ಅಪ್ಪ ಯಾರು ಅನ್ನೋದೇ ಗೊತ್ತಿಲ್ಲ, ಸಾಯೋ ಮುಂಚೆ ಅಪ್ಪ ಅಂತ ಕರೀಬೇಕು -ಕಣ್ಣೀರಿಟ್ಟ ವೈಷ್ಣವಿ

ಅಪ್ಪ ಯಾರು ಅನ್ನೋದೇ ಗೊತ್ತಿಲ್ಲ, ಸಾಯೋ ಮುಂಚೆ ಅಪ್ಪ ಅಂತ ಕರೀಬೇಕು -ಕಣ್ಣೀರಿಟ್ಟ ವೈಷ್ಣವಿ

ಸೀರಿಯಲ್​ ತಾರೆಯರ ಆ ಹೊಳೆಯುವ ಮುಖದ ಹಿಂದೆ ಅದೇಷ್ಟೋ ನೋವಿನ ಕಥೆಗಳಿವೆ. ಇದುವರೆಗೂ ಯಾರಿಗೂ ಹೇಳದ ಮನಸ್ಸಿನ ಮಾತು ಯಾವುದಾದ್ರು ಇದ್ರೆ ಹೇಳಬಹುದು ಎಂಬ ಅವಕಾಶವನ್ನು ಬಿಗ್​ ಬಾಸ್​ ಕಲ್ಪಿಸಿದ್ದರು.

ಮೊನ್ನೆ ನಿರಂಜನ್​ ತಮ್ಮ ಸಹೋದರಿಗೆ ಮದುವೆ ಮಾಡಿಸಲು ಪಟ್ಟ ಕಷ್ಟವನ್ನು ಹೇಳಿ ಕಣ್ಣೀರಿಟ್ಟಿದ್ದರು. ಇತ್ತ ಗಗನ್​ ಚಿನ್ನಪ್ಪ ಸ್ನೇಹಿತರ ವರ್ತನೆಗೆ ನೋಂದು ಬೇಸರ ವ್ಯಕ್ತಪಡಿಸಿದ್ದರು. ಇನ್ನೂ ಇಂದು ವೈಷ್ಣವಿ ಅವರು ತಮ್ಮ ಜೀವನದ ಅತ್ಯಂತ ನೋವಿನ ಸಂಗತಿ ಒಂದನ್ನ ಹೇಳಿ ಬಿಕ್ಕಿ ಬಿಕ್ಕಿ ಅಳುವ ಪ್ರಮೋ ಒಂದನ್ನ ವಾಹಿನಿ ರಿಲೀಸ್​ ಮಾಡಿದೆ. ಎಂತವರ ಕಣ್ಣಾಲೆಗಳು ಕೂಡ ಒಂದು ಕ್ಷಣ ತೇವವಾಗುವ ಕರುಣಾಜನಕ ಕಥೆ ವೈಷ್ಣವಿ ಅವರದ್ದಾಗೆ.

blank

ಮಿಥುನ ರಾಶಿ ಸೀರಿಯಲ್​ನಲ್ಲಿ ಆಟೋ ಓಡಿಸಿ ಮನೆಯವರ ಜವಾಬ್ದಾರಿ ಹೊತ್ತ ರಾಶಿ ಮನಸ್ಸಲ್ಲಿ ಎಷ್ಟೇ ನೋವಿದ್ದರೂ ನಗು ನಗುತ್ತಿರುತ್ತಾಳೆ. ಹಾಗೇ ಆ ಪಾತ್ರದ ಮೂಲಕ ಜನಪ್ರಿಯತೆ ಪಡೆದ ವೈಷ್ಣವಿ ಕೂಡ ಎದೆಯಲ್ಲಿ ಜ್ವಾಲಾಮುಖಿ ಇಟ್ಟುಕೊಂಡು ಯಾವಗಲೂ ನಗುತಿರುತ್ತಾಳೆ.

ಹೌದು, ವೈಷ್ಣವಿ ತನ್ನ ತಂದೆಯ ಬಗ್ಗೆ ಹೇಳಿ ಕಣ್ಣೀರಿಟ್ಟಿದ್ದಾಳೆ. ತಂದೆ ಯಾರು ಎಂಬುವುದೇ ಗೊತ್ತಿಲ್ಲದಿರುವುದು ಅವಳ ದುಃಖಕ್ಕೆ ಕಾರಣ. ಈ ಬಗ್ಗೆ ಅವರೇ ಹೇಳುವಂತೆ. ನನ್ನ ತಂದೆ ಸತ್ತಿಲ್ಲ, ಬದುಕಿದ್ದಾರೆ. ಆದರೆ ಕಾರಣಾಂತರಗಳಿಂದ ನನ್ನ ಹಾಗೂ ಅಮ್ಮನನ್ನ ಬಿಟ್ಟು ದೂರ ಉಳಿದಿದ್ದಾರೆ. ನಾನೂ ಇದುವರೆಗೂ ಅವರನ್ನ ನೋಡಿಲ್ಲ. ನಾನು ಚಿಕ್ಕವಳಿರಬೇಕಾದ್ರೆ ಎಲ್ಲರೂ ಅಪ್ಪನ ಬಗ್ಗೆ ಕೇಳೊರು. ನಾನು ಏನ್​ ಅಂತಾ ಹೇಳಲಿ. ಅಪ್ಪಾ ಬೇಕು ಅನ್ನುತ್ತಿದ್ದೆ.

ಇದನ್ನೂ ಓದಿ: ಪಾರು ಟೀಮ್‌ನ ಬಿಂದಾಸ್‌ ಟ್ರಿಪ್‌.. ಮೈಸೂರು ಸುತ್ತಿ ಚಾಮುಂಡಿ ದರ್ಶನ ಪಡೆದ ಸುಂದರಿಯರು

blank

ಆದ್ರೆ ಎಲ್ಲರ ಚುಚ್ಚು ಮಾತುಗಳನ್ನ ಕೇಳಿ ನನ್ನ ಹೃದಯ ಒಡೆದು ಹೋಗುತಿತ್ತು. ನಂಗೆ ಒಂದೇ ಒಂದು ಆಸೆ ಇದೆ ನಾನು ಸಾಯೂವದರೊಳಗಾಗಿ ಒಂದ್ಸಾರಿ ಅಪ್ಪನನ್ನ ನೋಡಬೇಕು. ಅವರನ್ನ ಬಾಯಿ ತುಂಬಾ ಅಪ್ಪ ಅನ್ನಬೇಕು ಎಂದು ಬಿಕ್ಕಳಿಸಿದಾಗ ಮನೆಯವರಲ್ಲರು ಭಾವುಕರಾಗಿದ್ದರು.

blank

ಇದನ್ನೂ ಓದಿ: ನಿರೂಪಕ ಅಕುಲ್ ಬಾಲಾಜಿಗೆ ‘ಪುನರ್ವಿವಾಹ’ದ ಯೋಗ..!

Source: newsfirstlive.com Source link