‘ಅಂಥ..’ ಮಕ್ಕಳನ್ನ ಶೂಟ್ ಮಾಡಿ ಸಾಯಿಸಬೇಕು ಅಂತೀವಿ.. -ಅದಿತಿ ಪ್ರಭುದೇವ್ ಬೇಸರ

‘ಅಂಥ..’ ಮಕ್ಕಳನ್ನ ಶೂಟ್ ಮಾಡಿ ಸಾಯಿಸಬೇಕು ಅಂತೀವಿ.. -ಅದಿತಿ ಪ್ರಭುದೇವ್ ಬೇಸರ

ಬೆಂಗಳೂರು: ಮೈಸೂರು ಗ್ಯಾಂಗ್ ರೇಪ್ ಪ್ರಕರಣವನ್ನ ನಟಿ ಅದಿತಿ ಪ್ರಭುದೇವ್ ಖಂಡಿಸಿದ್ದಾರೆ. ನಗರದಲ್ಲಿ ನ್ಯೂಸ್​​​ಫಸ್ಟ್​ ಜೊತೆ ಮಾತನಾಡಿದ ಅವರು, ಇದಕ್ಕೆಲ್ಲಾ ಯಾವಾಗ ಕೊನೆಯಾಗುತ್ತೆ ಅನ್ನೋ ಭಯ ಶುರುವಾಗಿದೆ. ಎಲ್ಲರೂ ಮನುಷ್ಯತ್ವ ಇಟ್ಕೊಂಡು ನಡೆದುಕೊಳ್ಳಬೇಕು ಎಂದರು.

ಕೋಳಿ ಜೊತೆ ಕೋಳಿನೇ ಬಿಡ್ತೀವಿ
ನಾವು ಕುರಿ ಜೊತೆ ಜಗಳ ಆಡೋಕೆ ಕುರಿನೇ ಬಿಡ್ತೀವಿ. ಕೋಳಿ ಜೊತೆ ಕೋಳಿನೇ ಬಿಡ್ತೀವಿ. ಅದು ಈ ಸಮಾಜದಲ್ಲಿ ಆಗಬೇಕು. ಅಂದರೆ ಸಾಮಾನ್ಯವಾಗಿ ಆ್ಯಂಕರ್​​ಗಳಿಗೆ ಸೋಶಿಯಲ್ ಮೀಡಿಯಾದಲ್ಲಿ ಕೆಟ್ಟದಾಗಿ ಕಮೆಂಟ್ ಮಾಡೋದನ್ನ ನೋಡಿದ್ದೀನಿ. ಅಲ್ಲಿಂದಲೇ ಶುರುವಾಗಬೇಕು. ಅವಳಿಗೆ, ಅವರಿಗೆ ಕೆಟ್ಟದಾಗಿ ಕಮೆಂಟ್ ಮಾಡೋಕೆ ನೀನ್ಯಾವನೋ ಅನ್ನೋರು ಜಾಸ್ತಿ ಆಗಬೇಕಿದೆ.

ಕೆಟ್ಟದ್ದನ್ನ ನಾವು ವಿರೋಧಿಸಬೇಕು. ಅಂಥ ಮಕ್ಕಳನ್ನ ಶೂಟ್ ಮಾಡಿ ಸಾಯಿಸಬೇಕು ಅಂತೀವಿ.. ಆದ್ರೆ ಅಂತಹ ಕೆಸಲಗಳು ಆಗಲ್ಲ.. ಅದೇ ದುರಂತ ಅಂತಾ ನನಗೆ ಅನಿಸುತ್ತಿದೆ. ಸರ್ಕಾರಗಳು ಕಠಿಣ ಕಾನೂನು ಕ್ರಮವನ್ನ ತೆಗದುಕೊಳ್ಳಬೇಕು ಎಂದು ಆಗ್ರಹಿಸಿದರು.

Source: newsfirstlive.com Source link