ಆರೋಪಿಗಳ ಬಂಧಿಸಲು ಟೈಮ್​​​ ಬೇಕು, ಎಷ್ಟು ದಿನ ಆಗುತ್ತೆ ಎಂದು ಹೇಳಕ್ಕಾಗಲ್ಲ; ಪ್ರವೀಣ್​ ಸೂದ್

ಆರೋಪಿಗಳ ಬಂಧಿಸಲು ಟೈಮ್​​​ ಬೇಕು, ಎಷ್ಟು ದಿನ ಆಗುತ್ತೆ ಎಂದು ಹೇಳಕ್ಕಾಗಲ್ಲ; ಪ್ರವೀಣ್​ ಸೂದ್

ಮೈಸೂರು: ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಸಾಮೂಹಿಕ ಅತ್ಯಾಚಾರ ಪ್ರಕರಣ ಸಂಬಂಧ ಪೊಲೀಸ್‌ ಮಹಾನಿರ್ದೇಶಕ ಪ್ರವೀಣ್‌ ಸೂದ್‌ ಸುದ್ದಿಗೋಷ್ಠಿ ನಡೆಸಿ ಮಾತಾಡಿದರು. ನಾವು ಪ್ರಕರಣದ ತನಿಖೆ ನಡೆಸುತ್ತಿದ್ದೇವೆ. ಯಾವುದೇ ಸುಳಿವು ಸಿಕ್ಕರೂ ನಾವು ಮಾಹಿತಿ ನೀಡೋದಿಲ್ಲ. ನಮ್ಮ ಬಳಿ ಟೆಕ್ನಿಕಲ್ ಮತ್ತು ಸೈನ್ಸ್​ ಎವಿಡೆನ್ಸ್​ ಇದೆ. ಸ್ವಲ್ಪ ಸಮಯ ಬೇಕು, ಎಷ್ಟು ದಿನ ಆಗಬಹುದು ಎಂದು ಹೇಳಲು ಸಾಧ್ಯವಿಲ್ಲ. ಇದು ಹೆಣ್ಣುಮಕ್ಕಳ ವಿಚಾರ, ತುಂಬಾ ಸೂಕ್ಷ್ಮವಾಗಿ ಇರಬೇಕಾಗುತ್ತದೆ ಎಂದರು.

ಪೊಲೀಸರು ಕ್ರೈಮ್​​ ನಡೆದ ಘಟನಾ ಸ್ಥಳ ಪರಿಶೀಲಿಸಿದ್ದೇವೆ. ಅಗತ್ಯ ಮಾಹಿತಿಗಳನ್ನು ಕಲೆ ಹಾಕಿದ್ದೇವೆ. ನಾವು ವೃತ್ತಿಪರ ಪೊಲೀಸರು, ಸರಿಯಾದ ತನಿಖೆ ನಡೆಸುತ್ತೇವೆ. ಸಂತ್ರಸ್ತೆ ಅತ್ಯಚಾರದ ಬಳಿಕ ಮಾನಸಿಕವಾಗಿ ಹಿಂಸೆ ಅನುಭವಿಸುತ್ತಿದ್ದಾರೆ. ಸಂತ್ರಸ್ತೆ ಪರಿಸ್ಥಿತಿ ಸುಧಾರಿಸಿದ ಬಳಿಕ ಪೊಲೀಸರಿಗೆ ಹೇಳಿಕೆ ನೀಡುತ್ತಾರೆ ಎಂದು ತಿಳಿಸಿದರು.

ಇದನ್ನೂ ಓದಿ: ನನಗೆ ನಂಬಿಕೆ ಇದೆ, ಪೊಲೀಸರು ಅತ್ಯಾಚಾರಿಗಳನ್ನು ಬಂಧಿಸಲಿದ್ದಾರೆ – ಗೃಹ ಸಚಿವ ಆರಗ ಜ್ಞಾನೇಂದ್ರ

Source: newsfirstlive.com Source link