ಜಪ್ತಿಯಾಗಿದ್ದ ಅಮಿತಾಭ್ ಬಚ್ಚನ್ ಕಾರು ರಿಲೀಸ್

ಬೆಂಗಳೂರು/ನೆಲಮಂಗಲ: ವ್ಯಕ್ತಿಯೊಬ್ಬರು ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಬಳಿ ಖರೀದಿಸಿದ್ದ ಐಷಾರಾಮಿ ಕಾರನ್ನು ವಶಪಡಿಸಿಕೊಂಡಿದ್ದ ಆರ್‌ಟಿಓ ಅಧಿಕಾರಿಗಳು ಇದೀಗ ರಿಲೀಸ್ ಮಾಡಿದ್ದಾರೆ.

ಬೇರೆ ರಾಜ್ಯದ ಕಾರುಗಳು ತೆರಿಗೆ ವಂಚಿಸಿ ಕರ್ನಾಟಕ ರಾಜ್ಯದಲ್ಲಿ ಸಂಚಾರ ಮಾಡುತ್ತಿದ್ದ ಹಿನ್ನೆಲೆ ಬೆಂಗಳೂರಿನ ಸ್ಪೆಷಲ್ ತಂಡದ ಆರ್‌ಟಿಓ ಅಧಿಕಾರಿಗಳು ನಗರದ ಯುಬಿ ಸಿಟಿ ಹಾಗೂ ಇನ್ನಿತರ ಕಡೆ ದಾಳಿ ನಡೆಸಿ ವಾಹನಗಳನ್ನು ವಶಕ್ಕೆ ಪಡೆದಿದ್ದರು. ಈ ವೇಳೆ ಬಾಬು ಎಂಬವರು ಅಮಿತಾಭ್ ಬಚ್ಚನ್ ಬಳಿ ಖರೀದಿಸಿದ್ದ ರೋಲ್ಸ್ ರಾಯ್ಸ್ ಕಾರನ್ನು ಅಧಿಕಾರಿಗಳು ಸೀಜ್ ಮಾಡಿದ್ದರು. ಸದ್ಯ ಆರ್‌ಟಿಓ ಅಧಿಕಾರಿಳಿಗೆ ಈ ಕಾರಿನ ದಾಖಲೆಗಳನ್ನು ನೀಡಿ ತೆರಿಗೆ ಕಟ್ಟಿ ರಿಲೀಸ್ ಮಾಡಿದ್ದಾರೆ. ಇದನ್ನೂ ಓದಿ:ಕಲ್ಲಿದ್ದಲು ಗಣಿಗಾರಿಕೆ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೆ: ಅಮಿತಾಭ್ ಬಚ್ಚನ್

ಅಮಿತಾಭ್ ಬಚ್ಚನ್ ಅವರಿಗೆ 1.5 ಕೋಟಿ ರೂಪಾಯಿಯನ್ನು ಆರ್‌ಟಿಜಿಎಸ್‌ ಮಾಡಲಾಗಿದ್ದು, ಮಹಾರಾಷ್ಟ್ರದಲ್ಲಿ ಟ್ಯಾಕ್ಸ್ ಕಟ್ಟಲಾಗಿದೆ. ಬಚ್ಚನ್‍ರಿಂದ ಕಾರು ಖರೀದಿ ಮಾಡಿದ ನಂತರವೂ ದಾಖಲೆಗಳನ್ನು ಬದಲಾಯಿಸದೇ ಕಾರಿನ ಇನ್ಶೂರೆನ್ಸ್ ನನ್ನು ಅಮಿತಾಭ್ ಹೆಸರಲ್ಲಿ ಈಗ ಕಟ್ಟಿದ್ದೇಕೆ ಎಂಬ ಪ್ರಶ್ನೆ ಎದ್ದಿದೆ. ಇದನ್ನೂ ಓದಿ:ನಟ ಅಮಿತಾಭ್ ಬಚ್ಚನ್ ಕಾರು ವಶಕ್ಕೆ

blank

ಕಾರು ಯಾವಾಗ ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಬಂದಿದೆ ಎನ್ನುವುದರ ಬಗ್ಗೆ ಆರ್‌ಟಿಓ ಅಧಿಕಾರಿಗಳ ಬಳಿ ದಾಖಲೆ ಇಲ್ಲ. ಮೊನ್ನೆ ವಶಪಡಿಸಿಕೊಂಡ ಪಾಂಡಿಚೇರಿ ರಿಜಿಸ್ಟ್ರೇಷನ್‍ನ ಕಾರಿಗೆ 35 ಲಕ್ಷ ತೆರಿಗೆ ಕಟ್ಟಿಸಲಾಗಿದೆ. ಇದೇ ರೀತಿಯ ಹೊರ ರಾಜ್ಯದ ಐಷಾರಾಮಿ ಕಾರುಗಳು ಬೆಂಗಳೂರು ನಗರ ಸೇರಿದಂತೆ ವಿವಿಧ ಜಿಲ್ಲೆಯಲ್ಲಿ ಸಂಚರಿಸುತ್ತಿದ್ದು ಆರ್‌ಟಿಓ ಅಧಿಕಾರಿಗಳು ಇನ್ನಷ್ಟು ಬಲೆ ಬೀಸಬೇಕಿದೆ.

Source: publictv.in Source link