ಕರ್ನಾಟಕ ಪ್ರೈವೇಟ್ ಸ್ಕೂಲ್ಸ್ ಅಂಡ್ ಚಿಲ್ರೆನ್ ವೆಲ್ಫೇರ್ ಅಸೋಸಿಯೇಷನ್‍ಗೆ ಪ್ರಶಸ್ತಿ

ನವದೆಹಲಿ: ಕೊರೊನಾ ಸಮಯದಲ್ಲಿ ವಿವಿಧ ಸಮಾಜ ಸೇವಾ ಕಾರ್ಯಗಳಿಗೆ ಕರ್ನಾಟಕ ಪ್ರೈವೇಟ್ ಸ್ಕೂಲ್ಸ್ ಅಂಡ್ ಚಿಲ್ರೆನ್ ವೆಲ್ಫೇರ್ ಅಸೋಸಿಯೇಷನ್‍ಗೆ ಪ್ರಶಸ್ತಿ ಸಿಕ್ಕಿದೆ.

ಪ್ರೈವೇಟ್ ಸ್ಕೂಲ್ಸ್ ಅಂಡ್ ಚಿಲ್ರೆನ್ ವೆಲ್ಫೇರ್ ಅಸೋಸಿಯೇಷನ್ ಸಂಸ್ಥೆ ನವದೆಹಲಿಯ ನ್ಯೂ ಪ್ರೈಡ್ ಪ್ಲಾಜಾ ಹೋಟೆಲಿನಲ್ಲಿ ಆಗಸ್ಟ್ 23 ರಿಂದ ಆಗಸ್ಟ್ 25ರವರೆಗೂ 8ನೇ ವಾರ್ಷಿಕ ಸಭೆಯನ್ನು ಆಯೋಜಿಸಿತ್ತು.

ಈ ಸಭೆಯಲ್ಲಿ ಕೋವಿಡ್ ಸಾಂಕ್ರಾಮಿಕ ಸಂದರ್ಭದಲ್ಲಿ 2 ವರ್ಷದಿಂದ ಸತತವಾಗಿ ಮಾಡಿರುವ ಬಹಳಷ್ಟು ಸಮಾಜ ಸೇವೆಗಳಾದ ‘ಕೋವಿಡ್ ರೋಗಿಗಳಿಗೆ ಆಸ್ಪತ್ರೆಗಳಲ್ಲಿ ಹಾಸಿಗೆಗಳ ವ್ಯವಸ್ಥೆ, ಕೋವಿಡ್‍ನಲ್ಲಿ ಬಳಲುತ್ತಿರುವ ಸಂಸಾರಗಳಿಗೆ ನೆರವು, ಆರ್ಥಿಕ ಬೆಂಬಲ, ವೈದ್ಯಕೀಯ ಸಹಾಯ, ಅನೇಕ ಖಾಸಗಿ ಅನುದಾನರಹಿತ ಶಾಲಾ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗೆ ಆಹಾರ ಕಿಟ್‍ಗಳ ವಿತರಣೆ ಇನ್ನಿತರೆ ಕೆಲಸಗಳನ್ನು ನೆನೆದು ಕರ್ನಾಟಕ ರಾಜ್ಯಕ್ಕೆ 2021ನೇ ಸಾಲಿನ ಅತ್ಯುತ್ತಮ ರಾಜ್ಯ ಎಂದು ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಇದನ್ನೂ ಓದಿ:ಹೊಲಗಳು ಮರಳು ಆಗಲು ಬಿಡುವುದಿಲ್ಲ: ರಾಹುಲ್ ಗಾಂಧಿ

ಇದಲ್ಲದೆ ಪಿ.ಎಸ್.ಎ.ಸಿ.ಡಬ್ಲ್ಯೂ.ಎ ಸಂಸ್ಥೆಯು ಕರ್ನಾಟಕದ ಖಾಸಗಿ ಅನುದಾನರಹಿತ ಶಾಲೆಗಳ ಪರವಾಗಿ ಕೆಲವು ಬೇಡಿಕೆಗಳನ್ನು ಪೂರೈಸಲು ಸರ್ಕಾರದ ವಿರುದ್ಧ ಅನೇಕ ಪ್ರತಿಭಟನೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದು, ಈ ವಿಶೇಷ ಸಂದರ್ಭದಲ್ಲಿ ಪ್ರೈವೇಟ್ ಸ್ಕೂಲ್ಸ್ ಅಂಡ್ ಚಿಲ್ರೆನ್ ವೆಲ್ಫೇರ್ ಅಸೋಸಿಯೇಷನ್ ಸಂಸ್ಥೆಯ ರಾಷ್ಟ್ರಾಧ್ಯಕ್ಷರಾದ ಸಯ್ಯದ್ ಶಮೀಲ್ ಅಹ್ಮದ್ ಮತ್ತು ಸಿಕ್ಕಿಂನ ಗವರ್ನರ್ ಆದಂತಹ ಗಂಗಾ ಪ್ರಸಾದ್ ಜೀರವರು ಕರ್ನಾಟಕ ರಾಜ್ಯದ ಅಧ್ಯಕ್ಷರಾದ ಡಾ. ಅಫ್ಷದ್ ಅಹ್ಮದ್ ಬಿ.ಝೆಡ್ ಮತ್ತು ಅವರ ಇಡೀ ತಂಡಕ್ಕೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇದನ್ನೂ ಓದಿ:ಶ್ರೀ ಕೃಷ್ಣ ಜನ್ಮಾಷ್ಟಮಿಯಂದು ಇಸ್ಕಾನ್‍ಗೆ ಸಾರ್ವಜನಿಕರಿಗೆ ಪ್ರವೇಶವಿಲ್ಲ

ಈ ವಿಶೇಷ ದಿನದಂದು ವೇದಿಕೆಯಲ್ಲಿ ಉಪಸ್ಥಿತರಿದ್ದ ಇತರ ಗಣ್ಯರಾದ ಎ.ಐ.ಸಿ.ಸಿಯ ಪ್ರಧಾನ ಕಾರ್ಯದರ್ಶಿ ತಾರೀಖ್ ಅನ್ವರ್, ಜಾರ್ಖಂಡ್ ಸರ್ಕಾರದ ಹಣಕಾಸು ಸಚಿವರಾದಂತಹ ರಾಮೇಶ್ವರ ಓರಮ್ನ, ಬಿಹಾರದ ಕೈಗಾರಿಕಾ ಸಚಿªರು ಹಾಗೂ ಬಿಜೆಪಿ ರಾಷ್ಟ್ರೀಯ ವಕ್ತಾರರಾದ ಶನಾವಾಜ್ ಹುಸೇನ್, ಸಂತೋಷ್ ಸಾರಂಗಿ ಐ.ಎ.ಎಸ್. ಜಂಟಿ ಕಾರ್ಯದರ್ಶಿ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವರು ಮತ್ತು ಬಾಲಿವುಡ್ ಗಾಯಕರಾದ ಅನೂಪ್ ಜಲೋಟಾ ಉಪಸ್ಥಿತರಿದ್ದರು. ಇದನ್ನೂ ಓದಿ:ಆ ಪುಸ್ತಕ ಓದಿ ನಾನು ಮಾಂಸಹಾರ ತಿನ್ನೋದು ಬಿಟ್ಟೆ: ಸಿಎಂ ಬೊಮ್ಮಾಯಿ

Source: publictv.in Source link