ಜರ್ಮನಿಯಿಂದ MDMA ಡ್ರಗ್ಸ್​ ಆರ್ಡರ್​ ಮಾಡಿದ್ದ ಐನಾತಿ ಮಹಿಳೆ ಬಂಧನ

ಜರ್ಮನಿಯಿಂದ MDMA ಡ್ರಗ್ಸ್​ ಆರ್ಡರ್​ ಮಾಡಿದ್ದ ಐನಾತಿ ಮಹಿಳೆ ಬಂಧನ

ಬೆಂಗಳೂರು: ಜರ್ಮನಿಯಿಂದ ಬೆಂಗಳೂರಿಗೆ ಎಂಡಿಎಂಎ ಡ್ರಗ್ಸ್​ ಆರ್ಡರ್ ಮಾಡಿದ್ದ ಐನಾತಿ ಮಹಿಳೆಯೊರ್ವಳನ್ನ ಎನ್​ಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ.

ಯೋಗಿತಾ ಬಂಧಿತ ಆರೋಪಿ. 3 ವರ್ಷದಿಂದ ರೇವ್ ಪಾರ್ಟಿಗಳಿಗೆ ಮಾದಕ ಸರಬರಾಜು ಮಾಡುತ್ತಿದ್ದ ಯೋಗಿತಾ, ಆಫ್ರಿಕನ್ ಪೆಡ್ಲರ್ಸ್ ಜೊತೆಗೂ ನಂಟು ಹೊಂದಿದ್ದಳು ಎನ್ನಲಾಗಿದೆ. ಜರ್ಮನಿಯಿಂದ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಪೋಸ್ಟ್ ಆಫೀಸ್ ವಿಳಾಸಕ್ಕೆ ಎಂಡಿಎಂಎ ಡ್ರಗ್ಸ್ ಕಳುಹಿಸಲಾಗಿತ್ತು.

blank

ಇದನ್ನೂ ಓದಿ: ಅತ್ಯಾಚಾರದ ಆರೋಪಿಗಳು ಹೊರರಾಜ್ಯದವರೆಂಬ ಶಂಕೆ; ತ.ನಾಡು, ಕೇರಳದತ್ತ ಹೊರಟ ಪೊಲೀಸ್?

ಎಂಡಿಎಂಎ ಇರುವುದು ಖಚಿತವಾಗುತ್ತಿದ್ದಂತೆ ಅಲರ್ಟ್ ಆಗಿದ್ದ ಎನ್.ಸಿ.ಬಿ. ಪಾರ್ಸಲ್ ಸ್ವೀಕರಿಸುತ್ತಿದ್ದಂತೆ ಯೋಗಿತಾಳನ್ನು ಬಂಧಿಸಿ ಪಾರ್ಸೆಲ್​ನ್ನು ವಶಪಡಿಸಿಕೊಳ್ಳಲಾಗಿದೆ. ಕಾರ್ಟನ್ ಬಾಕ್ಸ್​ನಲ್ಲಿ ಎಂಡಿಎಂಎ ಡ್ರಗ್ಸ್​ ಬಂದಿದ್ದು, ಪಾರ್ಸಲ್ ನಲ್ಲಿದ್ದ ಸ್ಯಾಂಡ್ ವಿಚ್ ಗ್ರಿಲ್, ಕಾಸ್ಮೆಟಿಕ್ಸ್ ನಲ್ಲಿ ಒಂದು ಕೆ.ಜಿ ಪ್ರಮಾಣದ ಎಂಡಿಎಂಎ ಡ್ರಗ್​ ಪತ್ತೆಯಾಗಿರುವುದಾಗಿ ನ್ಯೂಸ್​ಫಸ್ಟ್​ಗೆ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ: Breaking ಮೇಕೆದಾಟು ಯೋಜನೆಗೆ ಮತ್ತೆ ಅಡ್ಡಿ; ಸುಪ್ರೀಂ ಕೋರ್ಟ್​ ಮೆಟ್ಟಿಲೇರಿದ ತಮಿಳುನಾಡು

Source: newsfirstlive.com Source link