ಸಾಮೂಹಿಕ ಅತ್ಯಾಚಾರ: ಚುರುಕುಗೊಂಡ ತನಿಖೆ.. ಬರೋಬ್ಬರಿ 1,000 ಜನರ ವಿಚಾರಣೆ

ಸಾಮೂಹಿಕ ಅತ್ಯಾಚಾರ: ಚುರುಕುಗೊಂಡ ತನಿಖೆ.. ಬರೋಬ್ಬರಿ 1,000 ಜನರ ವಿಚಾರಣೆ

ಮೈಸೂರು: ಸಾಂಸ್ಕೃತಿಕ ನಗರದಲ್ಲ್ಲಿ ನಡೆದ ಗ್ಯಾಂಗ್ ರೇಪ್‌‌ ಪ್ರಕರಣಕ್ಕೆ ಸಂಬಂಧಪಟ್ಟಂತೆ, ಪೊಲೀಸ್​ ತನಿಖೆ ಚುರುಕುಗೊಂಡಿದೆ. ಪ್ರಕರಣವನ್ನು ಶೀಘ್ರವಾಗಿ ಭೇದಿಸಲು ಹಲವು ಆಯಾಮಗಳಲ್ಲಿ ವಿಚಾರಣೆಯನ್ನು ನಡೆಸಲಾಗ್ತಿದೆ. ಈವರೆಗೆ ಬರೋಬ್ಬರಿ 1,000 ಮಂದಿಯನ್ನು ವಿಚಾರಣೆ ನಡೆಸಿರುವುದಾಗಿ ನ್ಯೂಸ್​ಫಸ್ಟ್​ಗೆ ಮಾಹಿತಿ ಲಭ್ಯವಾಗಿದೆ.

ಘಟನೆ ನಡೆದ ಎರಡೂವರೆ ದಿನದಲ್ಲಿ 1,000 ಮಂದಿಯನ್ನು ವಿಚಾರಣೆಗೊಳಪಡಿಸಲಾಗಿದೆ. ಮೈಸೂರು ಪೊಲೀಸ್​ ವಿಶೇಷ ತಂಡದಿಂದ ವಿಚಾರಣೆ ನಡೆಸಲಾಗ್ತಿದೆ. ಘಟನೆ ನಡೆದ ಸಮಯದಲ್ಲಿ ಚಾಮುಂಡಿ ಬೆಟ್ಟದ ವ್ಯಾಪ್ತಿಯ ಮೊಬೈಲ್ ಟವರ್​​ನಲ್ಲಿ ದಾಖಲಾದ ನಂಬರ್​ಗಳನ್ನು ಕಲೆ ಹಾಕಿರುವ ಪೊಲೀಸರು, ಘಟನೆ ನಡೆದ ಮುಂಚಿನ ಮತ್ತು ಘಟನೆ ನಡೆದ ನಂತರದ ಆಸುಪಾಸಿನ 5 ಗಂಟೆಗಳ ಅವಧಿಯ ಮೊಬೈಲ್​ ನಂಬರ್ ಗಳನ್ನು ಪರಿಶೀಲಿಸಲಾಗುತ್ತಿದೆ ಅನ್ನೋ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ: ಗುರಿ ತಪ್ಪಿದ ಗೃಹಸಚಿವ; ಅತ್ಯಾಚಾರ ನಡೆದ ಸ್ಥಳ ಪರಿಶೀಲನೆ ಮಾಡದೇ ಗನ್ ಹಿಡಿದು ಟೈಂಪಾಸ್?

ಅಂದು ಸಾವಿರಾರು ನಂಬರ್​ಗಳು ಘಟನಾ ಸ್ಥಳದ ಟವರ್​ನಲ್ಲಿ ಆಕ್ಟೀವ್​ ಆಗಿದೆ. ಆದರೆ ಕೆಲ ನಂಬರ್​ಗಳು ಮಾತ್ರ ಮೂವ್​ಮೆಂಟ್ ಆಗಿವೆ ಎನ್ನಲಾಗಿದೆ. ಅವುಗಳಲ್ಲಿ 1,000ಕ್ಕೂ ಹೆಚ್ಚು ಮಂದಿಯನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

ಎಡಿಜಿಪಿ ಪ್ರತಾಪ್ ರೆಡ್ಡಿ ನೇತೃತ್ವದಲ್ಲಿ ತನಿಖೆ ನಡೆದಿದ್ದು, ಯುವಕನ ಹೇಳಿಕೆ ಆಧಾರಿಸಿ ರೇಖಾ ಚಿತ್ರ ತಯಾರಿಕೆಗೆ ಪ್ಲಾನ್ ಮಾಡಲಾಗಿದೆ. ಯುವಕನ ಹೇಳಿಕೆ ಮೂಲಕ ಆರೋಪಿಗಳ ಗುರುತು ಪಡೆಯುತ್ತಿರುವ ಟೀಂ, ರೇಖಾ ಚಿತ್ರ ಬರೆಯಿಸಿ ಆರೋಪಿಗಳ ಪತ್ತೆಗೆ ಮುಂದಾಗಿದೆ. ಇಂದು ಸಂಜೆಯೊಳಗೆ ಆರೋಪಿಗಳ ರೇಖಾಚಿತ್ರ ಬಿಡುಗಡೆ ಮಾಡುವ ಸಾಧ್ಯತೆಗಳಿವೆ ಎಂದು ನ್ಯೂಸ್​ಫಸ್ಟ್​ಗೆ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ: ಸಾಮೂಹಿಕ ಅತ್ಯಾಚಾರ: ಈ ಶಾಕ್​ನಿಂದ ಹೊರಬರುವವರೆಗೆ ಏನೂ ಕೇಳಬೇಡಿ ಎಂದು ಕಣ್ಣೀರಿಟ್ಟ ಯುವತಿ

Source: newsfirstlive.com Source link