ಮೈಸೂರಲ್ಲಿ ಫೈರಿಂಗ್ ಕೇಸ್​​ನ 6 ಆರೋಪಿಗಳನ್ನ ಬಂಧಿಸಲಾಗಿದೆ -ಪ್ರವೀಣ್ ಸೂದ್

ಮೈಸೂರಲ್ಲಿ ಫೈರಿಂಗ್ ಕೇಸ್​​ನ 6 ಆರೋಪಿಗಳನ್ನ ಬಂಧಿಸಲಾಗಿದೆ -ಪ್ರವೀಣ್ ಸೂದ್

ಮೈಸೂರು: ನಗರದಲ್ಲಿ ನಡೆದ ಶೂಟೌಟ್ ಮತ್ತು ಗ್ಯಾಂಗ್​ ರೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಆರಗ ಜ್ಞಾನೇಂದ್ರ ಹಾಗೂ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು.

ಪ್ರವೀಣ್ ಸೂದ್ ಹೇಳಿಕೆ 

  • ಬಂಗಾರದ ಅಂಗಡಿಯಲ್ಲಿ ನಡೆದ ಶೂಟೌಟ್ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಲಾಗಿತ್ತು
  • ಮುಖ್ಯಮಂತ್ರಿಗಳು ಸೂಚನೆ ಕೊಟ್ಟಿದ್ದರು. ಐದು ಪ್ರತ್ಯೇಕ ತಂಡ ರಚಿಸಿ ಇಂದು ಪ್ರಕರಣವನ್ನ ಭೇದಿಸಲಾಗಿದೆ.
  • ಐದು ಮಂದಿ ಆರೋಪಿಗಳನ್ನ ಬಂಧಿಸಲಾಗಿದೆ. ಪ್ಲಾನ್ ಮಾಡಿದ ಇಬ್ಬರು , ಕೃತ್ಯ ಎಸಗಿದ ಮೂವರು ಬಂಧಿಸಲಾಗಿದೆ
  • ಒಬ್ಬರನ್ನ ಪಶ್ಚಿಮ ಬಂಗಾಳ, ಇನ್ನೊಬ್ಬರನ್ನ ರಾಜಾಸ್ಥಾನ, ಮತ್ತೊಬ್ಬರನ್ನ ಮುಂಬೈಯಿಂದ ಬಂಧನವಾಗಿದೆ
  • ಪ್ಲಾನ್ ಮಾಡಿದವರು ಯಾರೂ ಸ್ಥಳೀಯರಲ್ಲ, ಹೊರ ರಾಜ್ಯಗಳಿಂದ ದುಷ್ಕರ್ಮಿಗಳನ್ನ ಕರೆತಂದು ಕೃತ್ಯ ಎಸಗಿಸಿದ್ದಾರೆ.

Source: newsfirstlive.com Source link