ಮೈಸೂರು: ಪೊಲೀಸರು ಪ್ರತಿನಿತ್ಯ ವಾಕಿಂಗ್​​ ಮಾಡೋ ಸ್ಥಳದಲ್ಲೇ ಅತ್ಯಾಚಾರ

ಮೈಸೂರು: ಪೊಲೀಸರು ಪ್ರತಿನಿತ್ಯ ವಾಕಿಂಗ್​​ ಮಾಡೋ ಸ್ಥಳದಲ್ಲೇ ಅತ್ಯಾಚಾರ

ಮೈಸೂರು: ಚಾಮುಂಡಿ ಬೆಟ್ಟದ ತಪ್ಪಲಿನ ನಿರ್ಜನ ಪ್ರದೇಶಕ್ಕೆ ಹೋಗಿದ್ದ ಯುವತಿ ಮೇಲೆ ಗ್ಯಾಂಗ್​​ ರೇಪ್​​​ ಪ್ರಕರಣದ ತನಿಖೆಯನ್ನು ಪೊಲೀಸರು ಚುರುಕುಗೊಳಿಸಿದ್ದಾರೆ. ಯುವತಿ ಅತ್ಯಾಚಾರಕ್ಕೀಡಾದ ಪ್ರದೇಶ ಐಪಿಎಸ್ ಲೇಔಟ್ ಪಕ್ಕದಲ್ಲೆ ಇದ್ಯಂತೆ. ಪೊಲೀಸರು ಪ್ರತಿನಿತ್ಯ ವಾಕಿಂಗ್​​ ಮಾಡೋ ಸ್ಥಳ ಇದಾಗಿದ್ದು, ಇಲ್ಲೇ ಯುವತಿ ಮೇಲೆ ಸಾಮೂಹಿಕ ಅತ್ಯಚಾರ ನಡೆದಿದೆ ಎಂದು ತಿಳಿದು ಬಂದಿದೆ.

ಐಪಿಎಸ್ ಲೇಔಟ್ ಪೊಲೀಸರು ಸೇರಿ ಹಲವರು ಪ್ರತಿನಿತ್ಯ ವಾಕಿಂಗ್ ಮಾಡೋ ಜಾಗ. ಡಾಗ್ ಸ್ಕ್ವಾಡ್ ವಾಕಿಂಗ್ ಕೂಡ ಇದೇ ಜಾಗದಲ್ಲೆ ಮಾಡ್ತಿದ್ರು. 6:30ರ ಒಳಗೆ ವಾಕಿಂಗ್ ಮುಗಿಸಿ ತೆರಳುತ್ತಿದ್ದರು ಮೈಸೂರು ಪೊಲೀಸರು. ಎಲ್ಲರೂ ಹೋದ ಮೇಲೆ ಈ ಸ್ಥಳವನ್ನೇ ಪಾರ್ಟಿ ಮೋಜು ಮಸ್ತಿ ಮಾಡಲು ಅಡ್ಡವಾಗಿ ಮಾಡಿಕೊಂಡಿದ್ದರು ಪುಂಡರು.

ಸಂಜೆ 7:30ಕ್ಕೆ ಗೊತ್ತಿಲ್ಲದೇ ವಾಕಿಂಗ್ ಮಾಡಲು ಯುವತಿ ಹಾಗೂ ಯುವಕ ಬಂದಿದ್ದರು. ಯಾರೂ ಇಲ್ಲದ ಸಮಯ ಸಾದಿಸಿದ ಈ ಕಿರಾತಕರು ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಅಲ್ಲದೇ ಯುವಕನ ಮೇಲೆ ಹಲ್ಲೆ ಮಾಡಿದ್ದಾರೆ.

ಇದನ್ನೂ ಓದಿ: ಮೈಸೂರು ಬೆನ್ನಲ್ಲೇ ಬೆಳಗಾವಿಯಲ್ಲಿ ಮತ್ತೊಂದು ಕೇಸ್​​; ಅಪ್ರಾಪ್ತೆ ಮೇಲೆ ಸಾಮೂಹಿಕ ಅತ್ಯಾಚಾರ

15 ನಿಮಿಷ ರಸ್ತೆ ಬದಿಯಲ್ಲೆ ಹಲ್ಲೆಗೊಳಗಾದ ಯುವಕ ಬಿದ್ದಿದ್ದ. ಆರೋಪಿಗಳು ಮೊದಲಿಗೆ ಹಣಕ್ಕೆ ಬೇಡಿಕೆಯಿಟ್ಟರು. ಆದರೆ ಯುವಕ ಮತ್ತು ಯುವತಿ ನೀಡದಿದ್ದಾಗ ಇಬ್ಬರ ಮೇಲೂ ಹಲ್ಲೆ ನಡೆಸಿದ್ದಾರೆ. ಇದಾದ ನಂತರ ಆರೋಪಿಗಳು ಬೈಕ್ ಏರಿ ಹೊರಟಿದ್ದರು. ತನ್ನ ಬೈಕ್ ಅನ್ನು ಮುಖ್ಯ ರಸ್ತೆಯಲ್ಲೇ ನಿಲ್ಲಿಸಿದ್ದ ಹಲ್ಲೆಗೊಳಗಾದ ಯುವಕ. ಏನು ತೋಚದೆ ಅರ್ಧ ಕಿಲೋ ಮೀಟರ್​​ ನಡೆದುಕೊಂಡೇ ಹೋದ ಅತ್ಯಾಚಾರಕ್ಕೊಳಗಾದ ಯುವತಿ ನೇರ ಆಸ್ಪತ್ರೆಗೆ ದಾಖಲಾದಳು.

Source: newsfirstlive.com Source link