RRR ಶೂಟಿಂಗ್ ಕಂಪ್ಲೀಟ್ ; ಅದಕ್ಕಾಗಿ ರಾಜಮೌಳಿ ತೆಗೆದುಕೊಂಡ ಟೈಮ್​ ಎಷ್ಟು ಗೊತ್ತಾ?

RRR ಶೂಟಿಂಗ್ ಕಂಪ್ಲೀಟ್ ; ಅದಕ್ಕಾಗಿ ರಾಜಮೌಳಿ ತೆಗೆದುಕೊಂಡ ಟೈಮ್​ ಎಷ್ಟು ಗೊತ್ತಾ?

ಟಾಲಿವುಡ್ ಲೋಕದ ಸೋಲಿಲ್ಲದ ಸರದಾರ ಎಸ್​.ಎಸ್.ರಾಜಮೌಳಿ ಸಿನಿಮಾಗಳ ಶೂಟಿಂಗ್ ಅಂದ್ರೆನೇ ದೊಡ್ಡ ಮ್ಯಾರಥನ್ ಇದ್ದಂಗೆ.. ಎರಡ್ಮೂರು ವರ್ಷ ಇಲ್ದಂಗೆ ಶೂಟಿಂಗ್ ಕಂಪ್ಲೀಟ್ ಆಗಿದ್ದೇ ಇಲ್ಲ.. ಈಗ ಕೊನೆಗೂ ‘ರೌದ್ರ ರಣ ರುಧಿರ’ ಸಿನಿಮಾದ ಶೂಟಿಂಗ್​ಗೆ ಇತಿಶ್ರೀ ಹಾಡಿದ್ದಾರೆ ಜಕ್ಕಣ್ಣ..

ಕಥೆಗಾರ ಕೆ.ವಿ.ವಿಜಯೇಂದ್ರ ಪ್ರಸಾದ್ ತನ್ನ ಮಗ ಸ್ಟಾರ್ ಡೈರೆಕ್ಟರ್ ಎಸ್​.ಎಸ್.ರಾಜಮೌಳಿ ಅವರಿಗೆ ಯಾವಾಗಲು ಒಂದು ಮಾತನ್ನ ಹೇಳುತ್ತಿರುತ್ತಾರಂತೆ.. ‘‘ಬೇಗ ಬೇಗ ಶೂಟಿಂಗ್ ಮುಗಿಸು ಇಷ್ಟೊಂದು ಡಿಲೆ ಮಾಡಬಾರದು’’, ‘‘ಪೂರಿ ಜಗನ್ನಾಥ್ ಅವರನ್ನ ನೋಡಿ ಕಲಿ’’ ‘‘ಅವರ ಎಷ್ಟು ಬೇಗ ಶೂಟಿಂಗ್ ಮುಗಿಸುತ್ತಾರೆ ಅನ್ನೋದನ್ನ’’ ಅಂತ ಕಿವಿ ಮಾತು ಹೇಳುತ್ತಾ ಇರುತ್ತಾರಂತೆ. ಆದ್ರೆ ರಾಜಮೌಳಿ ಸ್ಲೋ ಅವರ ಸಿನಿಮಾ ಕಥೆ ಅಷ್ಟೊಂದು ಸ್ಲೋ ಆಗಿ ಆಗಿರುತ್ತೋ ಗೊತ್ತಿಲ್ಲ ಒಟ್ಟಿನಲ್ಲಿ ಕನಿಷ್ಠ ಒಂದು ಆದ್ರು ಆಗೇ ಆಗುತ್ತೆ ರಾಜಮೌಳಿ ಹಿಡಿದ ಸಿನಿಮಾ ಶೂಟಿಂಗ್ ಯಾನ.. ಈಗ ಅಂತು ಇಂತು ಥ್ರಿಬಲ್ ಆರ್ ಸಿನಿಮಾದ ಶೂಟಿಂಗ್ ಕಂಪ್ಲೀಟ್ ಆಗಿದೆ.

blank

ರಾಜಮೌಳಿ ಸಾರಥ್ಯದ RRR ಶೂಟಿಂಗ್ ಕಂಪ್ಲೀಟ್
ಅದ್ಯಾಕೆ ರಾಜಮೌಳಿ ಸಿನಿಮಾ ಶೂಟಿಂಗ್ ಸ್ಲೋ..?

2001ರಲ್ಲಿ ತೆರೆಕಂಡ ಸ್ಟುಡೆಂಟ್ ನಂಬರ್ ಒನ್ ಸಿನಿಮಾದಿಂದ ಹಿಡಿದು ಈ ಥ್ರಿಬಲ್ ಆರ್ ಸಿನಿಮಾದ ತನಕ ರಾಜಮೌಳಿ ಮಾಡೋ ಸಿನಿಮಾಗಳ ಶೂಟಿಂಗ್ ಕನಿಷ್ಠ ವರ್ಷ ಆದ್ರು ಆಗೇ ಆಗುತ್ತೆ.. ರಾಜಮೌಳಿ ಶೂಟಿಂಗ್ ವಿಚಾರವಾಗಿ ಈ ಹಿಂದೆ ರಾಜಮೌಳಿ ಅವರ ತಂದೆ ಕೆ.ವಿ.ವಿಜಯೇಂದ್ರ ಪ್ರಸಾದ್ ಹಾಗೂ ರಾಜಮೌಳಿ ಅವರ ಮಾವ ಸಂಗೀತ ನಿರ್ದೇಶಕ ಎಮ್​.ಎಮ್. ಕೀರವಾಣಿ ಮೌಳಿಗೆ ಬಯ್ಯುತ್ತಲೇ ಇರುತ್ತಾರೆ.. ಆದ್ರೆ ಜಕ್ಕಣ್ಣ ಶೂಟಿಂಗ್ ಸೆಟ್​​ನಲ್ಲಿ ಒಂದ್ ಫ್ರೇಮ್​​ಗೂ ಒದ್ದಾಡುತ್ತಾ ಅದ್ಭುತವಾಗಿ ಸಿನಿಮಾ ಕಟ್ಟಿ ಪ್ರೇಕ್ಷಕರ ಮನಸು ಮುಟ್ಟುತ್ತಾರೆ.. ಈಗ ಕೊನೆಗೂ ಥ್ರಿಬಲ್ ಆರ್ ಸಿನಿಮಾದ ಶೂಟಿಂಗ್ ಕಂಪ್ಲೀಟ್ ಆಗಿದೆ.. ಅಷ್ಟಕ್ಕೂ ಥ್ರಿಬಲ್ ಆರ್ ಸಿನಿಮಾದ ಶೂಟಿಂಗ್​ಗಾಗಿ ರಾಜಮೌಳಿ ತೆಗೆದುಕೊಂಡು ಟೈಮ್ ಎಷ್ಟು ಗೊತ್ತಾ..

blank

3 ವರ್ಷ 3 ತಿಂಗಳು 7 ದಿನ RRR ಶೂಟಿಂಗ್
ಚೇಸಿಂಗ್ ಸೀನ್ ಮೂಲಕ RRR ಕಂಪ್ಲೀಟ್

ಬಾಹುಬಲಿ ಸಿನಿಮಾವನ್ನ ಮುಗಿಸಿ 2018 ನವೆಂಬರ್ 19ನೇ ದಿನಾಂಕದಂದು ಥ್ರಿಬಲ್ ಆರ್ ಸಿನಿಮಾವನ್ನ ಶುರು ಮಾಡಿಕೊಂಡರು.. ಈ ಬಾರಿ ಹಳೆ ಸಿನಿಮಾದ ರೀತಿಯ ಲೇಟ್ ಆಗಲ್ಲ ಬಹುಬೇಗನೇ ಥ್ರಿಬಲ್ ಆರ್ ಶೂಟಿಂಗ್ ಮುಗಿಸಿ ಬಿಡ್ತಿವಿ ಎಂದು ತೀರ್ಮಾನಿಸಿ ಶೂಟಿಂಗ್​​ ಅಖಾಡಕ್ಕೆ ಇಳಿದ್ರು.. ಆದ್ರೇ ಏನ್ ಮಾಡೋದು ಟೈಮ್ ರಾಜಮೌಳಿಯವರ ಪರವಾಗಿರಲಿಲ್ಲ.. ಲಾಕ್ ಡೌನ್ ಒಂದು ಲಾಕ್ ಡೌನ್ ಎರಡು ಆಗಿ ಶೂಟಿಂಗ್ ಡಿಲೇ ಆಯ್ತು.. ಈಗ ಅಂತು ಇಂತು ದೇಶ ವಿದೇಶದಲ್ಲಿ ಶೂಟಿಂಗ್ ಮಾಡಿ ಮುಗಿಸಿದ್ದಾರೆ. ರಾಜಮೌಳಿ ಥ್ರಿಬಲ್ ಆರ್ ಸಿನಿಮಾದ ಶೂಟಿಂಗ್​ಗಾಗಿ ತೆಗೆದುಕೊಂಡ ಒಟ್ಟು ಸಮಯ ಮೂರು ವರ್ಷ ಮೂರು ತಿಂಗಳು ಏಳು ದಿನ..

blank

ಇದನ್ನೂ ಓದಿ:  ಕೋಟಿಗೊಬ್ಬನ ಜನ್ಮದಿನ ಚಂದನವನಕ್ಕೆ ಆಗುತ್ತಾ ಸುದಿನ..? ಸ್ಪೆಷಲ್ ರಿಪೋರ್ಟ್

ಸದ್ಯ ಈ ವರ್ಷ ಪ್ರೇಕ್ಷಕರ ಮುಂದೆ ಥ್ರಿಬಲ್ ಆರ್ ಸಿನಿಮಾ ಬರೋದು ಡೌಟ್.. ಇಂಡಿಯಾದಲ್ಲಿ ಪೂರ್ಣ ಪ್ರಾಮಾಣದ ಥಿಯೇಟರ್ ಓಪನ್ ಆಗದೆ ಇರೋ ಕಾರಣ ಮುಂದಿನ ವರ್ಷ ಪ್ರೇಕ್ಷಕರ ಮುಂದೆ ಥ್ರಿಬಲ್ ಆರ್ ಸಿನಿಮಾವನ್ನ ತರೋ ಯೋಜನೆಯಲ್ಲಿದೆ. ಕಳೆದ ದಿನ ಕಾರ್ ಚೇಸಿಂಗ್ ದೃಶ್ಯವನ್ನ ಚಿತ್ರೀಸುವ ಮೂಲಕ ಶೂಟಿಂಗ್ ಕಂಪ್ಲೀಟ್ ಮಾಡಿದೆ ಥ್ರಿಬಲ್ ಆರ್ ಚಿತ್ರತಂಡ. ಒಂದು ವಿಡಿಯೋ ಒಂದನ್ನ ಹೊರ ಬಿಟ್ಟಿರೋ ಚಿತ್ರತಂಡ ಟೈಗರ್ ಮತ್ತು ಚಿರತೆ ಚೇಸಿಂಗ್ ಅನ್ನೋ ಟ್ಯಾಗ್​​ ಲೈನ್ ಹಾಕಿ ಅಭಿಮಾನಿಗಳಿಗೆ ಕುತೂಹಲ ಮೂಡಿಸಿದೆ..

ಇದನ್ನೂ ಓದಿ: ಫೈಟರ್ ಸಾವು ಕೇಸ್​​​; ನಟ ಅಜಯ್ ರಾವ್​ಗೆ ಸಿಕ್ತು ನಿರೀಕ್ಷಣಾ ಜಾಮೀನು

Source: newsfirstlive.com Source link