BREAKING: ಕುಸಿದ ಡೆಹ್ರಾಡೂನ್-ರಿಶಿಕೇಶ್ ಬ್ರಿಡ್ಜ್​​ – ಸಂಚರಿಸುತ್ತಿದ್ದ ವಾಹನಗಳು ಪಲ್ಟಿ

BREAKING: ಕುಸಿದ ಡೆಹ್ರಾಡೂನ್-ರಿಶಿಕೇಶ್ ಬ್ರಿಡ್ಜ್​​ – ಸಂಚರಿಸುತ್ತಿದ್ದ ವಾಹನಗಳು ಪಲ್ಟಿ

ಉತ್ತರಾಖಂಡ್​ನ ಡೆಹ್ರಾಡೂನ್​​ನ ರಾಣಿಪೊಖರಿ-ರಿಶಿಕೇಶ್ ರಸ್ತೆಯಲ್ಲಿರುವ ಬ್ರಿಡ್ಜ್​​​ ಒಂದು ಕುಸಿದು ಬಿದ್ದು ಅನಾಹುತ ಸಂಭವಿಸಿದೆ. ಕಳೆದ ಒಂದು ವಾರದಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಅವಘಡ ಸಂಭವಿಸಿದೆ ಅಂತಾ ಹೇಳಲಾಗಿದೆ.

Image

ಬ್ರಿಡ್ಜ್​ ಕುಸಿದು ಬೀಳುತ್ತಿರುವ ಸಂದರ್ಭದಲ್ಲಿ ವಾಹನಗಳ ಸಂಚಾರ ಇತ್ತು. ಹೀಗಾಗಿ ಕೆಲವು ವಾಹನಗಳು ಅವಘಡದಲ್ಲಿ ಸಿಲುಕಿಕೊಂಡಿವೆ. ಟ್ರಕ್ ಒಂದು ಉಲ್ಟಾ ಪಲ್ಟಿ ಹೊಡೆದಿದೆ. ಜೊತೆಗೆ ಕಾರೊಂದು ಕುಸಿದು ಬ್ರಿಡ್ಜ್​​ ಮಧ್ಯದಲ್ಲಿ ಸಿಲುಕಿಕೊಂಡಿದೆ.

Image

ಈ ದುರ್ಘಟನೆ ನಡೆದ ದೃಶ್ಯ ಕ್ಯಾಮೆರದಲ್ಲಿ ಸೆರೆಯಾಗಿದೆ. ಸಾವು ನೋವು ಸಂಭವಿಸಿರುವ ಬಗ್ಗೆ ಯಾವುದೇ ವರದಿಯಾಗಿಲ್ಲ. ಸ್ಥಳಕ್ಕೆ ರಕ್ಷಣಾ ಪಡೆ ದೌಡಾಯಿಸಿದ್ದು, ರಕ್ಷಣಾಕಾರ್ಯ ಮುಂದುವರಿದಿದೆ.

Source: newsfirstlive.com Source link