ಬೀಗ ಮುರಿದು ಕೆನರಾ ಬ್ಯಾಂಕ್​ನಲ್ಲಿ ಕಳ್ಳತನ.. ಒಂದು ಲಕ್ಷಕ್ಕೂ ಅಧಿಕ ಹಣ ಉಡೀಸ್​

ಬೀಗ ಮುರಿದು ಕೆನರಾ ಬ್ಯಾಂಕ್​ನಲ್ಲಿ ಕಳ್ಳತನ.. ಒಂದು ಲಕ್ಷಕ್ಕೂ ಅಧಿಕ ಹಣ ಉಡೀಸ್​

ಕೋಲಾರ: ಬೀಗ ಮುರಿದು ಕೆನರಾ ಬ್ಯಾಂಕ್​ನಲ್ಲಿ ಕಳ್ಳತನ ಮಾಡಿರೋ ಘಟನೆ ಜಿಲ್ಲೆಯ, ಮದನಹಳ್ಳಿ ಬ್ರ್ಯಾಂಚ್​ನಲ್ಲಿ ನಡೆದಿದೆ.

ಕಳೆದ ರಾತ್ರಿ ಕಳ್ಳರ ತಂಡವೊಂದು ಈ ಕೃತ್ಯ ನಡೆಸಿದ್ದಾರೆ, ಕಳ್ಳತನ ಮಾಡುವ ವೇಳೆ, ಸಿಸಿ ಕ್ಯಾಮರಾ ಹಾಗೂ ಸೈರನ್​ನ ಸಂಪರ್ಕ ಕಡಿತಗೊಳಿಸಿ ಕಳ್ಳತನ ಮಾಡಿದ್ದಾರೆ. ಬ್ಯಾಂಕ್​ನಲ್ಲಿದ್ದ ಸುಮಾರು ಒಂದು ಲಕ್ಷಕ್ಕೂ ಅಧಿಕ ಮೌಲ್ಯದ ಚಿಲ್ಲರೆ ನಾಣ್ಯವನ್ನ ಕಳ್ಳತನ ಮಾಡಿ ಎಸ್ಕೇಪ್​ ಆಗಿದ್ದಾರೆ. ಅಷ್ಟೇ ಅಲ್ಲ, ಬ್ಯಾಂಕ್ ಲಾಕರ್ ಒಡೆಯಲು ಪ್ರಯತ್ನಿಸಿದ್ದಾರೆ. ಆದ್ರೆ ಅದು ವಿಫಲವಾದ ಕಾರಣ ಲಾಕರ್​ನ ಮುಟ್ಟದೇ ಹಾಗೇ ಬಿಟ್ಟು ಹೋಗಿದ್ದಾರೆ. ಸದ್ಯ, ಸ್ಥಳಕ್ಕೆ ಕೋಲಾರ ಗ್ರಾಮಾಂತರ ಠಾಣಾ ಪೊಲೀಸರ ಬೇಟಿ ಪರಿಶೀಲನೆ ನಡೆಸಿದ್ದಾರೆ

Source: newsfirstlive.com Source link