ಎಲ್ಲೆಲ್ಲೋ ರೇಪ್ ಕೇಸ್ ಆದ್ರೇ ನನ್ನನ್ನು ಯಾಕೆ ಕೇಳ್ತಿರಾ: ಜಿ.ಎಂ ಸಿದ್ದೇಶ್ವರ್ ಉಡಾಫೆ

ದಾವಣಗೆರೆ: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಡೆದ ಗ್ಯಾಂಗ್ ರೇಪ್ ಈಗಾಗಲೇ ರಾಜ್ಯಾದಂತ್ಯ ಜನಾಕ್ರೋಶಕ್ಕೆ ಕಾರಣವಾಗಿದೆ. ಈ ನಡುವೆ ಎಲ್ಲೆಲ್ಲೋ ರೇಪ್ ಕೇಸ್ ಆದರೆ ನನ್ನನ್ನು ಯಾಕೆ ಕೇಳುತ್ತೀರಾ ಎಂದು ಸಂಸದ ಜಿ.ಎಂ ಸಿದ್ದೇಶ್ವರ್ ಉಡಾಫೆ ಮಾತನಾಡಿದ್ದಾರೆ.

ಮೈಸೂರಿನಲ್ಲಿ ನಡೆದ ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳನ್ನು 74 ಗಂಟೆಯಾದರೂ ಪೊಲೀಸರು ಬಂಧಿಸದ ಹಿನ್ನಲೆ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಆಕ್ರೋಶ ವ್ಯಕ್ತವಾಗುತ್ತಿದೆ. ಇಂತಹ ಸಂದರ್ಭದಲ್ಲಿ ಸಿದ್ದೇಶ್ವರ್ ನನಗೆ ಇದರ ಬಗ್ಗೆ ಗೊತ್ತೆ ಇಲ್ಲ ಎಂದು ಉತ್ತರಿಸಿದ್ದಾರೆ. ಇದನ್ನೂ ಓದಿ:ಈ ಸರ್ಕಾರದಲ್ಲಿ ಹೆಣ್ಮಕ್ಕಳು ಮಾತ್ರವಲ್ಲ ಗಂಡು ಮಕ್ಕಳೂ ಸೇಫ್ ಅಲ್ಲ ಡಿಕೆಶಿ

ದಾವಣಗೆರೆಯ ಬಿಎಲ್ ಕಚೇರಿಯಲ್ಲಿ ನಡೆದ ಸಭೆಯ ನಂತರ ಸುದ್ದಿಗೋಷ್ಠಿ ನಡೆಸಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೈಸೂರು ಗ್ಯಾಂಗ್ ರೇಪ್ ಬಗ್ಗೆ ಪ್ರಶ್ನಿಸಿದಾಗ ಎಲ್ಲೆಲ್ಲೋ ರೇಪ್ ಕೇಸ್ ನಡೆದರೆ, ನನ್ನನ್ನು ಯಾಕೆ ಕೇಳುತ್ತೀರಪ್ಪಾ. ಇನ್ನು ನಾನು ಏನೂ ನೋಡಿಲ್ಲ, ಮಾಡಿಲ್ಲ ನಮ್ಮ ಜಿಲ್ಲೆಯಲ್ಲಿ ಏನಾದರೂ ಆಗಿದ್ದರೆ ಕೇಳು ಅದಕ್ಕೆ ಖಂಡಿತವಾಗಿ ಉತ್ತರಿಸಿ ಅಧಿಕಾರಿಗಳಿಗೆ ಹೇಳಿ ಕ್ರಮ ತೆಗೆದುಕೊಳ್ಳುತ್ತೇನೆ. ಆದರೆ ಮೈಸೂರಿನಲ್ಲಾಗಿರುವುದು ನನಗೆ ಏನ್ ಗೊತ್ತು ಹೇಳು, ನಿಮಗೆ ಅದೇ ಕೆಲಸ, ನಮ್ಮದು ಟಿವಿ ನೋಡದೇ ಬದುಕು ಸಾಗಿಸುತ್ತೇನೆ. ಬೆಳಿಗ್ಗೆ ಎದ್ದು ಬದುಕು ನೋಡಿಕೊಂಡು, ಸಂಜೆ ಹೋಗಿ ಮಲಗಿಕೊಂಡರೆ ಸಾಕಾಗಿ ಹೋಗುತ್ತದೆ. ನನಗೆ ರೇಪು ಗೊತ್ತಿಲ್ಲ, ಏನೂ ಗೊತ್ತಿಲ್ಲ, ಮೈಸೂರು ಗ್ಯಾಂಗ್ ರೇಪ್ ವಿಚಾರ ಬಿಟ್ಟು ಬೇರೆ ವಿಚಾರ ಇದ್ದರೆ ಹೇಳಿ ಎಂದಿದ್ದಾರೆ. ಇದನ್ನೂ ಓದಿ:ಹೊರಗಡೆ ನಾಯಿಗಳಿದೆ ಎಂದು ಮಕ್ಕಳನ್ನು ಆಚೆ ಬಿಡದೇ ಇರಬೇಕೇ: ಎಚ್.ಕೆ.ಕುಮಾರಸ್ವಾಮಿ

Source: publictv.in Source link