ರೇಪ್​ ಕೇಸ್:​​ 5 ನಿಮಿಷದಲ್ಲಿ ಸ್ಥಳ ಪರಿಶೀಲನೆ; 1 ನಿಮಿಷದಲ್ಲಿ ಪೊಲೀಸರಿಂದ ಮಾಹಿತಿ ಪಡೆದ ಜ್ಞಾನೇಂದ್ರ

ರೇಪ್​ ಕೇಸ್:​​ 5 ನಿಮಿಷದಲ್ಲಿ ಸ್ಥಳ ಪರಿಶೀಲನೆ; 1 ನಿಮಿಷದಲ್ಲಿ ಪೊಲೀಸರಿಂದ ಮಾಹಿತಿ ಪಡೆದ ಜ್ಞಾನೇಂದ್ರ

ಮೈಸೂರು: ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ನಡೆದ ಸ್ಥಳಕ್ಕೆ ಗೃಹಸಚಿವ ಆರಗ ಜ್ಞಾನೇಂದ್ರ ಭೇಟಿ ನೀಡಿದ್ದರು. ಆದರೆ ರಸ್ತೆಯಲ್ಲೇ ನಿಂತು ಕಾಟಾಚಾರಕ್ಕೆ ಗೃಹಸಚಿವರು ಪರಿಶೀಲನೆ ನಡೆಸಿದ್ದಾರೆ ಎನ್ನಲಾಗಿದೆ. ಘಟನೆ ನಡೆದ ನಿಖರ ಸ್ಥಳಕ್ಕೂ ಸಹ ಸಚಿವರು ಭೇಟಿ ನೀಡಿಲ್ಲ ಎನ್ನಲಾಗಿದೆ.

ಕೇವಲ ಐದು ನಿಮಿಷಕ್ಕೆ ಸಚಿವರ ಭೇಟಿ ಸೀಮಿತವಾಗಿದ್ದು ಹೀಗೆ ಬಂದು ಹಾಗೆ ಹೋಗಿದ್ದಾರೆ ಎನ್ನಲಾಗಿದೆ. ಇನ್ನು ಈ ವೇಳೆ ಮಾಧ್ಯಮಗಳಿಗೂ ಪ್ರತಿಕ್ರಿಯೆ ನೀಡಲು ತಿರಸ್ಕರಿಸಿದ್ದಾರಂತೆ. ಇನ್ನು ಸ್ಥಳ ಪರಿಶೀಲನೆ ವೇಳೆಯೂ ಯಾವುದೋ ಫೋನ್ ಕರೆಯಲ್ಲಿ ಸಚಿವರು ನಿರತರಾಗಿದ್ದರಂತೆ.. ಬಳಿಕ ಪೊಲೀಸ್ ಆಯಕ್ತರಿಂದ ಒಂದು‌ ನಿಮಿಷದ ಮಾಹಿತಿ ಪಡೆದು ಅಲ್ಲಿಂದ ಸಚಿವರು ತೆರಳಿದ್ದಾರೆ ಎಂದು ಹೇಳಲಾಗಿದೆ.

Source: newsfirstlive.com Source link