ನನಗೆ ನಂಬಿಕೆ ಇದೆ, ಪೊಲೀಸರು ಅತ್ಯಾಚಾರಿಗಳನ್ನು ಬಂಧಿಸಲಿದ್ದಾರೆ – ಗೃಹ ಸಚಿವ ಆರಗ ಜ್ಞಾನೇಂದ್ರ

ನನಗೆ ನಂಬಿಕೆ ಇದೆ, ಪೊಲೀಸರು ಅತ್ಯಾಚಾರಿಗಳನ್ನು ಬಂಧಿಸಲಿದ್ದಾರೆ – ಗೃಹ ಸಚಿವ ಆರಗ ಜ್ಞಾನೇಂದ್ರ

ಮೈಸೂರು: ಮೈಸೂರು ಎಂಬಿಎ ವಿದ್ಯಾರ್ಥಿನಿ ಮೇಲಿನ ಸಾಮೂಹಿಕ ಅತ್ಯಾಚಾರ ಸಂಬಂಧ ಗೃಹ ಸಚಿವ ಆರಗ ಜ್ಞಾನೇಂದ್ರ ಸುದ್ದಿಗೋಷ್ಠಿ ನಡೆಸಿ ಮಾತಾಡಿದರು. ನಾನು ಮತ್ತು ಮುಖ್ಯಮಂತ್ರಿಗಳು ಪೊಲೀಸರಿಗೆ ಒತ್ತಡ ಹಾಕಿದ್ದೇವೆ. ಅತ್ಯಾಚರ ಕೇಸ್​ ಸಂಬಂಧ ನಾನು ಹೇಳೋಕೆ ಹೋಗೋದಿಲ್ಲ. ಇದರಿಂದ ತನಿಖೆಗೆ ತೊಂದರೆಯಾಗಲಿದೆ ಎಂದರು. 

ಇನ್ನು, ಪೊಲೀಸರು ಈ ಕೇಸ್​​ನಲ್ಲೂ ಆರೋಪಿಗಳನ್ನು ಬಂಧಿಸಲಿದ್ದಾರೆ. ನನಗೆ ನಮ್ಮ ರಾಜ್ಯದ ಪೊಲೀಸರ ಮೇಲೆ ನಂಬಿಕೆ ಮತ್ತು ವಿಶ್ವಾಸ ಇದೆ. ನಮ್ಮ ಡಿಐಜಿ ಪ್ರವೀಣ್​ ಸೂದ್​​ ಹೇಳಿದಂತೆ ಶೂಟೌಟ್​ ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿದ್ದಾರೆ. ಇವರ ಬಳಿ ಟೆಕ್ನಿಕಲ್​​ ಇವಿಡೆನ್ಸ್ ಇದೆ ಎಂದರು.

 

 

Source: newsfirstlive.com Source link