ಲೀಡ್ಸ್​​ ಟೆಸ್ಟ್: 432 ರನ್​ಗಳಿಗೆ ಇಂಗ್ಲೆಂಡ್​ ಆಲೌಟ್​​, 354 ರನ್​ಗಳ ಮುನ್ನಡೆ

ಲೀಡ್ಸ್​​ ಟೆಸ್ಟ್: 432 ರನ್​ಗಳಿಗೆ ಇಂಗ್ಲೆಂಡ್​ ಆಲೌಟ್​​, 354 ರನ್​ಗಳ ಮುನ್ನಡೆ

ಭಾರತದ ವಿರುದ್ಧದ 3ನೇ ಟೆಸ್ಟ್​ ಪಂದ್ಯದ ಮೊದಲ ಇನ್ನಿಂಗ್ಸ್​ನಲ್ಲಿ 432 ರನ್​ಗಳಿಗೆ ಇಂಗ್ಲೆಂಡ್​ ತಂಡ ಆಲೌಟ್​ ಆಗಿದೆ.

ಇದರೊಂದಿಗೆ ಪಂದ್ಯದಲ್ಲಿ 354 ರನ್​ಗಳ ಮುನ್ನಡೆ ಸಾಧಿಸಿದೆ. 8 ವಿಕೆಟ್​​ ನಷ್ಟಕ್ಕೆ 423 ರನ್​ಗಳೊಂದಿಗೆ 3ನೇ ದಿನದಾಟ ಆರಂಭಿಸಿದ ಇಂಗ್ಲೆಂಡ್​​, ಇಂದು 9 ರನ್​ಗಳಿಸುವಷ್ಟರಲ್ಲಿ 2 ವಿಕೆಟ್​​ ಕಳೆದುಕೊಂಡಿತು. 32 ರನ್​​ಗಳಿಸಿ ಕ್ರೇಗ್​ ಓವರ್​​ಟನ್ ಮೊಹಮದ್​ ಶಮಿಗೆ ವಿಕೆಟ್​​ ಒಪ್ಪಿಸಿದ್ರು. ಅದರ ಮರು ಓವರ್​ನಲ್ಲೇ ಒಲಿ ರಾಬಿನ್ಸನ್​ ಬೂಮ್ರಾ ಬೌಲಿಂಗ್​ನಲ್ಲಿ ಕ್ಲೀನ್​ ಬೋಲ್ಡ್​ ಆದ್ರು. ಇದರೊಂದಿಗೆ ಇಂಗ್ಲೆಂಡ್​​​ 432 ಆಲೌಟ್​ ಆಯ್ತು.

Source: newsfirstlive.com Source link