ಹೊಸಬರ ‘ರಾಜಾ ಸೀಟ್​’ಗೆ ಹರಸಿ ಹಾರೈಸಿದ ನಗೆವೀರ ಜಗ್ಗೇಶ್​

ಹೊಸಬರ ‘ರಾಜಾ ಸೀಟ್​’ಗೆ ಹರಸಿ ಹಾರೈಸಿದ ನಗೆವೀರ ಜಗ್ಗೇಶ್​

ಸಿನಿಮಾ ಅನ್ನೋದೆ ಒಂದು ಸುಂದರ ಕನಸು.. ಆ ಕನಸಿನ ಹಿಂದೆ ಬಿದ್ರೆ ಮಾತ್ರ ಆಗೋದು ಸಿನಿಮಾ ನನಸು. ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡ್ತಿದ್ದ ಸಿನಿಮಾ ಕನಸು ಮನಸಿನ ವ್ಯಕ್ತಿ ಈಗ ಪ್ರೊಡ್ಯೂಸರ್ ಆಗ್ತಿದ್ದಾರೆ. ಆ ಕನಸಿನ ಸಿನಿಮಾ ಮನಸಿಗೆ ತೋತಾಪುರಿ ನಾಯಕ ನವರಸ ನಾಯಕ ಜಗ್ಗೇಶ್ ಮನಸಾರೆ ಹರಸಿ ಹಾರೈಸಿದ್ದಾರೆ.

ಬೆಂಗಳೂರಿನ ಬಂಡಿ ಮಹಾಕಾಳಿ ಅಮ್ಮನವರ ದೇವಸ್ಥಾನ.. ಹೊಸ ಸಿನಿಮಾಗಳ ಮುಹೂರ್ತಕ್ಕೆ ಪುಣ್ಯಕ್ಷೇತ್ರ ಇದ್ದಂಗೆ.. ಬೆಳ್ಳಂಬೆಳಗ್ಗೆ ಹೊಸಬರ ಒಂದು ಸಿನಿಮಾ ಮುಹೂರ್ತವಾಯ್ತು.. ಆ ಮುಹೂರ್ತಕ್ಕೆ ಟೈಟಲ್ ಪೋಸ್ಟರ್ ರಿವೀಲ್​​ಗೆ ಕರ್ನಾಟಕದ ನಗೆವೀರ ನವರಸ ನಾಯಕ ಜಗ್ಗೇಶ್ ಸಾಥ್ ನೀಡಿದ್ರು. ಮನಸಾರೆ ರಾಯರ ಹೆಸರೇಳುತ್ತಾ ಚಿತ್ರತಂಡಕ್ಕೆ ಶುಭವಾಗಲಿ ಎಂದು ಹಾರೈಸಿದ್ರು.. ಅಷ್ಟಕೂ ಯಾವುದು ಆ ಸಿನಿಮಾ ಅನ್ನೋ ಪ್ರಶ್ನೆಗೆ ಉತ್ತರ ರಾಜಾ ಸೀಟ್​​​.

ಇದನ್ನೂ ಓದಿ:  ಕೋಟಿಗೊಬ್ಬನ ಜನ್ಮದಿನ ಚಂದನವನಕ್ಕೆ ಆಗುತ್ತಾ ಸುದಿನ..? ಸ್ಪೆಷಲ್ ರಿಪೋರ್ಟ್

blank

ರಾಜಾ ಸೀಟ್​.. ಮೇಘನಾ ರಾಜ್ ಅವರಿಗೆ ರಾಜ್ಯ ಪ್ರಶಸ್ತಿ ತಂದು ಕೊಟ್ಟ ‘ಇರುವುದೆಲ್ಲವ ಬಿಟ್ಟು’ ಸಿನಿಮಾವನ್ನ ನಿರ್ದೇಶನ ಮಾಡಿದ್ದ ಡೈರೆಕ್ಟರ್ ಕಾಂತ ಕನ್ನಲ್ಲಿ ನಿರ್ದೇಶನ ಮಾಡಲು ಹೊರಟಿರೋ ಸಿನಿಮಾ.. ಇನ್ನು ಸಿನಿಮಾದ ನಿರ್ಮಾಪಕ ಹತ್ತು ವರ್ಷಕ್ಕೂ ಹೆಚ್ಚು ಕಾಲ ದೃಶ್ಯ ಮಾಧ್ಯಮದಲ್ಲಿ ಕೆಲಸ ಮಾಡಿದ್ದ ಶ್ರೀರಾಮ್ ನಿರ್ಮಾಣದ ಚೊಚ್ಚಲ ಸಿನಿಮಾ.. ಆರ್ವ ಅನ್ನೋ ಕಿರುತೆರೆಯ ಕಲಾವಿದ ಈ ರಾಜಾ ಸೀಟ್ ಸಿನಿಮಾದ ನಾಯಕ ನಟ.. ಶೂಟಿಂಗ್​ ಹೊರಡಲು ಸಿದ್ಧವಾಗಿರೋ ರಾಜಾ ಸೀಟ್ ಸಿನಿಮಾದ ಟೈಟಲ್ ಪೋಸ್ಟರ್ ಲಾಂಚ್ ಮಾಡಿ ನವರಸ ನಾಯಕ ಜಗ್ಗೇಶ್ ಚಿತ್ರತಂಡಕ್ಕೆ ಶುಭವಾಗಲಿ ಎಂದು ಹಾರೈಸಿದ್ದಾರೆ.

ಇದನ್ನೂ ಓದಿ: RRR ಶೂಟಿಂಗ್ ಕಂಪ್ಲೀಟ್ ; ಅದಕ್ಕಾಗಿ ರಾಜಮೌಳಿ ತೆಗೆದುಕೊಂಡ ಟೈಮ್​ ಎಷ್ಟು ಗೊತ್ತಾ?

ಇದು ಜಗ್ಗೇಶ್ ಅವರು ಹೊಸಬರ ಹೊಸ ಸಿನಿಮಾಕ್ಕೆ ಪ್ರೋತ್ಸಾಹ ಕೊಟ್ಟಿರೋ ವಿಚಾರ.. ಇನ್ನು ಜಗೇಶ್ ಅವರ ತೋತಾಪುರಿ ಸಿನಿಮಾದ ಕುತೂಹಲದ ಒಂದು ಅಪ್​​ಡೇಟ್​ ಅನ್ನ ಬಗ್ಗೆ ಜಗ್ಗೇಶ್ ಮತ್ತು ನಿರ್ದೇಶಕ ವಿಜಯ ಪ್ರಸಾದ್ ನೀಡಿದ್ದಾರೆ.

ತೋತಾಪುರಿ.. ಶಿವಲಿಂಗ ಖ್ಯಾತಿಯ ನಿರ್ಮಾಪಕ ಸುರೇಶ್ ನಿರ್ಮಾಣದ ಸಿನಿಮಾ.. ಎರಡು ವರ್ಷ ಶೂಟಿಂಗ್ ಮಾಡಿ ಎರಡು ಭಾಗಗಳಾಗಿ ಪ್ರೇಕ್ಷಕರ ಮುಂದೆ ತೋತಾಪುರಿ ಸಿನಿಮಾ ಶುಚಿ ರುಚಿಯಾದ ಕಾಮಿಡಿ ಎಂಟರ್​ಟೈನ್ಮೆಂಟ್ ಅನ್ನ ನೀಡಲು ಚಿತ್ರತಂಡ ಪ್ಲಾನ್ ಮಾಡಿಕೊಂಡಿದೆ. ಮುಂದಿನ ದಿನಗಳಲ್ಲಿ ಟೀಸರ್ ಒಂದನ್ನ ಹೊರ ಬಿಟ್ಟು ಪ್ರೇಕ್ಷಕರನ್ನ ಸೆಳೆಯಲು ಮುಂದಾಗಲಿದೆ ತೋತಾಪುರಿ ಟೀಮ್​​.

Source: newsfirstlive.com Source link