡವಟ್ಟಿನಿಂದ ಇಷ್ಟೆಲ್ಲ ಸಂಭವಿಸಿದೆ. ನಾನು ಕೂಡ ಗಾಡಿ ಬಂದಿರೋ ಖುಷಿಯಲ್ಲಿ ಕಾರನ್ನ ನನ್ನ ಹೆಸರಿಗೆ ಮಾಡಿಸುವುದನ್ನ ಮರೆತುಬಿಟ್ಟಿದ್ದೆ ಎಂದಿದ್ದಾರೆ.

 

ಇದನ್ನೂ ಓದಿ:ಅಮೆರಿಕ ಅವಳಿ ಕಟ್ಟಡಗಳ ಮೇಲೆ ದಾಳಿ ಮಾಡಿದ್ದು ‘ಬಿನ್ ಲಾಡೆನ್ ಅಲ್ವೇ ಅಲ್ಲ’ ಎಂದ ತಾಲಿಬಾನ್

Source: newsfirstlive.com Source link